ETV Bharat / international

ಭಾರತವು ಭವಿಷ್ಯದ ಭರವಸೆಯನ್ನು ನೀಡುತ್ತದೆ: ಬಿಲ್ ಗೇಟ್ಸ್

ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹ-ಅಧ್ಯಕ್ಷ ಬಿಲ್ ಗೇಟ್ಸ್ ತನ್ನ ಬ್ಲಾಗ್ ಗೇಟ್ಸ್ ನೋಟ್ಸ್ ನಲ್ಲಿ ಭಾರತ ತನ್ನೆಲ್ಲಾ ಸಮಸ್ಯೆ ಕೊರತೆಗಳ ನಡುವೆಯೂ ಸಾಧನೆಯ ಹಾದಿಯಲ್ಲಿ ಇರುವ ಕುರಿತು ಬಣ್ಣಿಸಿದ್ದಾರೆ.

bill gates
ಬಿಲ್ ಗೇಟ್ಸ್
author img

By

Published : Feb 23, 2023, 1:09 PM IST

ಕ್ಯಾಲಿಫೋರ್ನಿಯಾ [ಯುಎಸ್]: ಭಾರತವು ಭವಿಷ್ಯದ ಭರವಸೆಯನ್ನು ನೀಡುತ್ತದೆ ಮತ್ತು ಜಗತ್ತು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವಾಗಲೂ ದೇಶವು ದೊಡ್ಡ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಬಹುದು ಎಂಬುದನ್ನು ಭಾರತ ಸಾಬೀತುಪಡಿಸಿದೆ ಎಂದು ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹ-ಅಧ್ಯಕ್ಷ ಬಿಲ್ ಗೇಟ್ಸ್ ತಮ್ಮ ಬ್ಲಾಗ್ "ಗೇಟ್ಸ್ ನೋಟ್ಸ್" ನಲ್ಲಿ ಹೇಳಿದ್ದಾರೆ.

ತಮ್ಮ ಬ್ಲಾಗ್‌ನಲ್ಲಿ, ಬಿಲ್ ಗೇಟ್ಸ್ ಅವರು ಒಂದು ದೇಶ ಉತ್ತಮವಾದ ಸಂಶೋಧನೆ, ನಾವಿನ್ಯತೆ ಮತ್ತು ವಿತರಣಾ ಮಾಧ್ಯಮಗಳಿಂದ ಮಾತ್ರ ಒಂದೇ ಬಾರಿಗೆ ಸಾಕಷ್ಟು ದೊಡ್ಡ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ ಎಂದು ನಾನು ನಂಬಿದ್ದೆ. ಹಾಗೇ ಜಗತ್ತು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಎರಡೆರಡೂ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಸಮಯ ಅಥವಾ ಹಣವಿಲ್ಲ ಎಂಬ ಮಾತನ್ನು ಕೆಲವು ದೇಶಗಳಿಂದ ಕೇಳಿದ್ದೆ. ಆದರೆ ಭಾರತವು ಈ ಎಲ್ಲವನ್ನು ಮೀರಿಸಿದೆ. ನಾನು ನಂಬಿದ್ದ ಮತ್ತು ಕೇಳಿದ್ದ ಸಮಸ್ಯೆಯ ಕುರಿತಾದ ಪ್ರತಿಕ್ರಿಯೆಗಳನ್ನು ತಪ್ಪಾಗಿ ಸಾಬೀತುಪಡಿಸಿದೆ ಎಂದಿದ್ದಾರೆ ಬಿಲ್ ಗೇಟ್ಸ್.

ಸಮಸ್ಯೆಗಳ ವಿರುದ್ಧ ಭಾರತವು ಸಾಧಿಸಿರುವ ಗಮನಾರ್ಹ ಪ್ರಗತಿಗಿಂತ ಉತ್ತಮ ಪುರಾವೆ ಮತ್ತೊಂದು ಇಲ್ಲ ಎನ್ನುವ ಮೂಲಕ ಭಾರತದ ಕುರಿತು ಪ್ರಶಂಸೆ ರೀತಿಯ ಮಾತುಗಳನ್ನು ತಮ್ಮ ಬ್ಲಾಗ್‌ನಲ್ಲಿ ಉಲ್ಲೇಖಿಸಿದ್ದಾರೆ. ಒಟ್ಟಾರೆಯಾಗಿ ಭಾರತವು ನನಗೆ ಭವಿಷ್ಯದ ಭರವಸೆಯನ್ನು ನೀಡುತ್ತದೆ. ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಇಷ್ಟು ಪ್ರಮಾಣದಲ್ಲಿ ಜನರಿರುವಾಗ ಅಷ್ಟೇ ಸಮಸ್ಯೆಗಳು ಇರುತ್ತವೆ. ಆದರೂ ಅವುಗಳನ್ನೆಲ್ಲ ಮೀರಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ರಾಷ್ಟ್ರ ಬೆಳೆಯುತ್ತಿದೆ. ದೇಶವು ಪೋಲಿಯೋವನ್ನು ನಿರ್ಮೂಲನೆ ಮಾಡಿದೆ, ಎಚ್ಐವಿ ಪ್ರಸರಣವನ್ನು ಕಡಿಮೆ ಮಾಡಿದೆ, ಬಡತನವನ್ನು ಕಡಿಮೆ ಮಾಡಿದೆ, ಶಿಶು ಮರಣವನ್ನು ಕಡಿಮೆ ಮಾಡಿದೆ ಮತ್ತು ನೈರ್ಮಲ್ಯ ಮತ್ತು ಆರ್ಥಿಕ ಸೇವೆಗಳನ್ನು ಹೆಚ್ಚಿಸಿದೆ. ಜೊತೆಗೆ ಎಲ್ಲಾ ಸಮಸ್ಯೆಗಳಿಗೆ ಭಾರತವು ನಾವೀನ್ಯತೆಗೆ ವಿಶ್ವ-ಪ್ರಮುಖ ವಿಧಾನವನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು, ಆರೋಗ್ಯದ ವಿಚಾರಕ್ಕೆ ಬಂದಾಗ ಅತಿಸಾರದ ಅನೇಕ ಮಾರಣಾಂತಿಕ ಪ್ರಕರಣಗಳನ್ನು ಉಂಟುಮಾಡುವ ವೈರಸ್ ಅನ್ನು ತಡೆಯುವ ರೋಟವೈರಸ್ ಲಸಿಕೆಯು ಪ್ರತಿ ಮಗುವಿಗೆ ತಲುಪಲು ತುಂಬಾ ದುಬಾರಿಯಾದಾಗ, ಭಾರತವು ಲಸಿಕೆಯನ್ನು ಸ್ವತಃ ಮಾಡಲು ನಿರ್ಧರಿಸಿತು. ಕಾರ್ಖಾನೆಗಳನ್ನು ನಿರ್ಮಿಸಲು ಮತ್ತು ಲಸಿಕೆಗಳನ್ನು ವಿತರಿಸಲು ದೊಡ್ಡ ಪ್ರಮಾಣದ ವಿತರಣಾ ಚಾನಲ್‌ಗಳನ್ನು ರಚಿಸಲು ಭಾರತವು ತಜ್ಞರು ಮತ್ತು ನಿಧಿಗಳೊಂದಿಗೆ (ಗೇಟ್ಸ್ ಫೌಂಡೇಶನ್ ಸೇರಿದಂತೆ) ಕೆಲಸ ಮಾಡಿದೆ. 2021ರ ಹೊತ್ತಿಗೆ, 1 ವರ್ಷ ವಯಸ್ಸಿನ 83 ಪ್ರತಿಶತದಷ್ಟು ಮಕ್ಕಳಿಗೆ ರೋಟವೈರಸ್ ವಿರುದ್ಧ ಚುಚ್ಚುಮದ್ದು ನೀಡಲಾಯಿತು ಮತ್ತು ಈ ಕಡಿಮೆ-ವೆಚ್ಚದ ಲಸಿಕೆಗಳನ್ನು ಈಗ ಪ್ರಪಂಚದಾದ್ಯಂತದ ಇತರ ದೇಶಗಳಲ್ಲಿ ಬಳಸಲಾಗುತ್ತಿದೆ ಎಂದು ಗೇಟ್ಸ್ ವಿವರಿಸಿದ್ದಾರೆ.

  • India gives me hope for the future. I’m excited to visit next week and see the work being done by innovators and entrepreneurs to tackle big challenges like climate change, health, and hunger. https://t.co/vnVpLNROtZ

    — Bill Gates (@BillGates) February 22, 2023 " class="align-text-top noRightClick twitterSection" data=" ">

ಪೂಸಾದಲ್ಲಿರುವ ಭಾರತದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಅಥವಾ IARI ನಲ್ಲಿ ತನ್ನ ನಿಧಿಯ ಕುರಿತು ಮಾತನಾಡುವಾಗ, ಗೇಟ್ಸ್ "IARI ಯಲ್ಲಿನ ಸಂಶೋಧಕರ ಕೆಲಸವನ್ನು ಬೆಂಬಲಿಸಲು ಗೇಟ್ಸ್ ಫೌಂಡೇಶನ್ ಭಾರತದ ಸಾರ್ವಜನಿಕ ವಲಯ ಮತ್ತು CGIAR ಸಂಸ್ಥೆಗಳೊಂದಿಗೆ ಕೈಜೋಡಿಸಿದೆ. ಅಲ್ಲಿನ ಹೊಸ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಕಡಲೆ ತಳಿಗಳು 10 ಪ್ರತಿಶತಕ್ಕಿಂತ ಹೆಚ್ಚಿನ ಇಳುವರಿಯನ್ನು ಹೊಂದಿವೆ ಮತ್ತು ಹೆಚ್ಚು ಬರ-ನಿರೋಧಕವಾಗಿದೆ. ಒಂದು ವಿಧದ ತಳಿ ಈಗಾಗಲೇ ರೈತರಿಗೆ ಲಭ್ಯವಿದೆ, ಮತ್ತು ಉಳಿದವುಗಳು ಪ್ರಸ್ತುತ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸುತ್ತಿವೆ. ಇದರ ಪರಿಣಾಮವಾಗಿ, ಭಾರತವು ತನ್ನ ಜನರಿಗೆ ಆಹಾರವನ್ನು ನೀಡಲು ಮತ್ತು ಜಗತ್ತಿನಲ್ಲಿ ತನ್ನ ರೈತರಿಗೆ ಬೆಂಬಲವನ್ನು ನೀಡಲು ಉತ್ತಮವಾಗಿ ಸಿದ್ಧವಾಗಿದೆ.

ಜಾಗತಿಕ ಹಿಂಜರಿತದ ಮಧ್ಯೆಯೂ ಭಾರತ ತನ್ನ ದೇಶವಾಸಿಗಳು ಮತ್ತು ರೈತರಿಗೆ ಆಹಾರ ಭದ್ರತೆ ನೀಡಿದೆ. ದೇಶದ ಕೃಷಿಯ ಕ್ಷೇತ್ರವು ದಿಲ್ಲಿಯ ಪೂಸಾದಲ್ಲಿ ಬೆಳವಣಿಗೆ ಕಾಣುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಬಿಲ್​ಗೇಟ್ಸ್​ ಬಣ್ಣಿಸಿದ್ದಾರೆ. ಹವಾಮಾನ ಬದಲಾವಣೆ, ಹಸಿವು ಮತ್ತು ಆರೋಗ್ಯದಂತಹ ಸವಾಲುಗಳು ನಮಗೆ ದುಸ್ತರವಾಗಿ ಕಾಣುತ್ತವೆ. ಇದಕ್ಕೆ ಕಾರಣ ಈ ಎಲ್ಲದಕ್ಕೂ ನಮ್ಮಲ್ಲಿ ಪರಿಹಾರಗಳಿಲ್ಲ. ಆದರೆ, ಒಂದಲ್ಲಾ ಒಂದು ದಿನ ಇವಕ್ಕೆ ಸಂಶೋಧನೆಗಳು ಪರಿಹಾರ ಸೂಚಿಸುತ್ತವೆ ಎಂಬ ಆಶಾಭಾವ ನನ್ನಲ್ಲಿದೆ. ಇದರ ಭಾಗವಾಗಿರುವ ಐಎಆರ್​ಐ ಸದಸ್ಯರಿಗೆ ಧನ್ಯವಾದ ಹೇಳುವೆ ಎಂದರು.

ಇದೇ ವೇಳೆ, ಮಾಧ್ಯಮ ಪ್ರಕಟಣೆಯೊಂದರಲ್ಲಿ ಪ್ರಕಟವಾದ ಗೇಟ್ಸ್ ಅವರ ಬ್ಲಾಗ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಇನ್ನು ಗೇಟ್ಸ್ ನವೋದ್ಯಮಿಗಳು ಮತ್ತು ಉದ್ಯಮಿಗಳು ಮಾಡುತ್ತಿರುವ ಕೆಲಸವನ್ನು ನೋಡಲು ಮುಂದಿನ ವಾರ ಭಾರತಕ್ಕೆ ಬರುವುದಾಗಿ ತಮ್ಮ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ. ದೂರದ ಕೃಷಿ ಸಮುದಾಯಗಳಲ್ಲಿ ತ್ಯಾಜ್ಯವನ್ನು ಜೈವಿಕ ಇಂಧನ ಮತ್ತು ರಸಗೊಬ್ಬರಗಳಾಗಿ ಪರಿವರ್ತಿಸಲು ಬ್ರೇಕ್‌ಥ್ರೂ ಎನರ್ಜಿ ಫೆಲೋ ವಿದ್ಯುತ್ ಮೋಹನ್ ಮತ್ತು ಅವರ ತಂಡ ಮಾಡುತ್ತಿರುವ ಕೆಲಸದಂತೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಜಗತ್ತಿಗೆ ಸಹಾಯ ಮಾಡುವ ಪ್ರಗತಿಯ ಕುರಿತು ಕೆಲವರು ಸಂಶೋಧನೆಯ ಕೆಲಸ ಮಾಡುತ್ತಿದ್ದಾರೆ. ಗೇಟ್ಸ್ ಫೌಂಡೇಶನ್ ಮತ್ತು ಬ್ರೇಕ್‌ಥ್ರೂ ಎನರ್ಜಿಯ ಅದ್ಭುತ ಪಾಲುದಾರರಿಂದ ಈಗಾಗಲೇ ನಡೆಯುತ್ತಿರುವ ಪ್ರಗತಿಯನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ, "ಗೇಟ್ಸ್ ಹೇಳಿದರು.

ಪ್ರಪಂಚದಲ್ಲಿರುವ ಇತರ ದೇಶಗಳಂತೆ, ಭಾರತವು ಸೀಮಿತ ಸಂಪನ್ಮೂಲಗಳನ್ನು ಹೊಂದಿದೆ. ಆದರೆ ಇಷ್ಟು ಕೊರತೆಗಳಿದ್ದರು ನಿರ್ಬಂಧಗಳಿದ್ದರೂ ಸಹ ಜಗತ್ತು ಇನ್ನೂ ಹೇಗೆ ಪ್ರಗತಿ ಸಾಧಿಸಬಹುದು ಎಂಬುದನ್ನು ಭಾರತ ದೇಶ ನಮಗೆ ತೋರಿಸಿಕೊಟ್ಟಿದೆ. ನಾವು ಒಟ್ಟಾಗಿ ಕೆಲಸ ಮಾಡಿದರೆ, ನಾವು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಬಹುದು ಮತ್ತು ಅದೇ ಸಮಯದಲ್ಲಿ ಜಾಗತಿಕ ಆರೋಗ್ಯವನ್ನು ಸುಧಾರಿಸಬಹುದು ಎಂದು ನಾನು ನಂಬುತ್ತೇನೆ, ”ಎಂದು ಭಾರತದ ಕುರಿತಾಗಿ ಶ್ಲಾಘನೀಯ ಮಾತುಗಳನ್ನಾಡಿದ್ದಾರೆ ಬಿಲ್​ ಗೇಟ್ಸ್​​.

ಇದನ್ನೂ ಓದಿ; ಅದಾನಿ ಗ್ರೂಪ್ ಭಾರತ ಇಸ್ರೇಲ್ ಮಧ್ಯೆ ವ್ಯಾಪಾರ ಹೆಚ್ಚಿಸಲು ಸಮರ್ಥ: ಇಸ್ರೇಲ್ ರಾಯಭಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.