ಲಂಡನ್: ಸಾಂಪ್ರದಾಯಿಕವಾಗಿ ಹೊಸ ವರ್ಷದಂದು ಬ್ರಿಟನ್ನಲ್ಲಿ ನೀಡಲಾಗುವ ಗೌರವ ಪಟ್ಟಿಯಲ್ಲಿ ಹವಾಮಾನ ಶೃಂಗಸಭೆ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಮೂಲದ ಮಾಜಿ ಸಚಿವ ಅಲೋಕ್ ಶರ್ಮಾ ನೈಟ್ಹುಡ್ ಗೌರವ ಪಡೆಯಲಿದ್ದಾರೆ. ಬ್ರಿಟನ್ ರಾಜ ಮೂರನೇ ಕಿಂಗ್ ಚಾರ್ಲ್ಸ್ ಅವರಿಗೂ ಗೌರವ ಸಿಗಲಿದೆ.
ಅಲೋಕ್ ಶರ್ಮಾ ಆಗ್ರಾ ಮೂಲದವರಾಗಿದ್ದಾರೆ. ಅಕ್ಟೋಬರ್ ವರೆಗೆ ಕ್ಯಾಬಿನೆಟ್ ಮಟ್ಟದ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅರ್ಥಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ವೈದ್ಯರು ಮತ್ತು ಸಾಮಾಜಿಕ ಹೋರಾಟಗಾರು ಹೀಗೆ ವಿವಿಧ ಕ್ಷೇತ್ರದಿಂದ 30 ಜನರಿಗೆ ನೈಟ್ಹುಡ್ ಗೌರವ ನೀಡಲಾಗುತ್ತಿದ್ದು, ಇದರಲ್ಲಿ ಭಾರತೀಯ ಮೂಲದ ಶರ್ಮಾ ಅವರು ಇದ್ದಾರೆ. ಯುಕೆ ಮತ್ತು ವಿದೇಶಗಳಾದ್ಯಂತ ಅವರ ಸಾರ್ವಜನಿಕ ಸೇವೆ ಮಾಡಿದವರಿಗೆ ಬ್ರಿಟಿಷ್ ರಾಜನ ಹೆಸರಿನಲ್ಲಿ ನೀಡಲಾದ ವಾರ್ಷಿಕ ಗೌರವ ನೈಟ್ಹುಡ್ ಆಗಿದೆ.
ಅಲೋಕ್ ಶರ್ಮಾ ಅವರು COP26 ನಾಯಕತ್ವ ವಹಿಸಿ ಹವಾಮಾನ ಬದಲಾವಣೆ ಎದುರಿಸಲು ನೀಡಿದ ಕೊಡುಗೆ ಹಾಗೂ ಭವಿಷ್ಯದಲ್ಲಿ ಹವಾಮಾನ ಬದಲಾವಣೆ ಪರಿಹರಿಸುವಲ್ಲಿ ಪ್ರಮುಖ ಪರಿಣಾಮ ಬೀರುವ ದೇಶಗಳೊಂದಿಗೆ ಐತಿಹಾಸಿಕ ಒಪ್ಪಂದ ಮಾಡುತ್ತಾರೆ. ಈ ಎಲ್ಲ ಸೇವೆ ಗುರುತಿಸಿ ಇವರಿಗೆ ನೈಟ್ಹುಡ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಬ್ರಿಟನ್ ವಿದೇಶಿ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ(FCDO) ತಿಳಿಸಿದೆ.
ಹವಾಮಾನದ ಥೀಮ್‌ಗೆ ಅನುಗುಣವಾಗಿ, ಪ್ರೊಫೆಸರ್ ಸರ್ ಪಾರ್ಥ ಸಾರಥಿ ದಾಸ್‌ಗುಪ್ತ ಅವರು ಅರ್ಥಶಾಸ್ತ್ರ ಮತ್ತು ನೈಸರ್ಗಿಕ ಪರಿಸರದ ಸೇವೆಗಳಿಗಾಗಿ ನೈಟ್ಸ್ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (GBE) ಅನ್ನು ಸ್ವೀಕರಿಸುತ್ತಿದ್ದಾರೆ. ಇವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಫ್ರಾಂಕ್ ರಾಮ್ಸೆ ಎಮೆರಿಟಸ್ ಆಫ್ ಎಕನಾಮಿಕ್ಸ್. ಅವರು ಜೀವವೈವಿಧ್ಯಕ್ಕಾಗಿ ಸಮಗ್ರ ಆರ್ಥಿಕ ಚೌಕಟ್ಟನ್ನು ರೂಪಿಸುವ ಸ್ವತಂತ್ರ ಜಾಗತಿಕ ವಿಮರ್ಶೆ ಮಾಡಿದ್ದರು. ಅಲ್ಲದೇ ದಿ ಎಕನಾಮಿಕ್ಸ್ ಆಫ್ ಬಯೋಡೈವರ್ಸಿಟಿ ಹೇಳಿದ್ದರು.
ವ್ಯಾಪಾರ ಮತ್ತು ಸಮಾನತೆಯ ಸೇವೆಗೆ ಹೆಸರಾದ ಭಾರತೀಯ ಮೂಲದ ಡಿಯಾಜಿಯೊದ ಮುಖ್ಯಸ್ಥರಾದ ಇವಾನ್ ಮ್ಯಾನುಯೆಲ್ ಮೆನೆಜಸ್ ಮತ್ತು ಮೆಡಿಕಲ್ ಲೀಡರ್‌ಶಿಪ್ ಮತ್ತು ಮ್ಯಾನೇಜ್‌ಮೆಂಟ್ ವಿಭಾಗದ ಅಧ್ಯಕ್ಷ ಮತ್ತು ಲೌಬರೋದಲ್ಲಿನ ಹೈಗೇಟ್ ಮೆಡಿಕಲ್ ಸೆಂಟರ್‌ನಲ್ಲಿ ಜನರಲ್ ಪ್ರಾಕ್ಟೀಷನರ್ ಆಗಿರುವ ಡಾ ಮಯೂರ್ ಕೇಶವಜಿ ಲಖಾನಿ ಅವರಿಗೂ ನೈಟ್ಹುಡ್ ಗೌರವ ಸಿಗಲಿದೆ.
ಎಂಡೋಕ್ರೈನ್ ಡಿಸಾರ್ಡರ್ಸ್ ಹೊಂದಿರುವ ಜನರಿಗೆ ಸೇವೆ ಮಾಡಿದ್ದಕ್ಕಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ವೆಂಗಲಿಲ್ ಕೃಷ್ಣ ಕುಮಾರ್ ಚಟರ್ಜಿ ಅವರಿಗೆ ಮತ್ತು ಸೇವೆಯಲ್ಲಿನ ಸಮಾನತೆ ಮತ್ತು ವೈವಿಧ್ಯತೆ ಗುರುತಿಸಿ ಬ್ರಿಟಿಷ್ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಒರಿಜಿನ್ (BAPIO)ನ ಅಧ್ಯಕ್ಷ ಡಾ ರಮೇಶ್ ದುಲಿಚಂದಭಾಯ್ ಮೆಹ್ತಾ ಅವರಿಗೆ ನ್ಯೂ ಕಮಾಂಡರ್ಸ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (CBE) ಗೌರವ ದೊರೆಯಲಿದೆ.
ಇತರರು ಯಾರು?: ಅಲ್ಲದೇ ಸಾರ್ವಜನಿಕ ಸೇವೆಗಾಗಿ ನಾಗೇಶ್ವರ ದ್ವಾರಂಪುಡಿ ರೆಡ್ಡಿ, ತಂತ್ರಜ್ಞಾನ ಕ್ಷೇತ್ರಕ್ಕೆ ಸೇವೆಗಾಗಿ ಡಾ.ಗುರ್ಡಿಯಲ್ ಸಿಂಗ್ ಸಂಘೇರಾ, ಶಿಕ್ಷಣ ಕ್ಷೇತ್ರದ ಸೇವೆಗಳಿಗಾಗಿ ಜತೀಂದರ್ ಕುಮಾರ್ ಶರ್ಮಾ, ಸಾಮಾಜಿಕ ಒಗ್ಗಟ್ಟಿನ ಸೇವೆಗಳಿಗಾಗಿ ಜಸ್ವಿರ್ ಸಿಂಗ್, ವೈದ್ಯಕೀಯ ಸೇವೆಗಳಿಗಾಗಿ ಪ್ರೊಫೆಸರ್ ಕೇಶವ್ ಸಿಂಘಾಲ್, ವೈದ್ಯಕೀಯ ಸಂಶೋಧನೆಗೆ ಸೇವೆಗಾಗಿ ನಿಶಿ ಚತುರ್ವೇದಿ, ಉನ್ನತ ಶಿಕ್ಷಣದ ಸೇವೆಗಳಿಗಾಗಿ ರವೀಂದರ್ ಗಿಲ್, ಚಾರಿಟಿ ಮತ್ತು ಸಮುದಾಯ ಸೇವೆಗಳಿಗಾಗಿ ಪುನೀತ್ ಗುಪ್ತಾ, ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಸೇವೆಗಳಿಗಾಗಿ ಶರೋನ್ ಕೌರ್ ಜಂಡು, ನಿರಾಶ್ರಿತರ ಏಕೀಕರಣದ ಸೇವೆಗಳಿಗಾಗಿ ಡಾ ಕೃಷ್ಣ ರೋಹನ್ ಕಂಡಿಯಾ ಮತ್ತು ಬ್ರಿಟಿಷ್ ಏಷ್ಯನ್ ಸಮುದಾಯದ ಸೇವೆಗಳಿಗಾಗಿ ಹಿತನ್ ಮೆಹ್ತಾ ಅವರಿಬಗೆ ಗೌರವ ದೊರೆಯುತ್ತಿದೆ.
ರಾಣಿ ಎಲಿಜಬೆತ್ II ಸೆಪ್ಟೆಂಬರ್‌ನಲ್ಲಿ ನಿಧನರಾದ ನಂತರ ಮೊದಲ ಬಾರಿಗೆ ನೈಟ್ಹುಡ್ ಗೌರವ ಪ್ರಶಸ್ತಿ ಬಿಡುಗಡೆಯಾಗಿದೆ ಎಂದು ಕ್ಯಾಬಿನೆಟ್ ಕಚೇರಿ ತಿಳಿಸಿದೆ.
ಇದನ್ನೂ ಓದಿ: ಪಿಎಂ ಮೋದಿ ತಾಯಿ ಹೀರಾಬೆನ್ ನಿಧನಕ್ಕೆ ಕಂಬನಿ ಮಿಡಿದ ಅಮೆರಿಕ ಅಧ್ಯಕ್ಷ ಬೈಡನ್