ETV Bharat / international

'ನೀವು ರಾಜಕೀಯಕ್ಕೆ ಧುಮುಕಿದ್ದೀರಿ, ಏಕೆ ಪಕ್ಷ ಕಟ್ಟಬಾರದು?': ಸೇನೆಯ ವಿರುದ್ಧ ಇಮ್ರಾನ್ ಖಾನ್ ವಾಗ್ದಾಳಿ - ಇಮ್ರಾನ್ ಖಾನ್ ವಾಗ್ದಾಳಿ

ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಸೇನೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Imran Khan
ಇಮ್ರಾನ್ ಖಾನ್
author img

By

Published : May 14, 2023, 2:05 PM IST

ಲಾಹೋರ್: ಗಂಭೀರ ಸ್ವರೂಪದ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ಸೇನೆಯಿಂದ ಬಂಧನಕ್ಕೊಳಗಾಗಿದ್ದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಾಕ್ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ನಿನ್ನೆ(ಶನಿವಾರ) ಬಿಡುಗಡೆಯಾಗಿದ್ದಾರೆ. ಲಾಹೋರ್‌ನಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕ್ ಸೇನೆಯ ವಿರುದ್ಧ ಆಕ್ರೋಶ ಹೊರಹಾಕಿದರು. ಸೇನೆಯು ರಾಜಕೀಯಕ್ಕೆ ಧುಮುಕುವುದಕ್ಕೆ ನಾಚಿಕೆಪಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ತಮ್ಮ ವಿರುದ್ಧದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಆರೋಪಗಳಿಗೆ ಪ್ರತಿಕ್ರಿಯಿಸಿ "ವಿಶ್ವದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದಾಗ ಸೇನೆಯ ಮಿಲಿಟರಿ ವಿಭಾಗದ ವಕ್ತಾರರು ಹುಟ್ಟಿರಲಿಲ್ಲ. ನಾನು ಪಾಕಿಸ್ತಾನದ ಧ್ವಜವನ್ನು ವಿಶ್ವಾದ್ಯಂತ ಎತ್ತರದಲ್ಲಿ ಇಟ್ಟುಕೊಂಡಿದ್ದೇನೆ. ಐಎಸ್‌ಪಿಆರ್‌ ಎಂದಿಗೂ ಇಂತಹ ಹೇಳಿಕೆ ನೀಡಿಲ್ಲ. ನಿಮ್ಮ ಬಗ್ಗೆ ನಿಮಗೆ ನಾಚಿಕೆಯಾಗಬೇಕು. ನೀವು ರಾಜಕೀಯಕ್ಕೆ ಧುಮುಕಿದ್ದೀರಿ. ನೀವು ರಾಜಕೀಯ ಪಕ್ಷವನ್ನು ಏಕೆ ಕಟ್ಟವಾರದು" ಎಂದು ಪ್ರಶ್ನಿಸಿದ್ದರು.

ಐಎಸ್‌ಪಿಆರ್ ಡೈರೆಕ್ಟರ್ ಜನರಲ್ ಮೇಜರ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ಖಾನ್ ಅವರನ್ನು "ಕಪಟಿ" ಎಂದು ಕರೆದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಇಮ್ರಾನ್​, "ನನ್ನ ಮಾತನ್ನು ಕೇಳಿ ಮಿಸ್ಟರ್ ಡಿಜಿ ಐಎಸ್‌ಪಿಆರ್, ನಾನು ನನ್ನ ದೇಶವನ್ನು ವಿಶ್ವದಲ್ಲಿ ಪ್ರತಿನಿಧಿಸುವಾಗ ಮತ್ತು ಅದಕ್ಕೆ ಒಳ್ಳೆಯ ಹೆಸರು ಗಳಿಸುವಾಗ ನೀವು ಹುಟ್ಟಿರಲಿಲ್ಲ. ನನ್ನನ್ನು ಕಪಟ ಮತ್ತು ಸೇನೆಯ ವಿರೋಧಿ ಎಂದು ಕರೆದಿದ್ದಕ್ಕಾಗಿ ನೀವು ನಾಚಿಕೆಪಡಬೇಕು" ಎಂದು ಕಿಡಿಕಾರಿದರು.

ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅರೆಸ್ಟ್​..

ರಕ್ಷಣಾತ್ಮಕ ಜಾಮೀನು: ಭ್ರಷ್ಟಾಚಾರ ಪ್ರಕರಣದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ಅವರಿಗೆ ಎರಡು ವಾರಗಳ ರಕ್ಷಣಾತ್ಮಕ ಜಾಮೀನು ಮಂಜೂರು ಮಾಡಿದೆ. ಸೋಮವಾರದವರೆಗೆ ದೇಶದಲ್ಲಿ ಎಲ್ಲಿಯೂ ದಾಖಲಾದ ಯಾವುದೇ ಪ್ರಕರಣದಲ್ಲಿ ಅವರನ್ನು ಬಂಧಿಸದಂತೆ ಅಧಿಕಾರಿಗಳಿಗೆ ನಿರ್ಬಂಧಿಸಿದೆ. ಮೇ 9ರಂದು ಭ್ರಷ್ಟಾಚಾರದ ಆರೋಪ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್‌ನ ಹೈಕೋರ್ಟ್ ಬಳಿ ಅಲ್ಲಿನ ಸೇನೆ ಬಂಧಿಸಿತ್ತು.

ಇವರ ಬಂಧನದಿಂದ ಪಾಕಿಸ್ತಾನದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಭಾರಿ ಆಸ್ತಿಪಾಸ್ತಿಗೆ ಹಾನಿಯುಂಟಾಗಿತ್ತು. ಅಲ್ಲದೇ ಕನಿಷ್ಠ 10 ಮಂದಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದರು. ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ, ಪ್ರತಿಭಟನಾಕಾರರು ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿಗೆ (GHQ) ನುಗ್ಗಿದರು. ಲಾಹೋರ್‌ನಲ್ಲಿರುವ ಕಾರ್ಪ್ಸ್ ಕಮಾಂಡರ್‌ನ ಮನೆಗೆ ಬೆಂಕಿ ಹಚ್ಚಿದರು.

ಹಿಂಸಾತ್ಮಕ ಘರ್ಷಣೆಯಲ್ಲಿ ಪಿಟಿಐನ 3,500ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಪಾಕಿಸ್ತಾನಕ್ಕೆ ನ್ಯಾಯಾಂಗವೇ ಆಶಾಕಿರಣ. ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಸಾಮಾಜಿಕ ಮಾಧ್ಯಮಗಳ ಮೇಲೆ ನಿಷೇಧ ಹೇರಿರುವ ಕ್ರಮ ಖಂಡನೀಯ. ಪತ್ರಕರ್ತರು ತಮ್ಮ ಆತ್ಮಸಾಕ್ಷಿಯನ್ನು ಆಲಿಸಬೇಕು ಮತ್ತು ಮಿಲಿಟರಿ ಸ್ಥಾಪನೆಗೆ ಹೆದರಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಪಿಟಿಐ ಅಧ್ಯಕ್ಷರೂ ಆಗಿರುವ ಇಮ್ರಾನ್ ಖಾನ್ ವಿರುದ್ಧ ಈ ಹಿಂದೆ ಹಲವು ಕೋರ್ಟ್‌ಗಳಿಂದ ಬಂಧನದ ವಾರಂಟ್ ಹೊರಡಿಸಲಾಗಿದೆ. ಸದ್ಯ ಅಲ್ಲಿನ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿದೆ.

ಇದನ್ನೂ ಓದಿ: ಪಾಕಿಸ್ತಾನ ಪ್ರಕ್ಷುಬ್ಧ: ಇಮ್ರಾನ್ ಖಾನ್ ಬಂಧನದ ಬಳಿಕ ಭುಗಿಲೆದ್ದ ಆಕ್ರೋಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.