ಕ್ವೆಟ್ಟಾ(ಪಾಕಿಸ್ತಾನ): ವಾರದ ಹಿಂದೆ ಅಪಹರಣಕ್ಕೊಳಗಾಗಿದ್ದ ಸೇನಾಧಿಕಾರಿ ಕರ್ನಲ್ ಲೈಕ್ ಬೇಗ್ ಮಿರ್ಜಾ ಅವರ ಮೃತದೇಹ ಗುರುವಾರ ಬಲೂಚಿಸ್ತಾನ್ ಪ್ರಾಂತ್ಯದ ಹೆದ್ದಾರಿಯಲ್ಲಿ ಪತ್ತೆಯಾಗಿದೆ. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಈ ಹತ್ಯೆಯ ಹೊಣೆ ಹೊತ್ತುಕೊಂಡಿದೆ.
ಕರ್ನಲ್ ಮಿರ್ಜಾ ತಮ್ಮ ಕುಟುಂಬದೊಂದಿಗೆ ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಿಂದ ಸುಮಾರು 100 ಮೈಲಿ ದೂರದಲ್ಲಿರುವ ಜಿಯಾರತ್‌ಗೆ ಪ್ರವಾಸ ಹೊರಟಿದ್ದರು. ಇದಾದ ಬಳಿಕ ಉಗ್ರರು ಅವರನ್ನು ಅಪಹರಿಸಿದ್ದಾರೆ. ಹತ್ಯೆಯಲ್ಲಿ ಭಾಗಿಯಾದವರ ಪತ್ತೆಗಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ.
ಇದನ್ನೂ ಓದಿ: ತನ್ನ 6 ಮಕ್ಕಳ ಮುಂದೆಯೇ ಪತ್ನಿ ಕೊಂದು ಪಾತ್ರೆಯಲ್ಲಿ ಬೇಯಿಸಿದ ದುರುಳ ಪತಿ!
ಕಳೆದ ದಶಕದಿಂದ ಬಲೂಚಿಸ್ತಾನವು ಆಗಾಗ್ಗೆ ದಂಗೆಗೆ ಸಾಕ್ಷಿಯಾಗಿದೆ. ಇಲ್ಲಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಮತ್ತು ಇತರ ಪ್ರತ್ಯೇಕತಾವಾದಿ ಗುಂಪುಗಳು ಬಲೂಚಿಸ್ತಾನ ಪ್ರತ್ಯೇಕ ದೇಶಕ್ಕೆ ನಿರಂತರವಾಗಿ ಹೋರಾಡುತ್ತಿವೆ.