ETV Bharat / international

ಭಾರತ ಒಂದು ಅದ್ಭುತ ಪ್ರಜಾಪ್ರಭುತ್ವ: ಮೋದಿ ಭೇಟಿಗೂ ಮುನ್ನ ಅಮೆರಿಕ ಹೊಗಳಿಕೆ - ಭಾರತದ ಒಂದು ಅದ್ಭುತ ಪ್ರಜಾಪ್ರಭುತ್ವ

ಅಮೆರಿಕ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಹಾಡಿ ಹೊಗಳಿದ್ದಾರೆ.

ಜಾನ್ ಕಿರ್ಬಿ
ಜಾನ್ ಕಿರ್ಬಿ
author img

By

Published : Jun 6, 2023, 9:09 AM IST

ವಾಷಿಂಗ್ಟನ್(ಅಮೆರಿಕ): ಭಾರತವು ರೋಮಾಂಚಕ ಪ್ರಜಾಪ್ರಭುತ್ವವಾಗಿದೆ ಮತ್ತು ನವದೆಹಲಿಗೆ ಹೋದ ಯಾರಾದರು ಅದನ್ನು ಸ್ವತಃ ನೋಡಬಹುದು ಎಂದು ಅಮೆರಿಕಾದ ಶ್ವೇತಭವನ ಸೋಮಾವಾರ ಹೇಳಿದೆ. ಈ ಹೇಳಿಕೆಯಿಂದ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಇರುವ ಕಳವಳವನ್ನು ತಳ್ಳಿ ಹಾಕಿದಂತೆ ಕಂಡು ಬಂದಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಈ ತಿಂಗಳ ಅಂತ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುನ್ನ ಭಾರತದ ಪ್ರಜಾಪ್ರಭುತ್ವ, ಇತರ ರಾಷ್ಟ್ರಗಳಿಗೆ ಭಾರತದ ಅಗತ್ಯತೆ ಬಗ್ಗೆ ಅಮೆರಿಕ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಇಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಭಾರತದ ಪ್ರಜಾಪ್ರಭುತ್ವದ ಕುರಿತು ತಿಳಿಸಿದ್ದಾರೆ. 'ನಿಮಗೆ ತಿಳಿದಿರುವ ಯಾರಾದರೂ, ನವದೆಹಲಿಗೆ ಹೋದರೆ ಪ್ರಜಾಪ್ರಭುತ್ವದ ರೋಮಾಂಚಕತೆ, ಅದ್ಭುತವನ್ನು ಸ್ವತಃ ನೋಡಬಹುದು. ಮತ್ತು ಇದರಿಂದ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಶಕ್ತಿ ಮತ್ತು ಆರೋಗ್ಯ, ಅಭಿವೃದ್ದಿಯು ಚರ್ಚೆಯ ಭಾಗವಾಗಲಿದೆ ಎಂದು ನಾನು ನಿರೀಕ್ಷಿಸುತ್ತೇನೆ' ಎಂದು ಹೇಳಿದ್ದಾರೆ.‘

ಇದನ್ನೂ ಓದಿ: ಶ್ವೇತಭವನದ ಮೇಲೆ ಅನುಮಾನಾಸ್ಪದ ಜೆಟ್​ ಹಾರಾಟ: ಬೆನ್ನಟ್ಟಿದ ಎಫ್16ರ ವೇಗದ ಸದ್ದಿಗೆ ಬೆಚ್ಚಿಬಿದ್ದ ಜನ!!

ಮುಂದುವರೆದು ಮಾಧ್ಯಮದವರ ಪ್ರಶ್ನೆಗೆ ಕಿರ್ಬಿಯವರು, ನಾವು ಎಂದಿಗೂ ನಮ್ಮ ಸ್ನೇಹಿತರೊಡನೆ ನಮ್ಮಲ್ಲಿ ಇರುವ ಕಳವಳ ವ್ಯಕ್ತಪಡಿಸಲು, ಹೇಳಿಕೊಳ್ಳಲು ನಾಚಿಕೆ ಪಡುವುದಿಲ್ಲ. ಅದೇ ರೀತಿ ಈ ಭಾರತದ ಭೇಟಿಯಿಂದ ನಿಜವಾಗಿಯೂ ಈಗ ಇರುವ ಸಂಬಂಧವನ್ನು ಮುಂದುವರಿಸುವುದರ ಬಗ್ಗೆ ಮತ್ತು ಮುಂದೆ ಆಳವಾದ, ಬಲವಾದ ಪಾಲುದಾರಿಕೆ ಮತ್ತು ಸ್ನೇಹಕ್ಕಾಗಿ ನಾವು ಆಶಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಭಾರತವು ಅನೇಕ ಹಂತಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಬಲವಾದ ಪಾಲುದಾರನಾಗಿದೆ. ಶಾಂಗ್ರಿ-ಲಾ ಕಾರ್ಯದರ್ಶಿ (ರಕ್ಷಣಾ ಕಾರ್ಯದರ್ಶಿ, ಲಾಯ್ಡ್) ಆಸ್ಟಿನ್ ಅವರು ಕೆಲವು ಹೆಚ್ಚುವರಿ ರಕ್ಷಣಾ ಸಹಕಾರವನ್ನು ಈಗ ನಾವು ಭಾರತದೊಂದಿಗೆ ಮುಂದುವರಿಸಲಿದ್ದೇವೆ ಎಂದಿರುವುದನ್ನು ನೀವು ನೋಡಿರಬಹುದು.

ಸಹಜವಾಗಿ, ನಮ್ಮ ಎರಡು ದೇಶಗಳ ನಡುವೆ ಬಲವಾದ ಆರ್ಥಿಕ ಸಂಬಂಧವಿದೆ. ಭಾರತವು ಪೆಸಿಫಿಕ್ ಕ್ವಾಡ್‌ನ ಸದಸ್ಯ ಮತ್ತು ಇಂಡೋ-ಪೆಸಿಫಿಕ್ ಭದ್ರತೆಗೆ ಸಂಬಂಧಿಸಿದಂತೆ ಪ್ರಮುಖ ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರವಾಗಿದೆ. ಭಾರತವು ನಿಸ್ಸಂಶಯವಾಗಿ ನಮ್ಮ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯವಾಗಿ ಮಾತ್ರವಲ್ಲ, ಬಹುಪಕ್ಷೀಯವಾಗಿ ಹಲವು ಹಂತಗಳಲ್ಲಿ ಸಂಬಂಧ ಹೊಂದಿದೆ. ಜೊತೆಗೆ ಆ ಎಲ್ಲ ವಿಷಯಗಳ ಬಗ್ಗೆ ಮಾತನಾಡಲು ಮತ್ತು ಆ ಪಾಲುದಾರಿಕೆ ಮತ್ತು ಆ ಸ್ನೇಹವನ್ನು ಕಾಪಾಡಿಕೊಳ್ಳಲು ಹಾಗೂ ಈ ಬಾಂಧವ್ಯವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ಸಹಕಾರಿ ಆಗಲಿದೆ ಎಂದು ಕಿರ್ಬಿ ಹೇಳಿದ್ದಾರೆ.

ಇದನ್ನೂ ಓದಿ: ಮಾರ್ ಎ ಲಾಗೋ ಪೇಪರ್ಸ್ ಪ್ರಕರಣ: ಟ್ರಂಪ್ ಪರ ವಕೀಲರಿಂದ ನ್ಯಾಯಾಂಗ ಇಲಾಖೆ ಅಧಿಕಾರಿಗಳ ಭೇಟಿ

ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಏನಾದರು ಪ್ರಶ್ನಿಸಿದರೆ ಕಾಂಗ್ರೆಸ್​ ಮೇಲೆಯೇ ಆರೋಪ ಹೊರಿಸುತ್ತದೆ: ರಾಹುಲ್​ ಗಾಂಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.