ಇಸ್ಲಾಮಾಬಾದ್(ಪಾಕಿಸ್ತಾನ) : ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಭಾರತದ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಘಿಸಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ‘ನವದೆಹಲಿಯ ನಿರ್ಧಾರವು ತನ್ನ ಜನರ ಒಳಿತಿಗಾಗಿದೆ’ ಎಂದು ಹೇಳಿದ್ದಾರೆ. ಲಾಹೋರ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಇಮ್ರಾನ್ ಖಾನ್, ಅಮೆರಿಕಕ್ಕೆ ಆಯಕಟ್ಟಿನ ಪಾಲುದಾರರಾಗಿರುವ ಭಾರತವು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಅದರ ನಿರ್ಧಾರಗಳು ತಮ್ಮ ಜನರ ಒಳಿತನ್ನು ಆಧರಿಸಿವೆ. ಆದರೆ, ನಮ್ಮ ವಿದೇಶಾಂಗ ನೀತಿ ಇತರ ಜನರ ಸುಧಾರಣೆಗಿವೆ ಎಂದು ಹೇಳಿದರು.
ಮಾರ್ಚ್‌ನಲ್ಲಿ ಇಮ್ರಾನ್ ಖಾನ್ ಭಾರತದ ವಿದೇಶಾಂಗ ನೀತಿ ಸ್ವತಂತ್ರವಾಗಿದೆ ಮತ್ತು ಜನರ ಒಳಿತಿಗಾಗಿ ಎಂದು ಒಪ್ಪಿಕೊಂಡಿದ್ದರು. ಖೈಬರ್ ಪಖ್ತುಂಖ್ವಾದ ಮಲಕಂಡ್ ಪ್ರದೇಶದಲ್ಲಿ ಸಾರ್ವಜನಿಕ ರ್‍ಯಾಲಿಯಲ್ಲಿ ಇಮ್ರಾನ್ ಖಾನ್ ಮಾತು ಮುದುವರಿಸಿ, ನಮ್ಮ ನೆರೆಯ ದೇಶವು ಯಾವಾಗಲೂ ಸ್ವತಂತ್ರ ವಿದೇಶಾಂಗ ನೀತಿ ಹೊಂದಿರುವುದರಿಂದ ನಾನು ಪ್ರಶಂಸಿಸುತ್ತೇನೆ.
ಇಂದು ಭಾರತವು ಅವರ (ಅಮೆರಿಕಾ) ಮೈತ್ರಿಯಲ್ಲಿದೆ ಮತ್ತು ಅವರು ಕ್ವಾಡ್ (ಚತುರ್ಭುಜ ಭದ್ರತೆ) ಸದಸ್ಯರಾಗಿದ್ದಾರೆ. ನಿರ್ಬಂಧಗಳ ಹೊರತಾಗಿಯೂ ಅವರು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಏಕೆಂದರೆ, ಅವರ ನೀತಿ ಜನರ ಒಳಿತಿಗಾಗಿದೆ ಎಂದು ಹೇಳಿದರು. ತನ್ನ ರಷ್ಯಾ ಭೇಟಿಯ ಕಾರಣವನ್ನು ಸಮರ್ಥಿಸಿಕೊಂಡ ಇಮ್ರಾನ್ ಖಾನ್, ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಮಾಸ್ಕೋಗೆ ಹೋಗಿದ್ದೇನೆ. ರಷ್ಯಾ ನಮಗೆ ತೈಲವನ್ನು ಶೇ.30ರಷ್ಟು ರಿಯಾಯಿತಿಯಲ್ಲಿ ನೀಡಿದ್ದರಿಂದ ನಾನು ಆ ದೇಶಕ್ಕೆ ಹೋಗಿದ್ದೆ ಎಂದು ಅವರು ಲಾಹೋರ್‌ನಲ್ಲಿ ಹೇಳಿದರು.
ಓದಿ: ಭಾರತವನ್ನು ನೋಡಿ ಸ್ವಾಭಿಮಾನ ಕಲಿಯಬೇಕು: ಪಾಕ್ ಪ್ರಧಾನಿ ಇಮ್ರಾನ್ ಖಾನ್
ನಾನು ಇದೇ ಮೊದಲ ಬಾರಿಗೆ ಅಲ್ಲ, ಪಾಕಿಸ್ತಾನಕ್ಕೆ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುವ ಕಾರಣದಿಂದ ಅಧಿಕಾರದಿಂದ ಕೆಳಗಿಳಿದಿದ್ದೇನೆ. ಅದು ಅಂತಾರಾಷ್ಟ್ರೀಯ ಶಕ್ತಿಗಳಿಗೆ ಇಷ್ಟವಾಗಲಿಲ್ಲ. ಕೊರೊನಾದಿಂದ ಪ್ರಪಂಚ ವಿನಾಶದ ಸಮಯದ ಹಾದಿಯಲ್ಲಿದ್ದಾಗ ನಮ್ಮ ದೇಶದ ಆರ್ಥಿಕ ಮಟ್ಟ ಏರುತ್ತಿರುವಾಗ, ರಫ್ತು ಸಾಗಾಟ ಹೆಚ್ಚುತ್ತಿದ್ದಾಗ ಜಾಗತಿಕ ಶಕ್ತಿಗಳು ಸ್ಥಳೀಯ ‘ಮೀರ್ ಜಾಫರ್ಸ್ ಮತ್ತು ಮೀರ್ ಸಾಧಿಕ್‌ಗಳ’ ಜೊತೆಗೆ ಸೇರಿ ನಮ್ಮ ಸರ್ಕಾರವನ್ನು ಕೊನೆಗೊಳಿಸಲು ಷಡ್ಯಂತ್ರ ರೂಪಿಸಿದರು ಎಂದು ಇಮ್ರಾನ್ ಖಾನ್ ಆರೋಪಿಸಿದರು.
ಇಮ್ರಾನ್ ಖಾನ್ ಅವರು ಕೇಬಲ್ ಗೇಟ್ ಸಮಸ್ಯೆ ಬಗ್ಗೆ ಮಾತನಾಡುತ್ತ, ಅಮೆರಿಕದ ಅಧಿಕಾರಿಯೊಬ್ಬರು ತಮ್ಮ ದೇಶದ ರಾಯಭಾರಿಗೆ ಬೆದರಿಕೆ ಹಾಕಿದ್ದಾರೆ. ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿಗೆ ದಕ್ಷಿಣ ಏಷ್ಯಾದ ಅಮೆರಿಕದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಬೆದರಿಕೆ ಹಾಕಿದ್ದಾರೆ. ರಷ್ಯಾಕ್ಕೆ ಹೋಗುವುದು ನನ್ನ ತಪ್ಪೇ ಎಂದು ಹೇಳಿದ್ದರು. ರಷ್ಯಾ ನಮಗೆ 30% ಕಡಿಮೆ ಬೆಲೆಗೆ ತೈಲವನ್ನು ನೀಡುತ್ತಿದೆ.
ಆದರೆ, ಅವರು ಅದನ್ನು ಸ್ವೀಕರಿಸಲಿಲ್ಲ. ಅವರು ಪಾಕಿಸ್ತಾನದೊಳಗೆ ಡ್ರೋನ್ ದಾಳಿಗಳನ್ನು ನಡೆಸುವ ಮೂಲಕ ಸಾವಿರಾರು ಅಮಾಯಕರನ್ನು ಕೊಂದರು. ಇದನ್ನು ವಿರೋಧಿಸಿ ನಾನಾ ಕಡೆ ಧರಣಿ ನಡೆಸಿದ್ದೇನೆ. ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ನಾವು ಅಮೆರಿಕವನ್ನು ಬೆಂಬಲಿಸಿದ್ದೇವೆ, ಪ್ರತಿಯಾಗಿ ಅವರು ನಮ್ಮ ಜನರನ್ನು ಕೊಲ್ಲಲು ಪ್ರಾರಂಭಿಸಿದರು ಎಂದು ವಿವರಿಸಿದರು.
ನಾವು ಯಾವ ಅಪರಾಧವನ್ನು ಮಾಡಿದ್ದೇವೆ?, ನಾವು ರಷ್ಯಾಕ್ಕೆ ಹೋಗಿದಕ್ಕಾ? ಅಥವಾ ನಾವು ಮಿಲಿಟರಿ ನೆಲೆಗಳನ್ನು (ಯುಎಸ್‌ಗೆ) ನೀಡುವುದಿಲ್ಲ ಎಂದು ಹೇಳಿದ್ದೇವೆಯೇ?.. ಅವರಿಗೆ ಈ ಕೆಟ್ಟ ಅಭ್ಯಾಸಗಳು ಎಲ್ಲಿಂದ ಬಂದವು ಎಂಬುದನ್ನು ಒಮ್ಮೆ ಲಾಹೋರ್ ಅನ್ನು ನೆನಪಿಸಿಕೊಳ್ಳಿ. ಇದೇ ವಿಷಯಗಳನ್ನು ನೀವು ಭಾರತಕ್ಕೆ ಏಕೆ ಕೇಳುತ್ತಿಲ್ಲ ಎಂದು ಇಮ್ರಾನ್ ಖಾನ್ ಜಾಗತಿಕ ಶಕ್ತಿಗಳಿಗೆ ಪ್ರಶ್ನಿಸಿದರು.
ಓದಿ: ಇಮ್ರಾನ್ಖಾನ್ಗೆ ಭಾರತ ಇಷ್ಟವಿದ್ದರೆ, ಪಾಕ್ ತೊರೆಯಲಿ: ಮರ್ಯಮ್ ಖಾನ್
ವಿದೇಶಿ ಶಕ್ತಿಗಳು ಚೀನಾದೊಂದಿಗೆ ವ್ಯಾಪಾರವನ್ನು ಹೆಚ್ಚಿಸಲು ಇಷ್ಟಪಡುವುದಿಲ್ಲ ಎಂದ ಖಾನ್, ಅವರಿಗೆ ಈ ಎಲ್ಲಾ ವಿಷಯಗಳು ಇಷ್ಟವಾಗದ ಕಾರಣ ನಮ್ಮ ಸರ್ಕಾರದ ವಿರುದ್ಧ ಪಿತೂರಿ ರೂಪಿಸಿದ್ದಾರೆ. ಆದರೆ, ಇಲ್ಲಿ ಮೀರ್ ಜಾಫರ್ಸ್ ಮತ್ತು ಮೀರ್ ಸಾಧಿಕ್‌ಗಳ ಬೆಂಬಲವಿಲ್ಲದೆ ಯಾವುದೇ ಪಿತೂರಿ ಯಶಸ್ವಿಯಾಗುವುದಿಲ್ಲ ಎಂದು ಉಚ್ಛಾಟಿತ ಪ್ರಧಾನಿ ಹೇಳಿದರು.
ಪ್ರಧಾನಿ ಶೆಹಬಾಜ್ ಷರೀಫ್, ಪಿಪಿಪಿ ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಜೆಯುಐ-ಎಫ್ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಈ ಮೂರು ಗೂಂಡಾಗಳನ್ನು ಒಳಗೊಂಡಿರುವ ಪ್ರಸ್ತುತ ಸರ್ಕಾರ ವಿದೇಶಿ ಪಿತೂರಿಯನ್ನು ಸಂಪೂರ್ಣವಾಗಿ ಬೆಂಬಲಿಸಿದೆ ಎಂದು ಅವರು ಆರೋಪಿಸಿದರು.
ರಫ್ತು, ತೆರಿಗೆ ಸಂಗ್ರಹ ಮತ್ತು ಐತಿಹಾಸಿಕ ಮಟ್ಟದಲ್ಲಿ ಅಭಿವೃದ್ಧಿಯೊಂದಿಗೆ ದೇಶವು ಪ್ರಗತಿಯಲ್ಲಿರುವ ಸಮಯದಲ್ಲಿ ತನ್ನ ಸರ್ಕಾರವನ್ನು ಅಧಿಕಾರದಿಂದ ತೆಗೆದು ಹಾಕಲಾಯಿತು ಎಂದು ಖಾನ್ ಮತ್ತೊಮ್ಮೆ ಉಚ್ಚರಿಸಿದರು. ನಿರುದ್ಯೋಗ ಮಟ್ಟವು ಅತ್ಯಂತ ಕೆಳಮಟ್ಟದಲ್ಲಿದೆ. ನಾವು ಎಲ್ಲರಿಗಿಂತ ಮುಂದಿದ್ದೇವೆ. ನಾವು ಜೀವಗಳನ್ನು ಮತ್ತು ನಮ್ಮ ಬಡ ಜನರ ಉದ್ಯೋಗವನ್ನು ಉಳಿಸಿದೆ. ನಮ್ಮ ಸರ್ಕಾರವು ಕೊರೊನಾ ವೈರಸ್ ಸಮಯದಲ್ಲಿ ಉಲ್ಬಣಗೊಂಡ ಸಮಸ್ಯೆಗಳನ್ನು ಸಂಪೂರ್ಣ ನಿಭಾಯಿಸಿದೆ ಎಂದು ಖಾನ್ ಹೇಳಿದರು.