ETV Bharat / international

ಮಹಿಳೆಯರ ವಿರುದ್ಧ ಕಠೋರ ನಿಯಮ: ತಾಲಿಬಾನ್ ಕಾನೂನು ವಾಪಸಾತಿಗೆ ಭಾರತ ಮನವಿ

ಇತ್ತೀಚಿನ ವಾರಗಳಲ್ಲಿ ತಾಲಿಬಾನ್ ತೀಕ್ಷ್ಣ, ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ತಲೆಯಿಂದ ಕಾಲಿನವರೆಗೂ ಮುಚ್ಚುವಂಥ ಬುರ್ಖಾ ಧರಿಸಬೇಕು ಎಂದು ಆದೇಶ ಹೊರಡಿಸಿದೆ.

Afghanistan
Afghanistan
author img

By

Published : May 25, 2022, 9:13 AM IST

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆ ಹೆಚ್ಚಾಗುತ್ತಿದೆ. ತಾಲಿಬಾನ್ ಆಡಳಿತ ಹೊಸ ಹೊಸ ಕಠೋರ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರ ಮೇಲೆ ನಿರ್ಬಂಧ ಹೇರುತ್ತಿದೆ. ಇದಕ್ಕೆ ಭಾರತ ಸೇರಿದಂತೆ ಅನೇಕ ದೇಶಗಳು ವಿರೋಧ ವ್ಯಕ್ತಪಡಿಸಿವೆ.

ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತಲೆಯಿಂದ ಕಾಲಿನವರೆಗೂ ಮುಚ್ಚುವಂಥ ಬುರ್ಖಾ ಧರಿಸಬೇಕು, ನಮ್ಮ ಸಹೋದರಿಯರು ಘನತೆಯಿಂದ ಬದುಕಬೇಕು ಎಂದು ನಾವು ಬಯಸುತ್ತೇವೆ. ಹಾಗಾಗಿ, ಪ್ರತಿಯೊಬ್ಬ ಮಹಿಳೆಯೂ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚಿಕೊಂಡೇ ಓಡಾಡಬೇಕು ಎಂದು ತಾಲಿಬಾನ್ ಸರ್ಕಾರದ ಮುಖ್ಯಸ್ಥ ಹೈಬತುಲ್ಲಾ ಅಖುಂದ್ಜಾದಾ ಆದೇಶ ಹೊರಡಿಸಿದ್ದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯಲ್ಲಿರುವ ಭಾರತೀಯ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ, ಇಂತಹ 'ಅಂಧ ಕಾನೂನು'ಗಳನ್ನು ಹಿಂತೆಗೆದುಕೊಳ್ಳುವಂತೆ ಕರೆ ನೀಡಿದ್ದಾರೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದೇಶದಲ್ಲಿ ಮಹಿಳೆಯರು ಮೂಲಭೂತ ಸ್ವಾತಂತ್ರ್ಯವನ್ನೇ ಕಸಿದುಕೊಂಡಂತೆ ಆಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ದಾಳಿ: 18 ಮಕ್ಕಳು ಸೇರಿ 21 ಮಂದಿ ಕೊಲೆ, ಹಂತಕನ ಹತ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.