ETV Bharat / international

ಮಾನಸಿಕ ಖಿನ್ನತೆಗೆ ಬಿಸಿಯೋಗ ಪರಿಹಾರವಂತೆ: ಸಂಶೋಧನೆ ಹೇಳುವುದೇನು?

ವಾರದಲ್ಲಿ ಒಮ್ಮೆ ಬಿಸಿಯೋಗವನ್ನು ಅಭ್ಯಸಿಸುವುದರಿಂದ ಖಿನ್ನತೆಯ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಖಿನ್ನತೆ
ಖಿನ್ನತೆ
author img

By ETV Bharat Karnataka Team

Published : Oct 23, 2023, 9:48 PM IST

ನ್ಯೂಯಾರ್ಕ್: ವಾರಕ್ಕೊಮ್ಮೆ ಬಿಸಿಯೋಗ ಮಾಡುವುದರಿಂದ ಮಾನಸಿತ ಖಿನ್ನತೆ ಕಡಿಮೆ ಮಾಡಬಹುದು. ಇದು ಮಧ್ಯಮದಿಂದ ತೀವ್ರ ಖಿನ್ನತೆಯ ಲಕ್ಷಣಗಳಿಂದ ಬಳಲುತ್ತಿರುವ ರೋಗಿಗಳಿಗೆ ಕಾರ್ಯಸಾಧ್ಯವಾದ ಚಿಕಿತ್ಸಾ ಆಯ್ಕೆ ಎಂದು ಸಂಶೋಧನೆ ತಿಳಿಸಿದೆ.

ಮಸಾಚುಸೆಟ್ಸ್ ಜನರಲ್ ಹಾಸ್ಪಿಟಲ್‌ನ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಸಂಶೋಧನೆಯಲ್ಲಿ ತೀವ್ರ ಒತ್ತಡದಿಂದ ಬಳಲುತ್ತಿದ್ದ ಯುವಕರೂ ಸೇರಿದಂತೆ ವಯಸ್ಕರನ್ನು ರ್ಯಾಂಡಮ್ ಆಗಿ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ನಿಗದಿತ ಯೋಗದ ಅವಧಿಯ ಅರ್ಧದಷ್ಟು ದಿನಗಳವರೆಗೆ ಭಾಗವಹಿಸಿದ್ದ ಜನರಲ್ಲಿಯೂ ಸಹ ಖಿನ್ನತೆಯ ಲಕ್ಷಣಗಳು ಕಡಿಮೆಯಾಗಿವೆ. ಇದು ವಾರಕ್ಕೊಮ್ಮೆ ಬಿಸಿಯೋಗ ಅವಧಿಯಿಂದ ಪಡೆಯಬಹುದಾದ ಪ್ರಯೋಜನ ಎಂಬುದನ್ನು ಅಧ್ಯಯನ ಸೂಚಿಸುತ್ತವೆ.

ಎಂಟು ವಾರಗಳ ಪ್ರಯೋಗದಲ್ಲಿ ಭಾಗವಹಿಸಿದ 80 ಜನರನ್ನು ಎರಡು ಗುಂಪುಗಳಾಗಿ ವಿಭಾಗಿಸಲಾಯಿತು. ಒಂದು ಗುಂಪು 40.5 ಡಿಗ್ರಿ ಸೆಲ್ಸಿಯಸ್ ಕೋಣೆಯಲ್ಲಿ 90-ನಿಮಿಷದ ಅವಧಿಯ ಯೋಗ ಅಭ್ಯಸಿಸಿದರು. ಇನ್ನೊಂದು ಗುಂಪನ್ನು ವೇಟ್‌ಲಿಸ್ಟ್‌ನಲ್ಲಿ ಇರಿಸಲಾಗಿತ್ತು (ಇವರಿಗೆ ಯಾವುದೇ ತರಬೇತಿ ನೀಡಲಿಲ್ಲ).

ಸಂಶೋಧನೆಯಲ್ಲಿ 33 ಜನ ಯೋಗದಲ್ಲಿ ಭಾಗವಹಿಸಿದ್ದರು. ಉಳಿದ 32 ಮಂದಿಯನ್ನು ವೇಟ್‌ಲಿಸ್ಟ್‌ನಲ್ಲಿ ಇರಿಸಲಾಗಿತ್ತು. ಎರಡೂ ಗುಂಪನ್ನು ವಿಶ್ಲೇಷಣೆಯಲ್ಲಿ ಸೇರಿಸಲಾಗಿದೆ. ಇನ್ನೊಂದು ಗುಂಪಾದ ಮಧ್ಯಸ್ಥಿಕೆ ಗುಂಪಿನಲ್ಲಿ ಭಾಗವಹಿಸುವವರಿಗೆ ವಾರಕ್ಕೆ ಕನಿಷ್ಠ ಎರಡು ಯೋಗ ತರಗತಿಗಳನ್ನು ಸೂಚಿಸಲಾಗಿತ್ತು. ಆದರೆ ಒಟ್ಟಾರೆಯಾಗಿ ಅವರು ಎಂಟು ವಾರಗಳಲ್ಲಿ ಸರಾಸರಿ 10.3 ತರಗತಿಗಳಿಗೆ ಹಾಜರಾಗಿದ್ದರು.

ಎಂಟು ವಾರಗಳ ನಂತರ ಯೋಗದಲ್ಲಿ ಭಾಗವಹಿಸಿದವರು ಹಾಗೂ ವೇಯ್ಟ್‌ಲಿಸ್ಟ್ (ಭಾಗವಹಿಸದವರು) ಮಾಡಲಾದ ಜನರನ್ನು ಪರಿಶೀಲಿಸಿದಾಗ, ಮೊದಲ ಗುಂಪಿನಲ್ಲಿನ ಖಿನ್ನತೆಯ ಪ್ರಮಾಣ ವೇಯ್ಟ್​ಲೀಸ್ಟ್‌ನಲ್ಲಿದ್ದವರಿಗಿಂತ ಕಡಿಮೆಯಾಗಿತ್ತು ಎಂಬುದಾಗಿ ತಿಳಿದುಬಂದಿದೆ.

ವೇಯ್ಟ್‌ಲಿಸ್ಟ್​ನಲ್ಲಿದ್ದ ಶೇ 6.3ಕ್ಕೆ ಹೋಲಿಸಿದರೆ, ಯೋಗದಲ್ಲಿ ಭಾಗವಹಿಸಿದ ಶೇ 59.3ರಷ್ಟು ಜನರಲ್ಲಿನ ರೋಗಲಕ್ಷಣಗಳಲ್ಲಿ ಶೇ 50 ಅಥವಾ ಅದಕ್ಕಿಂತಲೂ ಹೆಚ್ಚಿನ ಇಳಿಕೆ ಕಂಡುಬಂದಿದೆ ಎಂದು ವೈದ್ಯಾಧಿಕಾರಿಗಳು ಗಮನಿಸಿದ್ದಾರೆ.

ವೇಯ್ಟ್‌ಲಿಸ್ಟ್ ಗುಂಪಿನಲ್ಲಿನ ಶೇ 6.3ಕ್ಕೆ ಹೋಲಿಸಿದರೆ, ಯೋಗದಲ್ಲಿ ಭಾಗವಹಿಸಿದ ಜನರಲ್ಲಿ ಶೇ. 44 ರಷ್ಟು ಕಡಿಮೆ IDS-CR ಸ್ಕೋರ್‌ ಸಾಧಿಸಿದ್ದಾರೆ. ಇದು ಅವರ ಖಿನ್ನತೆಯ ಉಪಶಮನವೆಂದು ಪರಿಗಣಿಸಲಾಗಿದೆ ಎಂದು ಜರ್ನಲ್ ಆಫ್ ಕ್ಲಿನಿಕಲ್ ಸೈಕಿಯಾಟ್ರಿಯಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿದೆ.

"ಯೋಗ ಮತ್ತು ಶಾಖಾಧಾರಿತ ಚಿಕಿತ್ಸೆಯಿಂದ ಬೋನಸ್ ಆಗಿ ಹೆಚ್ಚುವರಿ ಭೌತಿಕ ಪ್ರಯೋಜನಗಳೊಂದಿಗೆ ಔಷಧಿರಹಿತ ವಿಧಾನವನ್ನು ಒದಗಿಸುವ ಮೂಲಕ ಖಿನ್ನತೆಯ ರೋಗಿಗಳ ಚಿಕಿತ್ಸೆಯ ಕೋರ್ಸ್ ಅನ್ನು ಸಂಭಾವ್ಯವಾಗಿ ಬದಲಾಯಿಸಬಹುದು" ಎಂದು ಡಿಪ್ರೆಶನ್ ಕ್ಲಿನಿಕಲ್‌ನಲ್ಲಿ ಯೋಗ ಅಧ್ಯಯನದ ನಿರ್ದೇಶಕ ಮಾರೆನ್ ನೈರ್ ಹೇಳಿದರು.

ಖಿನ್ನತೆಯ ಚಿಕಿತ್ಸೆಗಾಗಿ ಯೋಗಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ಶಾಖ ಹೊಂದಿದೆಯೇ ಎಂಬುದನ್ನು ತಿಳಿಯಲು ಭವಿಷ್ಯದಲ್ಲಿ ಬಿಸಿ ಯೋಗ ಹಾಗೂ ಬಿಸಿರಹಿತ ಯೋಗವನ್ನು ಹೋಲಿಸುವ ಅಗತ್ಯವಿದೆ ಎಂದು ಮಸಾಚುಸೆಟ್ಸ್‌ನ ಖಿನ್ನತೆಯ ಕ್ಲಿನಿಕಲ್ ಮತ್ತು ಸಂಶೋಧನಾ ಕಾರ್ಯಕ್ರಮದ ನಿರ್ದೇಶಕ ಹಿರಿಯ ಲೇಖಕ ಡೇವಿಡ್ ಮಿಸ್ಚೌಲನ್ ತಿಳಿಸಿದ್ದಾರೆ.

ಇದನ್ನೂ ಓದಿ: International Yoga Day 2023: ಉತ್ತಮ ಆರೋಗ್ಯಕ್ಕೆ ಯೋಗವೇ ಮದ್ದು.. ವಾತ, ಪಿತ್ತ ಮತ್ತು ಕಫ ನಿಯಂತ್ರಣಕ್ಕೆ ಪ್ರಾಣಾಯಾಮ ಸಹಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.