ETV Bharat / international

ಪಾಕಿಸ್ತಾನ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಹಿಂದೂ ಮಹಿಳೆ; ಇತಿಹಾಸದಲ್ಲೇ ಇದೇ ಮೊದಲು - Hindu woman files nomination Pakistan elections

ಪಾಕಿಸ್ತಾನದಲ್ಲಿ ಮುಂಬರುವ ಚುನಾವಣೆಯಲ್ಲಿ ಹಿಂದೂ ಮಹಿಳೆಯೊಬ್ಬರು ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಬುನೇರ್ ಜಿಲ್ಲೆಯ ಪಿಕೆ 25 ಕ್ಷೇತ್ರದಿಂದ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಪಾಕಿಸ್ತಾನ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಹಿಂದು ಮಹಿಳೆ

author img

By ETV Bharat Karnataka Team

Published : Dec 26, 2023, 9:43 AM IST

ಖೈಬರ್ ಪಖ್ತುಂಖ್ವಾ (ಪಾಕಿಸ್ತಾನ): ಭಯೋತ್ಪಾದಕರ ಸ್ವರ್ಗ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದಾಳಿ, ದೌರ್ಜನ್ಯ ಹೆಚ್ಚುತ್ತಿರುವ ನಡುವೆ ಹೆಮ್ಮೆಯ ಸಂಗತಿಯೊಂದು ಹೊರಬಿದ್ದಿದೆ. ಇದೇ ಮೊಟ್ಟ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಮುಂಬರುವ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಯಿಂದ ಅವರು ಕಣಕ್ಕಿಳಿಯಲಿದ್ದಾರೆ. ಖೈಬರ್ ಪಖ್ತುಂಖ್ವಾದ ಬುನೇರ್ ಜಿಲ್ಲೆಯಿಂದ ನಾಮಪತ್ರ ಸಲ್ಲಿಸಿದ್ದಾರೆ.

ಸವೀರಾ ಪ್ರಕಾಶ್​​ ಚುನಾವಣೆಗೆ ಸ್ಪರ್ಧಿಸುತ್ತಿರುವ ಹೆಮ್ಮೆಯ ಹಿಂದೂ. 16ನೇ ರಾಷ್ಟ್ರೀಯ ಅಸೆಂಬ್ಲಿಗೆ 2024ರ ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಜೊತೆ ಗುರುತಿಸಿಕೊಂಡಿರುವ ಸವೀರಾ ಅವರು, ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಬುನೇರ್ ಜಿಲ್ಲೆಯ PK-25 ಕ್ಷೇತ್ರದಿಂದ ಅವರು ಸಾಮಾನ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇತ್ತೀಚೆಗೆ ವೈದ್ಯಕೀಯ ಸೇವೆಯಿಂದ ನಿವೃತ್ತರಾಗಿರುವ ಸವೀರಾ ಅವರ ತಂದೆ ಓಂ ಪ್ರಕಾಶ್ ಅವರು ಕಳೆದ 35 ವರ್ಷಗಳಿಂದ ಪಿಪಿಪಿ ಪಕ್ಷದ ಸದಸ್ಯರಾಗಿದ್ದಾರೆ.

ಸವೀರಾ ಅವರು ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಕ್ವಾಮಿ ವತನ್ ಪಕ್ಷದ ನಾಯಕ ಸಲೀಮ್ ಖಾನ್ ಎಂಬುವರು ಮಾಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಬುನರ್‌ನಿಂದ ಸವೀರಾ ಪ್ರಕಾಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಹಿಂದೂ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲು ಎಂದು ತಿಳಿಸಿದ್ದಾರೆ.

ಅಬೋಟಾಬಾದ್ ಇಂಟರ್​​ನ್ಯಾಷನಲ್ ಮೆಡಿಕಲ್ ಕಾಲೇಜಿನ ಪದವೀಧರರಾದ ಸವೀರಾ ಪ್ರಕಾಶ್ ಅವರು ಬುನರ್‌ನಲ್ಲಿ ಪಿಪಿಪಿ ಪಕ್ಷದ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ 2022 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಮುದಾಯದ ಅಭಿವೃದ್ಧಿಯ ಬದ್ಧತೆ ಹೊಂದಿರುವ ಅವರು, ಮಹಿಳೆಯರ ಸುಧಾರಣೆ, ಸುರಕ್ಷಿತ ವಾತಾವರಣ ಮತ್ತು ಅವರ ಹಕ್ಕುಗಳಿಗಾಗಿ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದಾರೆ.

'ಹಿಂದು'ಳಿದವರಿಗಾಗಿ ಕೆಲಸ: ತಮ್ಮ ತಂದೆಯಂತೆಯೇ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಹಿಂದುಳಿದ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇದೇ ಡಿಸೆಂಬರ್​ 23 ರಂದು ಚುನಾವಣೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷದ ಹಿರಿಯ ನಾಯಕರು ತನ್ನ ಉಮೇದುವಾರಿಕೆ ಅನುಮೋದಿಸಲಿದ್ದಾರೆ. ಮಾನವೀಯತೆ ಮತ್ತು ಜನ ಸೇವೆಗೆ ತಾನು ಬದ್ಧಳಾಗಿದ್ದೇನೆ ಎಂದು ಅವರು ಹೇಳಿದರು.

ಬುನರ್ ಪ್ರದೇಶವು ಪಾಕಿಸ್ತಾನದೊಂದಿಗೆ ವಿಲೀನಗೊಂಡ 55 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಪಾಕಿಸ್ತಾನದ ಚುನಾವಣಾ ಆಯೋಗದ (ಇಸಿಪಿ) ಇತ್ತೀಚಿನ ತಿದ್ದುಪಡಿಯಂತೆ ಸಾಮಾನ್ಯ ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳ ಕಡ್ಡಾಯ ಸ್ಪರ್ಧೆಗೆ ಶೇಕಡಾ 5 ರಷ್ಟು ಮೀಸಲಾತಿ ನೀಡಿದೆ.

ಇದನ್ನೂ ಓದಿ: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಪರಿಷ್ಕರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.