ವಾಷಿಂಗ್ಟನ್, ಡಿಸಿ(ಅಮೆರಿಕ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಐತಿಹಾಸಿಕ ಭಾಷಣದಲ್ಲಿ "ವಿವಿಧತೆಯಲ್ಲಿ ಭಾರತದ ಏಕತೆಯನ್ನು" ಎತ್ತಿ ತೋರಿಸಿದರು. "ಭಾರತವು ಪ್ರಪಂಚದ ಎಲ್ಲಾ ನಂಬಿಕೆಗಳಿಗೆ ನೆಲೆಯಾಗಿದೆ ಮತ್ತು ನಾವು ಆ ಎಲ್ಲ ನಂಬಿಕೆಯನ್ನು ಆಚರಿಸುತ್ತೇವೆ. ಭಾರತದಲ್ಲಿ, ವೈವಿಧ್ಯತೆ ನೈಸರ್ಗಿಕ ಜೀವನ ವಿಧಾನವಾಗಿದೆ. ಇಂದು ಜಗತ್ತು ಭಾರತದ ಬಗ್ಗೆ ಹೆಚ್ಚು ಹೆಚ್ಚು ತಿಳಿಯಲು ಬಯಸುತ್ತದೆ" ಎಂದು ಪ್ರಧಾನಿ ಮೋದಿ ಭಾರತದ ಬಗ್ಗೆ ಹೆಮ್ಮೆಯಿಂದಲೇ ಭಾಷಣ ಮಾಡಿದ್ದಾರೆ.
ನಾವು ಒಂದೇ ಧ್ವನಿಯಲ್ಲಿ ಮಾತನಾಡುತ್ತೇವೆ: ಭಾರತೀಯ ವೈವಿಧ್ಯತೆಯ ಬಗ್ಗೆ ಮಾತನಾಡಿದ ಮೋದಿ, "ನಮ್ಮಲ್ಲಿ 2500 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ, ಸುಮಾರು 20 ವಿವಿಧ ಪಕ್ಷಗಳು ಭಾರತದ ವಿವಿಧ ರಾಜ್ಯಗಳನ್ನು ಆಳುತ್ತವೆ. ನಮ್ಮಲ್ಲಿ 22 ಅಧಿಕೃತ ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳಿವೆ, ಆದರೂ ನಾವು ಒಂದೇ ಧ್ವನಿಯಲ್ಲಿ ಮಾತನಾಡುತ್ತೇವೆ. ಪ್ರತಿ 100 ಮೈಲುಗಳಿಗೆ ನಮ್ಮ ಪಾಕಪದ್ಧತಿಯು ದೋಸೆಯಿಂದ ಆಲೂ ಪರಾಠದವರೆಗೆ ಬದಲಾಗುತ್ತದೆ." ಇಂದು ಜಗತ್ತು ಭಾರತದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸುತ್ತಿದೆ ಎಂದರು.
ಭಾರತದ 1.4 ಶತಕೋಟಿ ಜನರಿಗೆ ಕೃತಜ್ಞತೆ: "ನಾನು ಈ ಮನೆಯಲ್ಲೂ ಆ ಕುತೂಹಲವನ್ನು ನೋಡುತ್ತೇನೆ. ಕಳೆದ ದಶಕದಲ್ಲಿ ಅಮೆರಿಕ ಕಾಂಗ್ರೆಸ್‌ನ ಸುಮಾರು 100 ಸದಸ್ಯರನ್ನು ಸ್ವೀಕರಿಸಲು ನಾವು ಗೌರವಿಸಿದ್ದೇವೆ. ಪ್ರತಿಯೊಬ್ಬರೂ ಭಾರತದ ಅಭಿವೃದ್ಧಿ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಬಯಸುತ್ತಾರೆ. ಅಮೆರಿಕ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡುವುದು ದೊಡ್ಡ ಗೌರವವಾಗಿದೆ. ಎರಡು ಬಾರಿ ಈ ಅವಕಾಶ ಸಿಕ್ಕಿದ್ದು, ಇದು ಅಸಾಧಾರಣ ಸುಯೋಗವಾಗಿದೆ. ಈ ಗೌರವಕ್ಕಾಗಿ ನಾನು ಭಾರತದ 1.4 ಶತಕೋಟಿ ಜನರಿಗೆ ನನ್ನ ಆಳವಾದ ಕೃತಜ್ಞತೆ ಸಲ್ಲಿಸುತ್ತೇನೆ. ಇಲ್ಲಿ ಇಂದು 2016 ರಲ್ಲಿ ನನ್ನ ಭಾಷಣದ ವೇಳೆ ಇದ್ದ ಜನರಲ್ಲಿ ಈಗ ಅರ್ಧದಷ್ಟು ಜನರು ಇಲ್ಲಿದ್ದೀರಿ, ಹಾಗೇ ನನ್ನ ಹಳೆಯ ಸ್ನೇಹಿತರ ಉತ್ಸಾಹವನ್ನು ನಾನು ನೋಡುತ್ತಿದ್ದೇನೆ ಮತ್ತು ಇನ್ನರ್ಧದಲ್ಲಿ ಹೊಸ ಸ್ನೇಹಿತರು ಎಂದು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಭಾಷಣ ಮುಂದುವರೆದು ಮೋದಿಯವರು ತಾಳ್ಮೆ, ಮನವೊಲಿಕೆ ಮತ್ತು ನೀತಿಯ ಕದನಗಳನ್ನು ಮತ್ತಷ್ಟು ವಿವರಿಸಿದರು. "ನಾನು ತಾಳ್ಮೆ, ಮನವೊಲಿಕೆ ಮತ್ತು ನೀತಿಯ ಯುದ್ಧಗಳಿಗೆ ಸಂಬಂಧಿಸಬಲ್ಲೆ. ವಿಚಾರಗಳು ಮತ್ತು ಸಿದ್ಧಾಂತದ ಚರ್ಚೆಯನ್ನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಎರಡು ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನು ಆಚರಿಸಲು ನೀವು ಒಟ್ಟಿಗೆ ಬಂದಿರುವುದನ್ನು ನೋಡಲು ನನಗೆ ಸಂತೋಷವಾಗಿದೆ, ”ಎಂದು ಪಿಎಂ ಸಂತಸ ವ್ಯಕ್ತಪಡಿಸಿದರು.
ಅಮೆರಿಕದಲ್ಲಿ ರಾಜಕೀಯದಲ್ಲಿ ಭಾರತೀಯ - ಅಮೆರಿಕನ್ನರ ಸಕ್ರಿಯ ಪಾಲ್ಗೊಳ್ಳುವಿಕೆಯ ಕುರಿತು ಮಾತನಾಡಿದ ಅವರು, ಅಮೆರಿಕದ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರನ್ನು ಉಲ್ಲೇಖಿಸಿ "ಸಮೋಸಾ ಕಾಕಸ್ ಮನೆಯ ಪರಿಮಳವಾಗಿದೆ" ಎಂದು ಹೇಳಿದರು. ಅಮೆರಿಕದ ಅಡಿಪಾಯವು ಸಮಾನತೆಯ ದೃಷ್ಟಿಕೋನದಿಂದ ಪ್ರೇರಿತವಾಗಿದೆ ಎಂದರು.
(ಸಮೋಸಾ ಕಾಕಸ್ ಎಂದರೇ, ಯುನೈಟೆಡ್ ಸ್ಟೇಟ್ಸ್‌ನ ಇಲಿನಾಯ್ಸ್‌ನ 8 ನೇ ಕಾಂಗ್ರೆಷನಲ್ ಜಿಲ್ಲೆಯ ಪ್ರತಿನಿಧಿಯಾದ ಸುಬ್ರಮಣಿಯನ್ ರಾಜಾ ಕೃಷ್ಣಮೂರ್ತಿ ಅವರು ಭಾರತೀಯ - ಅಮೆರಿಕನ್ ಸಮುದಾಯದವರ ರಾಜಕೀಯ ಬೆಳವಣಿಗೆ ಕುರಿತು ವಿವರಿಸಲು 'ಸಮೋಸಾ ಕಾಕಸ್' ಎಂಬ ಪದವನ್ನು ಜನಪ್ರಿಯಗೊಳಿಸಿದರು.)
ಭಾರತ ಪ್ರಜಾಪ್ರಭುತ್ವದ ತಾಯಿ : ಪ್ರಜಾಪ್ರಭುತ್ವವು ನಮ್ಮ ಪವಿತ್ರ ಮತ್ತು ಹಂಚಿಕೆಯ ಮೌಲ್ಯಗಳಲ್ಲಿ ಒಂದಾಗಿದೆ ಎಂದು ಹೇಳಿರುವ ಪ್ರಧಾನಿ, ಇದು ದೀರ್ಘಕಾಲದವರೆಗೆ ವಿಕಸನಗೊಂಡು ವ್ಯವಸ್ಥೆಯನ್ನು, ವಿವಿಧ ರೂಪಗಳನ್ನು ತೆಗೆದುಕೊಂಡಿದೆ. ಪ್ರಜಾಪ್ರಭುತ್ವವು ನಮ್ಮ ಪವಿತ್ರ ಮತ್ತು ಹಂಚಿಕೆಯ ಮೌಲ್ಯಗಳಲ್ಲಿ ಒಂದಾಗಿದೆ. ಇತಿಹಾಸದ ಉದ್ದಕ್ಕೂ, ಒಂದು ವಿಷಯ ಸ್ಪಷ್ಟವಾಗಿದೆ, ಪ್ರಜಾಪ್ರಭುತ್ವವು ಸಮಾನತೆ ಮತ್ತು ಘನತೆಯನ್ನು ಬೆಂಬಲಿಸುವ ಮನೋಭಾವವಾಗಿದೆ. ಚರ್ಚೆ ಮತ್ತು ಪ್ರವಚನವನ್ನು ಸ್ವಾಗತಿಸುವ ವಿಚಾರವೇ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವವು ಚಿಂತನೆ ಮತ್ತು ಅಭಿವ್ಯಕ್ತಿಗೆ ರೆಕ್ಕೆಗಳನ್ನು ನೀಡುವ ಸಂಸ್ಕೃತಿಯಾಗಿದೆ. ಭಾರತವು ಅನಾದಿ ಕಾಲದಿಂದಲೂ ಇಂತಹ ಮೌಲ್ಯಗಳನ್ನು ಹೊಂದಲು ಧನ್ಯವಾಗಿದೆ. ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಜಾಪ್ರಭುತ್ವ ವೈವಿಧ್ಯತೆಯ ಆಚರಣೆ: ಭಾರತ ಮತ್ತು ಅಮೆರಿಕ ಎರಡೂ ದೇಶಗಳು ಉದ್ದ ಮತ್ತು ಅಗಲವಾದ ರಸ್ತೆಯಲ್ಲಿ ಪ್ರಯಾಣಿಸುವ ಮೂಲಕ ಸ್ನೇಹದ ಪರೀಕ್ಷೆಯನ್ನು ಮಾಡಿದೆ. 2016 ರಲ್ಲಿ ನಾನು ಬಂದಿದ್ದಾಗಿನಕ್ಕಿಂತಲೂ ಈಗ ಇರುವುದಕ್ಕೂ ಅಮೆರಿಕ ಬಹಳಷ್ಟು ಬದಲಾಗಿದೆ. ಆದರೆ, ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವನ್ನು ಗಾಢಗೊಳಿಸುವ ನಮ್ಮ ಬದ್ಧತೆಯಂತೆ ಬಹಳಷ್ಟು ವಿಚಾರಗಳು ಹಾಗೆಯೇ ಉಳಿದಿವೆ. ಕಳೆದ ವರ್ಷ ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಿದೆ.
ನಮಗೆ ಪ್ರತಿಯೊಂದು ಮೈಲಿಗಲ್ಲು ಮುಖ್ಯ. ಸಾವಿರ ವರ್ಷಗಳ ವಿದೇಶಿ ಆಳ್ವಿಕೆಯ ನಂತರ ನಾವು ನಮ್ಮ 75 ವರ್ಷಗಳ ಸ್ವಾತಂತ್ರ್ಯದ ಗಮನಾರ್ಹ ಪ್ರಯಾಣವನ್ನು ಒಂದಲ್ಲ ಒಂದು ರೂಪದಲ್ಲಿ ಆಚರಿಸಿದ್ದೇವೆ. ಇದು ಕೇವಲ ಪ್ರಜಾಪ್ರಭುತ್ವದ ಆಚರಣೆಯಾಗಿರದೇ ವೈವಿಧ್ಯತೆಯ ಆಚರಣೆಯಾಗಿದೆ ಎಂದು ಭಾರತದ ಬಗ್ಗೆ ಸಾರ್ಥಕತೆಯ ನುಡಿಗಳನ್ನು ಆಡಿದರು.
ಭಾರತವು 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ: ಮುಂದುವರೆದು, ಅಮೆರಿಕ ಅತ್ಯಂತ ಹಳೆಯದಾದ ಮತ್ತು ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳು. ನಮ್ಮ ಪಾಲುದಾರಿಕೆಯು ಪ್ರಜಾಪ್ರಭುತ್ವದ ಭವಿಷ್ಯವನ್ನು ಉತ್ತಮಗೊಳಿಸುತ್ತದೆ. ಒಟ್ಟಾಗಿ, ನಾವು ಜಗತ್ತಿಗೆ ಉತ್ತಮ ಭವಿಷ್ಯವನ್ನು ಮತ್ತು ಭವಿಷ್ಯಕ್ಕೆ ಉತ್ತಮ ಜಗತ್ತನ್ನು ನೀಡುತ್ತೇವೆ. ನಾನು ಪ್ರಧಾನಿಯಾಗಿ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದಾಗ, ಭಾರತವು ವಿಶ್ವದ 10 ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇಂದು ಭಾರತವು 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮತ್ತು ಭಾರತವು ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಭಾರತವು ಬೆಳೆದಾಗ ಇಡೀ ಜಗತ್ತು ಬೆಳೆಯುತ್ತದೆ ಎಂದರು.
ನಮ್ಮ ದೃಷ್ಟಿ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್. ಇದರರ್ಥ, ಪ್ರತಿಯೊಬ್ಬರ ಬೆಳವಣಿಗೆಗಾಗಿ, ಎಲ್ಲರ ನಂಬಿಕೆ ಮತ್ತು ಪ್ರತಿಯೊಬ್ಬರ ಪ್ರಯತ್ನದೊಂದಿಗೆ ಒಟ್ಟಾಗಿ ಈ ದೃಷ್ಟಿಕೋನವು ಪ್ರಮಾಣ ಮತ್ತು ವೇಗದೊಂದಿಗೆ ಹೇಗೆ ಕಾರ್ಯರೂಪಕ್ಕೆ ಬರುತ್ತಿದೆ ಎಂಬುದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಒಟ್ಟಾರೆ ಭಾರತದ ಬಗೆಗಿನ ಗೌರವ, ಪ್ರೀತಿ, ಭಾರತದ ಸಾಮರ್ಥ್ಯವನ್ನು ತಮ್ಮ ಭಾಷಣದ ಮೂಲಕ ಅಮೆರಿಕನ್ನರಿಗೆ ಹೆಮ್ಮೆಯ ಪ್ರಧಾನಿ ನರೇಂದ್ರ ಮೊದಿಯವರು ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ಆಫ್ರಿಕಾವನ್ನು ಶಾಶ್ವತ ಜಿ 20 ಸದಸ್ಯರನ್ನಾಗಿ ಸೇರಿಸುವ ಪ್ರಸ್ತಾಪಕ್ಕೆ ಒಪ್ಪಿಗೆ: ಬೈಡನ್ಗೆ ಮೋದಿ ಧನ್ಯವಾದ