ETV Bharat / international

ಮಧ್ಯ ಆಫ್ರಿಕಾ ದೇಶ ಕಾಂಗೋದಲ್ಲಿ ವರುಣನ ಆರ್ಭಟ: ಸಾವಿನ ಸಂಖ್ಯೆ 443 ಕ್ಕೇರಿಕೆ - ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ

ಕಾಂಗೋದಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಭಾರಿ ಸಾವುನೋವು ಸಂಭವಿಸಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

rain
ಕಾಂಗೋದಲ್ಲಿ ಸುರಿದ ಭಾರಿ ಮಳೆ
author img

By

Published : May 24, 2023, 9:04 AM IST

Updated : May 24, 2023, 10:18 AM IST

ವಿಶ್ವಸಂಸ್ಥೆ : ಮಧ್ಯ ಆಫ್ರಿಕಾ ದೇಶ ಕಾಂಗೋದಲ್ಲಿ ಸುರಿದ ಭಾರಿ ಮಳೆಯಿಂದ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿರುವವರ ಸಂಖ್ಯೆ 443 ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯ ಮಾನವತಾವಾದಿ ಗುಂಪು ತಿಳಿಸಿದೆ.

ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾದ ಮೇ ತಿಂಗಳ ಆರಂಭದಲ್ಲಿ ಸುರಿದ ಜಡಿ ಮಳೆಯಿಂದ ನೂರಾರು ಜನರು ಗಾಯಗೊಂಡಿದ್ದಾರೆ ಮತ್ತು ಅನೇಕರು ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ (OCHA) ಕಚೇರಿ ಮಂಗಳವಾರ ಮಾಹಿತಿ ನೀಡಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಸಿಬ್ಬಂದಿ ಮುಖ್ಯವಾಗಿ ಪೂರ್ವ ದಕ್ಷಿಣ ಕಿವು ಪ್ರಾಂತ್ಯದ ಕಲೆಹೆ ಪ್ರದೇಶದಲ್ಲಿ ಶವಗಳನ್ನು ಹೂಳಲು ತುರ್ತು ಉಪಕರಣಗಳ ಅಗತ್ಯವಿರುವುದಾಗಿ ತಿಳಿಸಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

"ಪ್ರವಾಹಕ್ಕೆ ಸಿಲುಕಿ ಬದುಕುಳಿದವರ ಸ್ಥಳಾಂತರ, ಆಹಾರ ಮತ್ತು ವಸತಿ ನೆರವು, ರಸ್ತೆಗಳು ಹಾಗೂ ಸೇತುವೆಗಳ ದುರಸ್ಥಿಗೆ ಸಂಬಂಧಿಸಿದಂತೆ ಪ್ರವಾಹ ಪೀಡಿತ ಜನರನ್ನು ಭೇಟಿ ಮಾಡಿ, ಅವರ ಅಳಲು ಆಲಿಸಲಿದ್ದೇವೆ" ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ಹೇಳಿದೆ.

ಇದನ್ನೂ ಓದಿ : ಕಾಂಗೋದಲ್ಲಿ ಭೀಕರ ಪ್ರವಾಹ : 200ಕ್ಕೂ ಅಧಿಕ ಮಂದಿ ಬಲಿ, ಅನೇಕರು ನಾಪತ್ತೆ

ಮೇ 10 ರಿಂದ ಕನಿಷ್ಠ 17,000 ಜನರು ಆಹಾರ, ಆರೋಗ್ಯ, ರಕ್ಷಣೆ, ಆಶ್ರಯ ಸೇರಿದಂತೆ ಇತರೆ ಸಹಾಯವನ್ನು ಪಡೆದಿದ್ದಾರೆ. ದುರಂತದಲ್ಲಿ ಸುಮಾರು 3,000 ಕ್ಕೂ ಹೆಚ್ಚು ಮನೆಗಳು ಮತ್ತು 9,000 ಕ್ಕೂ ಹೆಚ್ಚು ಶಾಲೆಗಳು ಹಾನಿಗೊಳಗಾಗಿವೆ. ಪ್ರವಾಹ ಪೀಡಿತ ಸಮುದಾಯಗಳಿಗೆ ಮಾನವತಾವಾದಿಗಳು ಪ್ರತಿದಿನ 50,000 ಲೀಟರ್‌ಗಿಂತಲೂ ಹೆಚ್ಚು ಶುದ್ಧ ನೀರನ್ನು ಒದಗಿಸಿದ್ದಾರೆ ಎಂದು OCHA ಅಂಕಿಅಂಶ ಒದಗಿಸಿದೆ.

ಇದನ್ನೂ ಓದಿ : ಬೆಂಗಳೂರಿನ ಅಂಡರ್‌ಪಾಸ್‌ನಲ್ಲಿ ಮತ್ತೊಂದು ದುರಂತ : ಬೈಕ್ ಸವಾರ ಸಾವು

ಕಾಂಗೋದ ಪೂರ್ವಭಾಗದಲ್ಲಿ ಮೇ ತಿಂಗಳ ಆರಂಭದಲ್ಲಿ ಭಾರಿ ಮಳೆ ಸುರಿದಿತ್ತು. ಇದರ ಪರಿಣಾಮ ನದಿಗಳು ಏಕಾಏಕಿ ಉಕ್ಕಿ ಹರಿದಿದ್ದು, ಬುಶುಶು ಮತ್ತು ನ್ಯಾಮುಕುಬಿ ಗ್ರಾಮಗಳು ಮುಳುಗಿ ಹೋಗಿದ್ದವು. ಈ ಪ್ರದೇಶದಲ್ಲಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಚಿಕ್ಕ ಅಣೆಕಟ್ಟುಗಳು ವಿಪರೀತ ಮಳೆಯ ಆರ್ಭಟವನ್ನು ಎದುರಿಸಲಾಗದೆ ಒಡೆದು ಹೋಗಿದ್ದವು. ಇದರಿಂದಾಗಿ ಅನೇಕ ಹಳ್ಳಿಗಳು ಜಲಾವೃತವಾಗಿದ್ದು, ಕೃಷಿ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿತ್ತು.

ಇದನ್ನೂ ಓದಿ : ಮುಂಗಾರು ಪೂರ್ವ ಮಳೆ ಅವಾಂತರಕ್ಕೆ ರಾಜ್ಯದಲ್ಲಿ ಈವರೆಗೆ 52 ಮಂದಿ ಸಾವು: ಸಿಎಂ ಸಿದ್ದರಾಮಯ್ಯ

ನ್ಯಾಮುಕುಬಿ ಗ್ರಾಮದಲ್ಲಿ ಪ್ರವಾಹಕ್ಕೆ ನೂರಾರು ಮನೆಗಳು ಕೊಚ್ಚಿ ಹೋಗಿದ್ದು, ಅವಶೇಷಗಳು, ಕೆಸರಿನಲ್ಲಿ ಹುದುಗಿ ಹೋಗಿದ್ದ ಕೆಲವರ ಮೃತದೇಹಗಳನ್ನು ಅಗೆದು ಹೊರತೆಗೆಯಲಾಗಿತ್ತು. ಹಾಗೆಯೇ, ಕಿವು ಸರೋವರದ ತೀರಕ್ಕೆ ಸಮೀಪವಿರುವ ಕಲೆಹೆ ಪ್ರದೇಶದ ಹಳ್ಳಿಗಳಿಗೆ ನದಿ ನೀರು ಬಂದು ಅಪ್ಪಳಿಸಿದ್ದು, ಅನೇಕರು ಗಾಯಗೊಂಡಿದ್ದರು.

ಇದನ್ನೂ ಓದಿ : ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ: ಐದು ದಿನ ರಾಜ್ಯದಲ್ಲಿ ಮಳೆ, ಅಲರ್ಟ್ ಘೋಷಣೆ...

Last Updated : May 24, 2023, 10:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.