ETV Bharat / international

ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಭಾರತದ ಪ್ರಗತಿ: ವಿಶ್ವಸಂಸ್ಥೆಯ ವಾರ್ಷಿಕ ಕಳಪೆ ವರದಿಯಿಂದ ಹೊರಕ್ಕೆ

author img

By

Published : Jun 29, 2023, 10:18 AM IST

ಭಾರತದ ಛತ್ತೀಸ್‌ಗಢ, ಅಸ್ಸೋಂ, ಜಾರ್ಖಂಡ್, ಒಡಿಶಾ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮಕ್ಕಳ ರಕ್ಷಣಾ ಸುಧಾರಿತ ಕ್ರಮಗಳು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಗ ರಚನೆ ಮಾಡಿರುವುದನ್ನು ವಿಶ್ವಸಂಸ್ಥೆ ಬಹುವಾಗಿ ಮೆಚ್ಚಿಕೊಂಡಿದೆ.

ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಭಾರತ ಪ್ರಗತಿ
ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಭಾರತ ಪ್ರಗತಿ

ವಿಶ್ವಸಂಸ್ಥೆ: ಭಾರತದಲ್ಲಿ ಮಕ್ಕಳ ರಕ್ಷಣೆ ಮತ್ತು ಭದ್ರತೆಯ ಪರಿಸ್ಥಿತಿ ಉತ್ತಮವಾಗಿರುವುದನ್ನು ವಿಶ್ವಸಂಸ್ಥೆ ಗುರುತಿಸಿದೆ. 'ಮಕ್ಕಳ ಮೇಲೆ ಸಶಸ್ತ್ರ ಸಂಘರ್ಷದ ಪ್ರಭಾವ'ದ ವಾರ್ಷಿಕ ವರದಿಯಿಂದ ಭಾರತವನ್ನು ಕೈಬಿಟ್ಟಿದೆ. ಇದೇ ವೇಳೆ, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಭಾರತ ಮಕ್ಕಳ ರಕ್ಷಣೆಗೆ ಸೂಕ್ತ ರಕ್ಷಣೆ ಕೈಗೊಂಡಿದೆ ಎಂದು ಹಾಡಿ ಹೊಗಳಿದ್ದಾರೆ.

ಭಾರತದಲ್ಲಿ ಮಕ್ಕಳು ಶಸ್ತ್ರಾಸ್ತ್ರ ಬಳಕೆ ಮತ್ತು ಆತಂಕದಿಂದ ದೂರವಿದ್ದಾರೆ. ಇದು ಅಲ್ಲಿನ ಮಕ್ಕಳ ಅಭಿವೃದ್ಧಿ ಮತ್ತು ಸುರಕ್ಷತೆಯನ್ನು ಸೂಚಿಸುತ್ತದೆ. ಹೀಗಾಗಿ ವಿಶ್ವಸಂಸ್ಥೆ ವಾರ್ಷಿಕವಾಗಿ ಸಿದ್ಧಪಡಿಸುವ ಪಟ್ಟಿಯಿಂದ ಭಾರತವನ್ನು ಕೈಬಿಡಲಾಗಿದೆ ಎಂದು ಆಂಟೋನಿಯೋ ಗುಟೆರೆಸ್​ ಹೇಳಿದರು.

ವರದಿಯಲ್ಲೇನಿದೆ?: ಮಕ್ಕಳು ಮತ್ತು ಸಶಸ್ತ್ರ ಸಂಘರ್ಷದ ಕುರಿತು 2023 ರ ವರದಿಯಲ್ಲಿ ವಿಶ್ವಸಂಸ್ಥೆ ಮುಖ್ಯಸ್ಥರು ಹೇಳಿದಂತೆ, "ಮಕ್ಕಳ ರಕ್ಷಣೆಗಾಗಿ ಸರ್ಕಾರ ತೆಗೆದುಕೊಂಡ ಕ್ರಮಗಳು ನಿಖರವಾಗಿವೆ. ಇದು 2023 ರಲ್ಲಿ ಭಾರತವನ್ನು ವರದಿಯಿಂದ ತೆಗೆದುಹಾಕಲಾಗಿದೆ" ಎಂದು ಹೇಳಿದರು. ವಿಶ್ವಸಂಸ್ಥೆಯ ಭಾಗವಹಿಸುವಿಕೆಯೊಂದಿಗೆ ಸರ್ಕಾರ ಕಳೆದ ನವೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಕ್ಕಳ ರಕ್ಷಣೆಯನ್ನು ಬಲಪಡಿಸುವ ಕಾರ್ಯಾಗಾರವನ್ನು ನಡೆಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಕ್ಕಳ ರಕ್ಷಣೆಗಾಗಿ ಸಶಸ್ತ್ರ ಮತ್ತು ಭದ್ರತಾ ಪಡೆಗಳ ತರಬೇತಿ, ಮಕ್ಕಳ ಮೇಲೆ ಮಾರಕ ಮತ್ತು ಮಾರಕವಲ್ಲದ ಶಕ್ತಿಯ ಬಳಕೆಯನ್ನು ನಿಷೇಧಿಸುವುದು, ಪೆಲೆಟ್ ಗನ್‌ಗಳ ಬಳಕೆ ಕೊನೆಗೊಳಿಸುವುದು, ಮಕ್ಕಳನ್ನು ಕೊನೆಯ ಅಸ್ತ್ರವಾಗಿ ಬಂಧನಕ್ಕೆ ಒಳಪಡಿಸಲಾಗುತ್ತದೆ ಎಂದು ಗುಟೆರೆಸ್ ವರದಿಯಲ್ಲಿ ತಿಳಿಸಿದ್ದಾರೆ.

ಎಲ್ಲಾ ರೀತಿಯ ದುಷ್ಕೃತ್ಯಗಳನ್ನು ತಡೆಗಟ್ಟುವ ಕ್ರಮಗಳ ಅನುಷ್ಠಾನ ಮತ್ತು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯು ದೇಶದಲ್ಲಿ ನಿಖರ ಅನುಷ್ಠಾನವನ್ನು ವಿಶ್ವಸಂಸ್ಥೆ ಗುರುತಿಸಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಕ್ಕಳ ಮತ್ತು ಸಶಸ್ತ್ರ ಸಂಘರ್ಷದ ಪ್ರಧಾನ ಕಾರ್ಯದರ್ಶಿ ವರ್ಜೀನಿಯಾ ಗಂಬಾ, ಕಳೆದ 2 ವರ್ಷಗಳಿಂದ "ನಾವು ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಸಶಸ್ತ್ರ ಬಳಕೆಗಳ ನಿಷೇಧದಂತಹ ಕಟ್ಟುನಿಟ್ಟಿನ ನಿರ್ಧಾರಗಳನ್ನು ಭಾರತ ಕೈಗೊಂಡಿದೆ. ಆದಾಗ್ಯೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮಕ್ಕಳ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇನೆ. ಮಕ್ಕಳ ರಕ್ಷಣೆಯನ್ನು ಬಲಪಡಿಸಲು ಭಾರತ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಛತ್ತೀಸ್‌ಗಢ, ಅಸ್ಸೋಂ, ಜಾರ್ಖಂಡ್, ಒಡಿಶಾ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮಕ್ಕಳ ರಕ್ಷಣಾ ಸುಧಾರಿತ ಕ್ರಮಗಳು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಗ ರಚನೆ ಮಾಡಿರುವುದನ್ನು ವಿಶ್ವಸಂಸ್ಥೆ ಬಹುವಾಗಿ ಮೆಚ್ಚಿಕೊಂಡಿದೆ.

2022 ರ ಸಾಲಿನ ವರದಿ: 2022 ರ ಸಾಲಿನ ವರದಿಯು ಭಾರತವನ್ನು ತೀವ್ರ ಕಳವಳಕಾರಿ ಎಂದು ಗುರುತಿಸಿತ್ತು. ದೇಶದಲ್ಲಿ ಮಕ್ಕಳ ರಕ್ಷಣೆ, ಭದ್ರತೆ ಬಗ್ಗೆ ಚಕಾರವೆತ್ತಿತ್ತು. ಜಾಗತಿಕವಾಗಿ 2022 ರಲ್ಲಿ ಮಕ್ಕಳು ಸಶಸ್ತ್ರ ಸಂಘರ್ಷದಿಂದ ಪ್ರಭಾವಿತರಾಗಿದ್ದರು. 2021 ಕ್ಕೆ ಹೋಲಿಸಿದರೆ ಗಂಭೀರ ಕೃತ್ಯಗಳಿಂದ ಪ್ರಭಾವಿತರಾಗಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ಗುಟೆರೆಸ್​ ಹೇಳಿದ್ದರು.

ವಿಶ್ವಸಂಸ್ಥೆಯು 27,180 ಗಂಭೀರ ಕೃತ್ಯಗಳನ್ನು ಪರಿಶೀಲಿಸಿದೆ. ಅದರಲ್ಲಿ 2022 ರಲ್ಲಿಯೇ 24,300 ಪ್ರಕರಣಗಳು ನಡೆದಿದ್ದವು. ಇವು 8,890 ಮಕ್ಕಳ ಮೇಲೆ ಪರಿಣಾಮ ಬೀರಿವೆ (ಇದರಲ್ಲಿ 13,469 ಹುಡುಗರು, 4,638 ಹುಡುಗಿಯರು) ಅತಿ ಹೆಚ್ಚು ಅಂದರೆ 8,631 ತೀವ್ರ ಕಾನೂನು ಉಲ್ಲಂಘನೆ ಪ್ರಕರಣಗಳು ನಡೆದಿವೆ. ಅದರಲ್ಲಿ ಮಕ್ಕಳ ಹತ್ಯೆ (2,985) ಮತ್ತು ಅಂಗವಿಕಲತೆ (5,655), 7,622 ವಿವಿಧ ಕಾರಣಗಳಿಗೆ ಮಕ್ಕಳ ಬಳಕೆ ಮತ್ತು 3,985 ಮಕ್ಕಳ ಅಪಹರಣ ಪ್ರಕರಣಗಳಾಗಿವೆ.

ಇದನ್ನೂ ಓದಿ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ: ಇಬ್ಬರು ಸಾವು, 4 ಮಂದಿಗೆ ಗಾಯ..ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.