ETV Bharat / international

ಯುದ್ಧ ಪೀಡಿತ ಉಕ್ರೇನ್​ನಲ್ಲಿ ಯೋಧನ ಪ್ರಾಣ ಉಳಿಸಿತು ಈ ಸ್ಮಾರ್ಟ್‌ಫೋನ್!

ರಷ್ಯಾ ಸೇನೆ ದಾಳಿ ಮಾಡಿದಾಗ 7.62 ಎಂಎಂ ಬುಲೆಟ್​ ಉಕ್ರೇನ್​ ಸೈನಿಕನ ಫೋನ್​ನಲ್ಲೇ ಉಳಿದುಕೊಂಡಿದೆ. ಬುಲೆಟ್​ ತಾಗಿದ ಫೋನ್​ ತೋರಿಸುತ್ತಲೇ ಯೋಧ 'ಈ ಸ್ಮಾರ್ಟ್‌ಫೋನ್ ನನ್ನ ಜೀವ ಉಳಿಸಿದೆ' ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಯುದ್ಧ ಪೀಡಿತ ಉಕ್ರೇನ್​ನಲ್ಲಿ ಯೋಧನ ಪ್ರಾಣ ಉಳಿಸಿದ ಸ್ಮಾರ್ಟ್‌ಫೋನ್

author img

By

Published : Apr 20, 2022, 12:50 PM IST

ಕೀವ್ (ಉಕ್ರೇನ್): ನೀರಲ್ಲಿ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಎನ್ನುವಂತೆ ಯುದ್ಧ ಪೀಡಿತ ಉಕ್ರೇನ್​ನಲ್ಲಿ ಅಚ್ಚರಿ ಎಂಬಂತೆ ಯೋಧನೊಬ್ಬನ ಪ್ರಾಣವನ್ನು ಮೊಬೈಲ್​ ಫೋನ್​ ಉಳಿಸಿದೆ. ರಷ್ಯಾ ಸೇನೆ ಮಾಡಿದ ದಾಳಿ ವೇಳೆ ಯೋಧನ ಬಳಿಯಿದ್ದ ಮೊಬೈಲ್​ಗೆ ಬುಲೆಟ್​ ತಾಗಿದ್ದು, 'ಈ ಸ್ಮಾರ್ಟ್‌ಫೋನ್ ನನ್ನ ಜೀವ ಉಳಿಸಿದೆ' ಎಂದು ಸೈನಿಕ ಹೇಳಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಫೆ.24ರಿಂದಲೂ ರಷ್ಯಾ ಮತ್ತು ಉಕ್ರೇನ್ ನಡುವೆ ಘೋರ ಯುದ್ಧ ನಡೆಯುತ್ತಿದೆ. ಈ ನಡುವೆ ಉಕ್ರೇನ್​ ಸೈನಿಕರ ಮೇಲೆ ರಷ್ಯಾ ಸೇನೆ ದಾಳಿ ಮಾಡಿದ್ದು, 7.62 ಎಂಎಂ ಬುಲೆಟ್​ ಉಕ್ರೇನ್​ ಸೈನಿಕನ ಫೋನ್​ನಲ್ಲೇ ಉಳಿದುಕೊಂಡಿದೆ. ಬುಲೆಟ್​ ತಾಗಿದ ಫೋನ್​ ತೋರಿಸುತ್ತಲೇ ಯೋಧ ವಿಡಿಯೋದಲ್ಲಿ ಮಾತನಾಡಿ ಈ 'ಸ್ಮಾರ್ಟ್‌ಫೋನ್ ನನ್ನ ಜೀವ ಉಳಿಸಿದೆ' ಎಂದು ಹೇಳುತ್ತಾನೆ. ಅಲ್ಲದೇ, ತನ್ನ ಜೊತೆಗಿದ್ದ ಇತರ ಸೈನಿಕರೊಂದಿಗೆ ಸಹ ಮಾತನಾಡಿದ್ದು, ವಿಡಿಯೋದಲ್ಲಿ ಗುಂಡಿನ ಸದ್ದು ಸಹ ಕೇಳಿಸುತ್ತಿದೆ.

ಉಭಯ ರಾಷ್ಟ್ರಗಳ ಯುದ್ಧ ಆರಂಭವಾಗಿ ಎರಡು ತಿಂಗಳು ಸಮೀಪಿಸುತ್ತಿದ್ದರೂ ಯುದ್ಧ ಕೊನೆಗೊಳ್ಳುವ ಲಕ್ಷಣಗಳು ಕಾಣದಿರುವ ಸಂದರ್ಭದಲ್ಲಿ ಈ ವಿಡಿಯೋ ಹೊರ ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ: ಉಕ್ರೇನ್​​ನಲ್ಲಿ ಹಿಂಸಾಚಾರ ನಿಲ್ಲಿಸಲು ಭದ್ರತಾ ಮಂಡಳಿಯಲ್ಲಿ ಭಾರತ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.