ETV Bharat / international

ಸ್ಪೇನ್​ನಲ್ಲಿ ಬಿಸಿ ಗಾಳಿ ಅಲೆ: ತಾಪಕ್ಕೆ ವಾರದಲ್ಲಿ 510 ಜನರ ಸಾವು - ತಾಪಮಾನದಿಂದ ಸಾವು ಸಂಖ್ಯೆ ಏರಿಕೆ

ಸ್ಪೇನ್​ನಲ್ಲಿ ಒಂದೆಡೆ ಕಾಡ್ಗಿಚ್ಚು ಹೊತ್ತಿಕೊಂಡಿದ್ದರೆ, ಇನ್ನೊಂದೆಡೆ ತಾಪಮಾನದ ವಿಪರೀತ ಏರಿಕೆ ಮರಣಮೃದಂಗ ಬಾರಿಸುತ್ತಿದೆ.

ತಾಪಕ್ಕೆ ವಾರದಲ್ಲಿ 510 ಜನರ ಸಾವು
ತಾಪಕ್ಕೆ ವಾರದಲ್ಲಿ 510 ಜನರ ಸಾವು
author img

By

Published : Jul 19, 2022, 9:05 AM IST

ಮ್ಯಾಡ್ರಿಡ್: ಭಾರತದಾದ್ಯಂತ ಮಳೆ ಜೋರಾಗಿದ್ದರೆ, ಯೂರೋಪ್‌ನ ಸ್ಪೇನ್​-ಪೋರ್ಚುಗಲ್ ದೇಶಗಳಲ್ಲಿ ಬಿಸಿಲು ಜನರ ಪ್ರಾಣ ತೆಗೆಯುತ್ತಿದೆ. ಸ್ಪೇನ್​ನಲ್ಲಿ ಕಳೆದ ಒಂದು ವಾರದಲ್ಲಿ ತಾಪಮಾನ ಸಂಬಂಧಿತ ಕಾರಣಗಳಿಂದ 510 ಜನರು ಮೃತಪಟ್ಟಿದ್ದಾರೆ. ಅದರಲ್ಲೂ ಶನಿವಾರ(ಜು.16) ಒಂದೇ ದಿನದಲ್ಲಿ 150 ಜನರು ಸಾವಿಗೀಡಾಗಿರುವುದು ಭಾರಿ ಆತಂಕ ಉಂಟು ಮಾಡಿದೆ.

ದೇಶದ ಕೆಲವು ಭಾಗಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದಾಗಿ ಜನರು ಅನಾರೋಗ್ಯಕ್ಕೀಡಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಸ್ಪೇನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಜುಲೈ 10 ಮತ್ತು 16 ರ ನಡುವೆ ಇದು ಅಧಿಕವಾಗಿದೆ ಎಂಬುದು ಸಚಿವಾಲಯದ ಮಾಹಿತಿ.

ಸಿಸ್ಟಮ್ ಆಫ್ ಮಾನಿಟರೈಸೇಶನ್ ಆಫ್ ಡೈಲಿ ಮಾರ್ಟಲಿಟಿ ಪ್ರಕಾರ, ದೇಶದಲ್ಲಿ ತಾಪಮಾನ ಉಲ್ಬಣಗೊಂಡಂತೆ ಶಾಖ ಸಂಬಂಧಿತ ಸಾವುಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಜುಲೈ 10 ರಿಂದ 13 ರವರೆಗಿನ ನಾಲ್ಕು ದಿನಗಳಲ್ಲಿ ಸಾವಿನ ಸಂಖ್ಯೆ 15 ರಿಂದ 60 ಕ್ಕೆ ಅಂದರೆ, 4 ಪಟ್ಟು ಹೆಚ್ಚಾಗಿದೆ. ಗುರುವಾರ 93 ಆದರೆ, ಅದು ಶುಕ್ರವಾರಕ್ಕೆ 123 ಸಾವಿಗೆ ಏರಿಕೆ ಕಂಡಿತು. ಶನಿವಾರದಂದು 150 ಸಾವು ದಾಖಲಾಗಿ ಪರಾಕಾಷ್ಠೆಗೆ ತಲುಪಿದೆ ಎಂದು ಮಾಹಿತಿ ನೀಡಿದೆ.

ಭಾನುವಾರದಿಂದ ಹೊಸ ಅಂಕಿಅಂಶಗಳು ಪ್ರಕಟವಾಗಬೇಕಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕವಿದೆ. ತಾಪಮಾನ ವಿಶೇಷವಾಗಿ ವಯಸ್ಸಾದವರ ಮೇಲೆ ಪರಿಣಾಮ ಬೀರುತ್ತಿದೆ. 510 ಬಲಿಪಶುಗಳಲ್ಲಿ 321 ಮಂದಿ 85 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, 121 ಮಂದಿ 75 ರಿಂದ 84 ವರ್ಷ ವಯಸ್ಸಿನವರು ಮತ್ತು 44 ಮಂದಿ 65 ರಿಂದ 74 ವರ್ಷ ವಯಸ್ಸಿನವರಾಗಿದ್ದಾರೆ.

ಇದರೊಂದಿಗೆ ಶಾಖ ಇನ್ನಷ್ಟು ಹೆಚ್ಚಾಗಲು ಹೊತ್ತಿಕೊಂಡಿರುವ ಶಾಖವೂ ಕಾರಣವಾಗಿದೆ. ಕಳೆದ 10 ದಿನಗಳಿಂದ ಪೈನ್​ ಅರಣ್ಯ ಪ್ರದೇಶದಕ್ಕೆ ಬೆಂಕಿ ಬಿದ್ದಿದೆ. ಇದು ಇನ್ನಷ್ಟು ಉಷ್ಣಾಂಶವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಕೊರೊನಾ ಬಳಿಕ ಮತ್ತೊಂದು ತಲೆನೋವು: ಎಬೋಲಾ ಜಾತಿಯ ವೈರಸ್​ಗೆ ಇಬ್ಬರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.