ETV Bharat / international

ಸಂಘರ್ಷ ಕೊನೆಗೊಳಿಸಲು ರಷ್ಯಾ ಮಧ್ಯಸ್ಥಿಕೆಗೆ ಬೇಡಿಕೆ ಇಟ್ಟ ಹಮಾಸ್ - ಹಮಾಸ್​ ಉಗ್ರಗಾಮಿ ಗುಂಪು ಪುಟಿನ್ ಅವರ ನಿಲುವನ್ನು

ಇಸ್ರೇಲ್-ಹಮಾಸ್​ ಸಂಘರ್ಷ ಕೊನೆಗೊಳಿಸಲು ರಷ್ಯಾ ಮಧ್ಯಸ್ಥಿಕೆ ವಹಿಸಲಿ ಎಂದು ಹಮಾಸ್ ಬೇಡಿಕೆ ಇಟ್ಟಿದೆ.

Russia can play crucial role in settling conflict with Israel: Hamas

author img

By ETV Bharat Karnataka Team

Published : Oct 15, 2023, 7:01 PM IST

ಹೈದರಾಬಾದ್ : ಇಸ್ರೇಲ್ ಜೊತೆಗಿನ ಮಿಲಿಟರಿ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ರಷ್ಯಾ ಪ್ರಮುಖ ಪಾತ್ರ ವಹಿಸಬಹುದು ಎಂದು ಪ್ಯಾಲೆಸ್ಟೈನ್‌ನ ಹಮಾಸ್ ನಂಬಿದೆ ಎಂದು ಹಮಾಸ್​ನ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಅಲಿ ಬರಾಕಾ ಹೇಳಿದ್ದಾರೆ. "ಹಮಾಸ್ ಗುಂಪು ರಷ್ಯಾ ಮತ್ತು ಅದರ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮೇಲೆ ಉನ್ನತ ಮಟ್ಟದ ನಂಬಿಕೆಯನ್ನು ಹೊಂದಿದೆ. ಹೀಗಾಗಿ ಸಂಘರ್ಷವನ್ನು ಪರಿಹರಿಸುವಲ್ಲಿ ರಷ್ಯಾದ ಮಧ್ಯಸ್ಥಿಕೆಯನ್ನು ನಾವು ಸ್ವಾಗತಿಸುತ್ತೇವೆ" ಎಂದು ಬರಾಕಾ ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ಟಾಸ್​ಗೆ (TASS) ತಿಳಿಸಿದರು.

"ಇಸ್ರೇಲ್​ನ ಬಾಂಬ್ ದಾಳಿ ಮತ್ತು ಗಾಜಾ ಪಟ್ಟಿಯ ಮೇಲಿನ ದಿಗ್ಬಂಧನದಿಂದ ಉಂಟಾಗಿರುವ ನಾಗರಿಕರ ಸಂಕಷ್ಟವನ್ನು ಆದಷ್ಟು ಬೇಗ ಕೊನೆಗೊಳಿಸಲು ನಾವು ಆಸಕ್ತಿ ಹೊಂದಿದ್ದೇವೆ. ಹಮಾಸ್ ನಾಯಕತ್ವವು ಮಾಸ್ಕೋದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಅರಬ್ ದೇಶಗಳಲ್ಲಿ ರಷ್ಯಾದ ರಾಜತಾಂತ್ರಿಕರೊಂದಿಗೆ ಸಂಭಾವ್ಯ ಸಭೆಗಳಿಗೆ ನಾವು ಸಿದ್ಧರಿದ್ದೇವೆ ಮತ್ತು ಅವರ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ" ಎಂದು ಅವರು ಹೇಳಿದರು.

ಹಮಾಸ್​ ಉಗ್ರಗಾಮಿ ಗುಂಪು ಪುಟಿನ್ ಅವರ ನಿಲುವನ್ನು ಸಂಪೂರ್ಣವಾಗಿ ಬೆಂಬಲಿಸಿದೆ. ಈ ಬಗ್ಗೆ ಮಾತನಾಡಿದ ಬರಾಕಾ, ಪ್ರಾದೇಶಿಕ ಬೆಳವಣಿಗೆಗಳನ್ನು ಮೌಲ್ಯಮಾಪನ ಮಾಡುವ ರಷ್ಯಾದ ನಾಯಕರ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಪ್ಯಾಲೆಸ್ಟೈನಿಯನ್ನರ ರಕ್ಷಣೆಗಾಗಿ ರಷ್ಯಾ ಧ್ವನಿ ಎತ್ತಿರುವುದು ಮತ್ತು ಆಕ್ರಮಣ ನಿಲ್ಲಿಸುವಂತೆ, ಗಾಜಾ ಪಟ್ಟಿಯ ಮೇಲಿನ ದಿಗ್ಬಂಧನ ತೆಗೆದುಹಾಕುವಂತೆ ಮತ್ತು ಮಾನವೀಯ ನೆರವನ್ನು ಪುನರಾರಂಭಿಸಲು ಒತ್ತಾಯಿಸಿರುವ ಮಾಸ್ಕೋದ ಬೇಡಿಕೆಗಳು ನಮ್ಮ ಪಾಲಿಗೆ ನಿರ್ಣಾಯಕವಾಗಿವೆ ಎಂದು ಬರಾಕಾ ಒತ್ತಿ ಹೇಳಿದರು.

ಸಂಘರ್ಷ ನಿರತವಾಗಿರುವ ಎರಡೂ ಪಕ್ಷಗಳೊಂದಿಗೆ ಸಂಬಂಧ ಹೊಂದಿರುವುದರಿಂದ ಪ್ಯಾಲೆಸ್ಟೈನ್ - ಇಸ್ರೇಲ್ ಶಾಂತಿ ಸಂಧಾನಕ್ಕೆ ರಷ್ಯಾ ಸಹಾಯ ಮಾಡಬಹುದು ಎಂದು ಪುಟಿನ್ ಶುಕ್ರವಾರ ಹೇಳಿದ್ದರು. "ರಷ್ಯಾ ಸಂಧಾನದ ಮಧ್ಯಸ್ಥಿಕೆ ವಹಿಸಬಹುದು. ಕಳೆದ 15 ವರ್ಷಗಳಿಂದ ನಾವು ಇಸ್ರೇಲ್​ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಹಾಗೆಯೇ ಪ್ಯಾಲೆಸ್ಟೈನ್​ನೊಂದಿಗೂ ಸಾಂಪ್ರದಾಯಿಕ ಸಂಬಂಧ ಹೊಂದಿದ್ದೇವೆ. ಹೀಗಾಗಿ ಯಾರದೋ ಬೇಡಿಕೆಗಾಗಿ ನಾವು ಸಂಧಾನ ಮಾಡುತ್ತಿದ್ದೇವೆ ಎಂದು ಯಾರೂ ಅನುಮಾನಿಸಲಾಗದು" ಎಂದು ಅವರು ಹೇಳಿದರು.

ಬೇಡಿಕೆ ಇದ್ದರೆ ಮಧ್ಯಸ್ಥಿಕೆ ವಹಿಸಲು ಮಾಸ್ಕೋ ಸಹಾಯ ಮಾಡುತ್ತದೆ. ಎರಡೂ ಪಕ್ಷಗಳ ಮಧ್ಯೆ ಒಮ್ಮತದ ಒಪ್ಪಂದ ಏರ್ಪಡಿಸುವುದೇ ಸಂಧಾನಕ್ಕೆ ದಾರಿ ಎಂದು ಪುಟಿನ್ ತಿಳಿಸಿದರು.

ಇದನ್ನೂ ಓದಿ: ತನ್ನನ್ನು ತಾನು ರಕ್ಷಿಸಿಕೊಳ್ಳಲು ಇಸ್ರೇಲ್ ಸ್ವತಂತ್ರ: ಆದರೆ ಪ್ಯಾಲೆಸ್ಟೀನ್​ ಸಹ ಸ್ವತಂತ್ರ ದೇಶ - ಪುಟಿನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.