ETV Bharat / international

ನೈಜೀರಿಯಾ: ಗ್ರಾಮಕ್ಕೆ ನುಗ್ಗಿದ ದುಷ್ಕರ್ಮಿಗಳಿಂದ ಮನಬಂದಂತೆ ಗುಂಡಿನ ದಾಳಿ; 24 ಮಂದಿ ಸಾವು - nigeria latest news

ನೈಜೀರಿಯಾದ ಗ್ರಾಮವೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಪು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಬಂದೂಕುಧಾರಿಗಳಿಂದ ಗುಂಡಿನ ದಾಳಿ
ಬಂದೂಕುಧಾರಿಗಳಿಂದ ಗುಂಡಿನ ದಾಳಿ
author img

By

Published : Jul 10, 2023, 9:50 AM IST

ಅಬುಜಾ (ನೈಜೀರಿಯಾ): ನೈಜೀರಿಯಾದ ಬೆನ್ಯೂ ರಾಜ್ಯದ ಗ್ರಾಮವೊಂದಕ್ಕೆ ಬಂದೂಕುಧಾರಿಗಳು ನುಗ್ಗಿ 24 ಗ್ರಾಮಸ್ಥರನ್ನು ಹತ್ಯೆಗೈದಿರುವ ಘಟನೆ ನಡೆದಿದೆ. ಬೆನ್ಯೂ ರಾಜ್ಯ ಗವರ್ನರ್‌ ವಕ್ತಾರ ಟೆರ್ಸು ಕುಲಾ ನೀಡಿದ ಮಾಹಿತಿ ಪ್ರಕಾರ, ಬಂದೂಕುಧಾರಿಗಳು ಶನಿವಾರ ಉಕುಮ್ ಜಿಲ್ಲೆಯ ಅಕ್ಪುನಾ ಗ್ರಾಮದ ಜನರಿಗೆ ಮನಬಂದಂತೆ ಗುಂಡಿಕ್ಕಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಉಗ್ರರ ಗುಂಪಿನಿಂದಲೇ ದಾಳಿ ನಡೆದಿದೆ. ಗ್ರಾಮಸ್ಥರ ಮಾರಣಹೋಮಕ್ಕೆ ಅವರೇ ಹೊಣೆ ಎಂದು ತಿಳಿಸಿದ್ದಾರೆ. ಕಳೆದ ವರ್ಷವೂ ಕೂಡ ನೈಜೀರಿಯಾದ ವಾಯುವ್ಯ ಮತ್ತು ಮಧ್ಯ ಭಾಗದ ವಿವಿಧೆಡೆ ನಡೆದ ಸಶಸ್ತ್ರ ಗುಂಪುಗಳ ದಾಳಿಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು ಎಂದು ಪೊಲೀಸ್ ವಕ್ತಾರ ಕ್ಯಾಥರೀನ್ ಅನೆನೆ ಮಾಹಿತಿ ನೀಡಿದರು.

ಘಟನೆ ಬಗ್ಗೆ ಅಲ್ಲಿನ ಜನಪ್ರತಿನಿಧಿ ಎಜ್ರಾ ನೈಯೊಂಗೊ ಪ್ರತಿಕ್ರಿಯಿಸಿ, ಘಟನೆಯಲ್ಲಿ ಇಪ್ಪತ್ನಾಲ್ಕು ಜನರು ಸಾವನ್ನಪ್ಪಿದ್ದಾರೆ. 8 ಮೃತದೇಹಗಳು ಮಾತ್ರ ಪತ್ತೆಯಾಗಿವೆ. ಹಲವರಿಗೆ ಗಾಯಗಳಾಗಿವೆ ಎಂದು ಹೇಳಿದರು.

ಶಂಕಿತರನ್ನು ಪತ್ತೆ ಹಚ್ಚಿ ಬಂಧಿಸಲು ಭದ್ರತಾ ಪಡೆಗಳಿಗೆ ನಿರ್ದೇಶಿಸಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಕೆಲ ದಿನಗಳ ಹಿಂದಷ್ಟೇ ಕುರಿಗಾಹಿಗಳು ನೀರಿಗಾಗಿ ರೈತರೊಂದಿಗೆ ಘರ್ಷಣೆಗಿಳಿದಿದ್ದರು. ಈ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ಹಲವರು ಗಾಯಗೊಂಡು ಸಾವನ್ನಪ್ಪಿದ್ದರು. ಇದೀಗ ಗುಂಡಿನ ದಾಳಿಯಿಂದ ಮತ್ತಷ್ಟು ಜನ ಸಾವನ್ನಪ್ಪಿದ್ದಾರೆ. ಈ ವರ್ಷ ಬೆನ್ಯುನಲ್ಲಿ ನಡೆದ ಹಿಂಸಾಚಾರದಲ್ಲಿ ಇಲ್ಲಿಯವರೆಗೂ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ನೈಜೀರಿಯಾದ ಸೆನೆಟ್‌ನಲ್ಲಿ ಗ್ರಾಮವನ್ನು ಪ್ರತಿನಿಧಿಸುವ ಎಮ್ಯಾನುಯೆಲ್ ಉಡೆಂಡೆ ಅವರ ಪ್ರಕಾರ, ಅಕ್ಪುನಾ ಗ್ರಾಮಕ್ಕೆ ನುಗ್ಗಿ ಬಂದೂಕುಧಾರಿಗಳು ಎರಡು ಗಂಟೆಗಳಿಗೂ ಹೆಚ್ಚು ಕಾಲ ಮನಬಂದಂತೆ ಗುಂಡು ಹಾರಿಸಿದ್ದಾರೆ. ಇಲ್ಲಿ ಅನೇಕ ಗ್ರಾಮಗಳಿದ್ದು, ಯಾವ ಸಮಯದಲ್ಲಿ ಬಂದು ದಾಳಿ ನಡೆಸುತ್ತಾರೋ ಎಂಬ ಭಯ ಗ್ರಾಮಸ್ಥರಲ್ಲಿ ಮೂಡಿದೆ. ಜನರ ಸುರಕ್ಷತೆ ಬಗ್ಗೆ ಅವರು​ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನೈಜೀರಿಯಾದ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ಇಂತಹ ಸ್ಥಳಗಳಲ್ಲಿ ನಿಯೋಜಿಸಲು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸೊಮಾಲಿಯಾ: 40 ಅಲ್ ಶಬಾಬ್ ಉಗ್ರರ ಹತ್ಯೆಗೈದ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.