ಕೆನಡಾ: ಕೆನಡಾದ ಮೃಗಾಲಯವೊಂದರಲ್ಲಿ ಗೊರಿಲ್ಲಾ ತನ್ನ ಮಗುವನ್ನು ಸಂದರ್ಶಕರಿಗೆ ತೋರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆನಡಾದ ಕ್ಯಾಲ್ಗರಿ ಮೃಗಾಲಯದಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಇದನ್ನು ಮಾಧ್ಯಮ ಕಂಪನಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಭಾರಿ ಸಂಖ್ಯೆಯ ವೀಕ್ಷಣೆಗಳನ್ನು ಪಡೆದುಕೊಂಡಿದೆ.
-
A proud mama shows off her baby at the Calgary Zoo. 🦍🥰#viralhog #gorilla #zoo #canada pic.twitter.com/uqSyz1Dcgm
— ViralHog (@ViralHog) July 28, 2022 " class="align-text-top noRightClick twitterSection" data="
">A proud mama shows off her baby at the Calgary Zoo. 🦍🥰#viralhog #gorilla #zoo #canada pic.twitter.com/uqSyz1Dcgm
— ViralHog (@ViralHog) July 28, 2022A proud mama shows off her baby at the Calgary Zoo. 🦍🥰#viralhog #gorilla #zoo #canada pic.twitter.com/uqSyz1Dcgm
— ViralHog (@ViralHog) July 28, 2022
ಹೆಣ್ಣು ಗೊರಿಲ್ಲಾ ಮಗುವನ್ನು ಚುಂಬಿಸುತ್ತಿರುವುದು ಮತ್ತು ಮುದ್ದಿಸುತ್ತಿರುವುದನ್ನು ಹಾಗೂ ಮಗುವನ್ನು ಮುದ್ದಾಗಿ ತಬ್ಬಿಕೊಳ್ಳುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಸಂದರ್ಶಕರು ಹೆಣ್ಣು ಗೊರಿಲ್ಲಾದ ಹಾವಭಾವದಿಂದ ಆಶ್ಚರ್ಯಚಕಿತರಾಗಿದ್ದಾರೆ.
ಇಂಟರ್ನೆಟ್ ಬಳಕೆದಾರರ ಒಂದು ವಿಭಾಗವು ಈ ವಿಡಿಯೋವನ್ನು ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದೆ. ಇನ್ನೊಬ್ಬರು ಇದನ್ನು 'ಅದು ಮನುಷ್ಯರಂತೆ ಮಗುವನ್ನು ಮುದ್ದಾಡಿದೆ' ಎಂದು ಬರೆದಿದ್ದಾರೆ. ಕೆಲವರು ಪ್ರಾಣಿಗಳನ್ನು ಪಂಜರದಲ್ಲಿ ಇಡುವ ವಿಚಾರವನ್ನು ವಿರೋಧಿಸಿದ್ದಾರೆ. ಅವರಿಬ್ಬರು ಸ್ವತಂತ್ರರಾಗಿರಬೇಕೆಂದು ಬಯಸುತ್ತಾರೆ ಎಂದು ಇನ್ನು ಕೆಲವರು ಕಾಮೆಂಟ್ ಮಾಡಿದ್ದಾರೆ.