ETV Bharat / international

ಜಾಗತಿಕ ಆಹಾರ ಭದ್ರತೆ: ಭಾರತದ ಕೊಡುಗೆಗಳನ್ನು ವಿಶ್ವಸಂಸ್ಥೆಗೆ ವಿವರಿಸಿದ ಸ್ನೇಹಾ ದುಬೆ

ಜಾಗತಿಕ ಆಹಾರ ಭದ್ರತೆಯನ್ನು ಮುನ್ನಡೆಸುವಲ್ಲಿ ಭಾರತವು ತನ್ನ ಪಾತ್ರವನ್ನು ಸಮರ್ಥವಾಗಿ ವಹಿಸುತ್ತದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪ್ರಥಮ ಕಾರ್ಯದರ್ಶಿ ಸ್ನೇಹಾ ದುಬೆ ತಿಳಿಸಿದರು.

India will play its due role in advancing global food security, UN Security Council high level special event, First Secretary Sneha Dubey, global food security news, ಜಾಗತಿಕ ಆಹಾರ ಭದ್ರತೆಯಲ್ಲಿ ಭಾರತ ತನ್ನ ಪಾತ್ರವನ್ನು ವಹಿಸಿದೆ, ಯುಎನ್ ಸೆಕ್ಯುರಿಟಿ ಕೌನ್ಸಿಲ್ ಉನ್ನತ ಮಟ್ಟದ ವಿಶೇಷ ಕಾರ್ಯಕ್ರಮ, ಪ್ರಥಮ ಕಾರ್ಯದರ್ಶಿ ಸ್ನೇಹಾ ದುಬೆ, ಜಾಗತಿಕ ಆಹಾರ ಭದ್ರತೆ ಸುದ್ದಿ,
ಮತ್ತೊಮ್ಮೆ ಎಲ್ಲರ ಗಮನ ಸೆಳೆದ ಸ್ನೇಹಾ
author img

By

Published : Jul 19, 2022, 8:44 AM IST

ವಿಶ್ವಸಂಸ್ಥೆ(ನ್ಯೂಯಾರ್ಕ್ ಸಿಟಿ): ಜಾಗತಿಕ ಆಹಾರ ಭದ್ರತೆ, ಸಮಾನತೆ, ಸಹಾನುಭೂತಿಯನ್ನು ಪ್ರದರ್ಶಿಸುವುದು ಹಾಗು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವಲ್ಲಿ ಜಾಗತಿಕವಾಗಿ ಭಾರತ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಸುತ್ತಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಪ್ರಥಮ ಕಾರ್ಯದರ್ಶಿ ಸ್ನೇಹಾ ದುಬೆ ವಿವರಿಸಿದರು.

ಭಾರತ ವಿಶ್ವದ ಅತಿದೊಡ್ಡ ಆಹಾರ ಆಧಾರಿತ ಸುರಕ್ಷತಾ ಕಾರ್ಯಕ್ರಮ ನಡೆಸುತ್ತಿದೆ. ಕೋವಿಡ್​ ಸಮಯದಲ್ಲಿ 800 ಮಿಲಿಯನ್ ಜನರಿಗೆ ಆಹಾರ ನೆರವು ಮತ್ತು 400 ಮಿಲಿಯನ್ ಜನರಿಗೆ ನಗದು ವರ್ಗಾವಣೆ ಮಾಡಿದೆ. ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಆರೋಗ್ಯಕರ ಊಟವನ್ನು ಒದಗಿಸುವುದನ್ನು ಖಾತ್ರಿಪಡಿಸುವ ಮೂಲಕ ಶಾಲಾ ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸುತ್ತಿದೆ.

ವಿಶೇಷವಾಗಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ದುರ್ಬಲ ವರ್ಗದ ಗುಂಪುಗಳಿಗೆ ಪೌಷ್ಟಿಕಾಂಶದ ಅಭಿಯಾನವನ್ನು ಸಹ ಪ್ರಾರಂಭಿಸಲಾಗಿದೆ. ನಮ್ಮ ಫಾರ್ಮ್-ಟು-ಟೇಬಲ್ ಡಿಜಿಟಲ್ ಉಪಕ್ರಮಗಳಲ್ಲಿ ರೈತರಿಗಿರುವ ವೆಬ್‌ ಪೋರ್ಟಲ್‌ಗಳು, ಕೃಷಿ-ಸಲಹೆ ಸೇವೆಗಳು, ಕೃಷಿ ಸರಕುಗಳ ಆನ್‌ಲೈನ್ ಜಾಲ, ಬೆಲೆ ಮುನ್ಸೂಚನೆ ಮತ್ತು ಗುಣಮಟ್ಟಕ್ಕಾಗಿ ಬ್ಲಾಕ್‌ಚೈನ್ ತಂತ್ರಜ್ಞಾನದ ಬಳಕೆ ಸೇರಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಗ್ರಾಮೀಣ ಬಡತನ ನಿರ್ಮೂಲನೆಗಾಗಿ ವಿಶ್ವಸಂಸ್ಥೆಯ ನಿರ್ಣಯದ ಪರ ಮತ ​​ಚಲಾಯಿಸಿದ ಭಾರತ

ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತವು ಅಲ್ಲಿನ ಜನರಿಗೆ 50,000 ಮೆಟ್ರಿಕ್ ಟನ್ ಗೋಧಿ ದಾನ ಮಾಡುತ್ತಿದೆ. 10,000 ಟನ್ ಅಕ್ಕಿ ಮತ್ತು ಗೋಧಿಯ ಅನುದಾನವನ್ನು ಒಳಗೊಂಡಂತೆ ಮ್ಯಾನ್ಮಾರ್‌ಗೂ ಮಾನವೀಯ ಬೆಂಬಲ ಮುಂದುವರೆಸಿದೆ. ಆರ್ಥಿಕ ಸಂಕಷ್ಟದಲ್ಲಿರುವ ನೆರೆಯ ಶ್ರೀಲಂಕಾಕ್ಕೆ ಆಹಾರ ನೆರವು ಸೇರಿದಂತೆ ಹಣಕಾಸು ಸಹಾಯವನ್ನೂ ಭಾರತ ಮಾಡುತ್ತಿದೆ ಎಂದು ದುಬೆ ತಿಳಿಸಿದರು.

ಕಳೆದ ಮೂರು ತಿಂಗಳಲ್ಲಿ ಭಾರತ 2,50,000 ಟನ್‌ಗೂ ಹೆಚ್ಚು ಗೋಧಿಯನ್ನು ಯೆಮನ್‌ ದೇಶಕ್ಕೆ ರಫ್ತು ಮಾಡಿದೆ. ಜಾಗತಿಕ ಆಹಾರ ಭದ್ರತೆಯ ಕಾರಣಕ್ಕೆ ನಾವು ಬದ್ಧವಾಗಿದ್ದೇವೆ ಮತ್ತು ವರ್ಷಗಳಲ್ಲಿ ವಿವಿಧ ಮಾನವೀಯ ಬಿಕ್ಕಟ್ಟುಗಳಿಗೆ ಪ್ರತಿಕ್ರಿಯೆಯಾಗಿ ವಿಶ್ವಸಂಸ್ಥೆಯ ಕೇಂದ್ರ ತುರ್ತು ಪ್ರತಿಕ್ರಿಯೆ ನಿಧಿ (CERF) ಮತ್ತು UNOCHA ಗೂ ಕೊಡುಗೆ ನೀಡಿದ್ದೇವೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.