ETV Bharat / international

ಹಿನ್ನೋಟ: ಭಾರತದ ಜಿ20 ಅಧ್ಯಕ್ಷತೆಯಲ್ಲಿ ಹಲವು ಜಾಗತಿಕ ಸವಾಲುಗಳಿಗೆ ಪರಿಹಾರ - G20 presidency

india G20 presidency: ಆಫ್ರಿಕನ್ ಯೂನಿಯನ್ ಅನ್ನು ತನ್ನೊಂದಿಗೆ ಕರೆ ತರುವುದರಿಂದ ಹಿಡಿದು ಡಿಜಿಟಲ್ ಆರ್ಥಿಕತೆಯ ಪ್ರಾಮುಖ್ಯತೆಯನ್ನು ಪ್ರದರ್ಶಿಸುವವರೆಗೆ ಎಲ್ಲಾ ರಾಷ್ಟ್ರಗಳನ್ನು ನವದೆಹಲಿ ಘೋಷಣೆಗೆ ಒಮ್ಮತಕ್ಕೆ ಸೆಳೆಯುವವರೆಗೂ ಈ ವರ್ಷದಲ್ಲಿ ಭಾರತದ ಜಿ20 ಅಧ್ಯಕ್ಷತೆ ಯಶಸ್ಸು ಸಾಧಿರುವುದು ಬಹು ದೊಡ್ಡ ಸಾಧನೆ ಎಂದೇ ಬಣ್ಣಿಸಲಾಗುತ್ತಿದೆ.

india G20 presidency
ಹಿನ್ನೋಟ: ಭಾರತದ ಜಿ20 ಅಧ್ಯಕ್ಷತೆಯಲ್ಲಿ ಹಲವು ಜಾಗತಿಕ ಸವಾಲುಗಳಿಗೆ ಪರಿಹಾರ
author img

By ETV Bharat Karnataka Team

Published : Dec 22, 2023, 1:59 PM IST

ನವದೆಹಲಿ: ಅಂತಾರಾಷ್ಟ್ರೀಯ ಸಂಬಂಧಗಳ ಕ್ರಿಯಾತ್ಮಕತೆ ತರವಲ್ಲಿ 2023ರ ವರ್ಷದಲ್ಲಿ ನಡೆದ G20 ಶೃಂಗಸಭೆ ಮಹತ್ವದ ಪಾತ್ರವಹಿಸಿತು. ವಿಶ್ವದಲ್ಲಿ ಎದುರಾದ ಸವಾಲುಗಳ ಮಧ್ಯೆಯೇ, ಜಗತ್ತಿನ ಪ್ರಮುಖ ಆರ್ಥಿಕತೆ ಸಹಕಾರವನ್ನು ಬೆಳೆಸುವ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿತ್ತು. ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಮತ್ತು ಆರ್ಥಿಕ ಸಂಕೀರ್ಣತೆಗಳ ನಡುವೆಯೇ ಭಾರತವು ಈ ವರ್ಷದಲ್ಲಿ ನಡೆದ G20 ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ಮುನ್ನಡೆಸಿತು. ಉಭಯ ದೇಶಗಳ ನಡುವೆ ಸಂವಾದ, ಸಹಕಾರ ಬೆಳೆಸುವಲ್ಲಿ ಶೃಂಗಸಭೆ ನಿರ್ಣಾಯಕ ಪಾತ್ರವನ್ನು ವಹಿಸಿತ್ತು.

ಡಿಸೆಂಬರ್ 2022ರಲ್ಲಿ ಇಂಡೋನೇಷ್ಯಾ ದೇಶದ ನಂತರ, ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತು. ಅಧ್ಯಕ್ಷ ಸ್ಥಾನಕ್ಕೆ ಏರಿದ ಅವಧಿಯಿಂದಲೂ ಜಾಗತಿಕ ದಕ್ಷಿಣದ ಧ್ವನಿಯಾಗಲಿದೆ ಎಂದು ಭಾರತ ಹೇಳಿತ್ತು. ಭಾರತದ ಉಪಕ್ರಮದಲ್ಲಿ, ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆದ ಅಂತರ್ ಸರ್ಕಾರಿ ವೇದಿಕೆಯ ವಾರ್ಷಿಕ ಶೃಂಗಸಭೆಯಲ್ಲಿ 55 - ರಾಷ್ಟ್ರಗಳ ಆಫ್ರಿಕನ್ ಯೂನಿಯನ್ (AU) ಅನ್ನು G20ಯ ಭಾಗವಾಗಿ ಮಾಡಲಾಯಿತು.

ಗ್ಲೋಬಲ್ ಸೌತ್‌: ಈ ವರ್ಷ ಭಾರತದ G20 ಅಧ್ಯಕ್ಷತೆವಹಿಸಿದ್ದ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಗ್ಲೋಬಲ್ ಸೌತ್‌ನ ಬಹುಪಾಲು ಹೊಂದಿರುವ ಆಫ್ರಿಕನ್ ರಾಷ್ಟ್ರಗಳನ್ನು ಈ ಗುಂಪಿನಲ್ಲಿ ಸೇರ್ಪಡೆಗೊಳ್ಳಲು ಒತ್ತು ನೀಡಿದ್ದರು. G20 19 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟವನ್ನು ಒಳಗೊಂಡಿತ್ತು. ಜಿ 20 ಶೃಂಗಸಭೆಗೆ ಮುಂಚಿತವಾಗಿ, ಮೋದಿ ಅವರು ಎಯು ಅನ್ನು ಗುಂಪಿನ ಶಾಶ್ವತ ಸದಸ್ಯರನ್ನಾಗಿ ಮಾಡುವಂತೆ ಸದಸ್ಯ ರಾಷ್ಟ್ರಗಳ ಎಲ್ಲ ನಾಯಕರಿಗೆ ಪತ್ರ ಬರೆದಿದ್ದರು. ಇದನ್ನು ಎಲ್ಲರೂ ಒಪ್ಪಿಕೊಂಡರು. ಇದರಿಂದ 55 ರಾಷ್ಟ್ರಗಳ ಬಣವನ್ನು ಸೆಪ್ಟೆಂಬರ್ 9 ರಂದು G20ಗೆ ಸೇರಿಸಲಾಯಿತು.

G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಂತರ, ಭಾರತವು ಈ ವರ್ಷದ ಜನವರಿಯಲ್ಲಿ ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ (ವಿಒಜಿಎಸ್​) ನ ವರ್ಚುವಲ್ ಶೃಂಗಸಭೆಯನ್ನು ನಡೆಸಿತ್ತು. ‘ಧ್ವನಿಯ ಏಕತೆ, ಉದ್ದೇಶದ ಏಕತೆ’ ಎಂಬ ವಿಷಯದೊಂದಿಗೆ ನಡೆದ ಶೃಂಗಸಭೆಯಲ್ಲಿ ಸುಮಾರು 120 ದೇಶಗಳು ಭಾಗವಹಿಸಿದ್ದವು.

ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ''ಗ್ಲೋಬಲ್ ಸೌತ್ ಭವಿಷ್ಯದಲ್ಲಿ ದೊಡ್ಡ ಪಾಲನ್ನು ಹೊಂದಿದೆ. ಮನುಕುಲದ ನಾಲ್ಕನೇ ಮೂರು ಭಾಗದಷ್ಟು ನಮ್ಮ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ನಾವು ಸಹ ಸಮಾನ ಧ್ವನಿಯನ್ನು ಹೊಂದಿರಬೇಕು. ಆದ್ದರಿಂದ, ಜಾಗತಿಕ ಆಡಳಿತದ ಎಂಟು ದಶಕಗಳ-ಹಳೆಯ ಮಾದರಿಯು ನಿಧಾನವಾಗಿ ಬದಲಾಗುತ್ತಿರುವಂತೆ, ನಾವು ಉದಯೋನ್ಮುಖ ಕ್ರಮವನ್ನು ರೂಪಿಸಲು ಪ್ರಯತ್ನಿಸಬೇಕು'' ಎಂದು ಹೇಳಿದ್ದರು.

ಗ್ಲೋಬಲ್ ಸೌತ್ ಸೆಂಟರ್ ಆಫ್ ಎಕ್ಸಲೆನ್ಸ್ : ನವೆಂಬರ್‌ನಲ್ಲಿ, G20 ಅಧ್ಯಕ್ಷತೆಯ ಮುಕ್ತಾಯದ ಮೊದಲು, ಭಾರತವು ಮತ್ತೊಮ್ಮೆ ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್​ನ ವರ್ಚುಯಲ್ ಶೃಂಗಸಭೆ ನಡೆಸಿತು. ಈ ಎರಡನೇ ಶೃಂಗಸಭೆಯ ಉದ್ದೇಶಗಳು, ಭಾರತವು ಆಯೋಜಿಸಿದ G20 ಶೃಂಗಸಭೆಯ ಫಲಿತಾಂಶಗಳನ್ನು ಪ್ರಸಾರ ಮಾಡುವುದು, ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಗಳ ಮೇಲೆ ನಿರ್ದಿಷ್ಟ ಗಮನವನ್ನು ಹೊಂದಿರುವ G20 ನಿರ್ಧಾರಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನಿರಂತರ ಆವೇಗವನ್ನು ಖಚಿತಪಡಿಸುವುದು.

ಎರಡನೇ ವಿಒಜಿಎಸ್​ ಶೃಂಗಸಭೆಯಲ್ಲಿ, ಮೋದಿ ಅವರು ಗ್ಲೋಬಲ್ ಸೌತ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಉದ್ಘಾಟಿಸಿದರು. ಇದು ಜ್ಞಾನ ಭಂಡಾರ ಮತ್ತು ಚಿಂತಕರ ಚಾವಡಿಯಾಗಿ ಕಾರ್ಯನಿರ್ವಹಿಸುವ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಸಹಯೋಗ ಬೆಳೆಸುವ ಗುರಿಯನ್ನು ಹೊಂದಿದೆ. ಗ್ಲೋಬಲ್ ಸೌತ್‌ಗಾಗಿ ಭಾರತವು ಐದು ಸಿಗಳಿಗೆ ಕರೆ ನೀಡಿದೆ. ಸಮಾಲೋಚನೆ, ಸಹಕಾರ, ಸಂವಹನ, ಸೃಜನಶೀಲತೆ ಮತ್ತು ಸಾಮರ್ಥ್ಯ ನಿರ್ಮಾಣ (consultation, cooperation, communication, creativity and capacity).

ಡಿಜಿಟಲ್ ಆರ್ಥಿಕತೆ: G20 ಅಧ್ಯಕ್ಷತೆಯ ಅವಧಿಯಲ್ಲಿ ಭಾರತದ ಮತ್ತೊಂದು ಪ್ರಮುಖ ಸಾಧನೆ ಅಂದ್ರೆ, ಡಿಜಿಟಲ್ ಆರ್ಥಿಕತೆಯನ್ನು ಅಳವಡಿಸಿಕೊಳ್ಳುವಲ್ಲಿ ಜಗತ್ತಿಗೆ ಸಹಾಯ ಮಾಡಲು ನಾಯಕತ್ವದ ಪಾತ್ರವನ್ನು ವಹಿಸುವ ಸಾಮರ್ಥ್ಯವನ್ನು ಪ್ರದರ್ಶ ಮಾಡಿದೆ. ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ G20 ಡಿಜಿಟಲ್ ಆರ್ಥಿಕ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಜಾಗತಿಕ ಸವಾಲುಗಳಿಗೆ ಸುರಕ್ಷಿತ ಮತ್ತು ಅಂತರ್ಗತ ಪರಿಹಾರಗಳನ್ನು ನೀಡುತ್ತದೆ ಎಂದು ಹೇಳಿದ್ದರು.

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪರಾಕ್ರಮ: ಭಾರತದ G20 ಅಧ್ಯಕ್ಷತೆಗೆ ತೆರೆ ಬಿದ್ದಂತೆ, ಅದರ ನಾಯಕತ್ವದಲ್ಲಿ ಸಾಧಿಸಿದ ಸಾಧನೆಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತಿವೆ. ಇದು ಎಲ್ಲ ರಾಷ್ಟ್ರಗಳ ಮೇಲೆ ನಿರಂತರ ಪ್ರಭಾವವನ್ನು ಉಂಟುಮಾಡಿದೆ. ನವೀನ ಪರಿಹಾರಗಳನ್ನು ಪರಿಚಯಿಸುವುದರಿಂದ ಹಿಡಿದು ಸಾಮಾನ್ಯ ಸವಾಲುಗಳನ್ನು ಎದುರಿಸುವವರೆಗೆ ಮತ್ತು ಅಂತರ್ಗತ ಆರ್ಥಿಕ ಬೆಳವಣಿಗೆಯನ್ನು ಮುನ್ನಡೆಸುವವರೆಗೆ, ಭಾರತವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಪರಾಕ್ರಮವನ್ನು ಪ್ರದರ್ಶಿಸಿದೆ. ಈ G20 ಪದದ ಶಾಶ್ವತ ಪರಂಪರೆಯು ಸಹಯೋಗದ ಮನೋಭಾವ, ಸ್ಥಿತಿಸ್ಥಾಪಕತ್ವ ಮತ್ತು ಸಮೃದ್ಧ ಮತ್ತು ಅಂತರ್​ ಸಂಪರ್ಕಿತ ಭವಿಷ್ಯಕ್ಕಾಗಿ ಸಾಮೂಹಿಕ ಆಕಾಂಕ್ಷೆಯಿಂದ ನಿರೂಪಿಸಲ್ಪಟ್ಟಿದೆ. ಬ್ರೆಜಿಲ್‌ಗೆ ಹಸ್ತಾಂತರಿಸಲ್ಪಟ್ಟಂತೆ, ಭಾರತದ ಅಳಿಸಲಾಗದ ಗುರುತು ಇಂದಿನ ಸಂಕೀರ್ಣ ಸಮಸ್ಯೆಗಳನ್ನು ನಿಭಾಯಿಸಲು ರಾಷ್ಟ್ರಗಳು ಒಂದಾದಾಗ ಹೊರಹೊಮ್ಮುವ ಶಕ್ತಿಯನ್ನು ಸೂಚಿಸಿದೆ.

ಇದನ್ನೂ ಓದಿ: ಹಿನ್ನೋಟ: 2023ರ ಅಂತ್ಯದಲ್ಲಿ ಬಲ ಹೆಚ್ಚಿಸಿಕೊಂಡ ಬಿಜೆಪಿ... ಹಿಂದಿ ರಾಜ್ಯಗಳಲ್ಲಿ ’ಕೈ’ಕೊಟ್ಟ ಗ್ಯಾರಂಟಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.