ಮೆರಾಸಿನಿನು 1910 ರಲ್ಲಿ ಭೌತಿಕ ಮತ್ತು ರಾಸಾಯನಿಕ ವಿಜ್ಞಾನದಲ್ಲಿ ಪದವಿ ಪಡೆದುಕೊಂಡ ಒಬ್ಬ ಮೇಧಾವಿ. ಬುಚಾರೆಸ್ಟ್‌ನಲ್ಲಿರುವ ಸೆಂಟ್ರಲ್ ಸ್ಕೂಲ್ ಫಾರ್ ಗರ್ಲ್ಸ್‌ನಲ್ಲಿ ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಇವರು, ರೊಮೇನಿಯನ್ ವಿಜ್ಞಾನ ಸಚಿವಾಲಯದಿಂದ ವಿದ್ಯಾರ್ಥಿ ವೇತನ ಪಡೆದು ತಮ್ಮ ವಿದ್ಯಾಭ್ಯಾಸ ಮುಂದುವರಿಸಿದರು. ನಂತರ ಪ್ಯಾರಿಸ್‌ನ ರೇಡಿಯಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಪದವಿ ಸಂಶೋಧನೆಯನ್ನು ಮುಂದುವರಿಸಲು ನಿರ್ಧರಿಸಿದರು.
ಗಮನಾರ್ಹವಾಗಿ, ಆ ಸಮಯದಲ್ಲಿ ಈ ಸಂಸ್ಥೆಯು ಭೌತಶಾಸ್ತ್ರಜ್ಞ ಮೇರಿ ಕ್ಯೂರಿಯ ನಿರ್ದೇಶನದ ಅಡಿ ವಿಶ್ವಾದ್ಯಂತ ವಿಕಿರಣಶೀಲತೆಯ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲಾಗಿತ್ತು. ಮರಾಸಿನಿನು ಪೊಲೊನಿಯಂ ಕುರಿತು ತನ್ನ ಪಿಎಚ್‌ಡಿ ಪ್ರಬಂಧದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ಓದಿ: ದಿನಕ್ಕೆ 500 ಪುಷ್ ಅಪ್ಸ್, 1,200 ಕೆಜಿ ಕಲ್ಲು ಎತ್ತಿದ ಭಾರತದ ಪರಾಕ್ರಮಿಗೆ ಗೂಗಲ್ ಡೂಡಲ್ ಗೌರವ
ಪೊಲೊನಿಯಮ್‌ನಿಂದ ಆಲ್ಫಾ ಕಿರಣಗಳು ಲೋಹದ ಕೆಲವು ಪರಮಾಣುಗಳನ್ನು ವಿಕಿರಣಶೀಲ ಐಸೊಟೋಪ್‌ಗಳಾಗಿ ವರ್ಗಾಯಿಸುವುದರ ಬಗ್ಗೆ ಅವರು ಅಧ್ಯಯನ ನಡೆಸಿದರು. ಇವರ ಸಂಶೋಧನೆಯು ಕೃತಕ ವಿಕಿರಣಶೀಲತೆಯ ಮೊದಲ ಉದಾಹರಣೆಯಾಗಿದೆ. ಭೌತಶಾಸ್ತ್ರದಲ್ಲಿ ತನ್ನ ಪಿಎಚ್‌ಡಿ ಪೂರ್ಣಗೊಳಿಸಲು ಮೆರಾಸಿನಿನು ಪ್ಯಾರಿಸ್‌ನ ಸೊರ್ಬೊನ್ನೆ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಮೇಡಾನ್‌ನಲ್ಲಿರುವ ಖಗೋಳ ವೀಕ್ಷಣಾಲಯದಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ ಇವರು ನಂತರ, ಅವರು ರೊಮೇನಿಯಾಕ್ಕೆ ಮರಳಿದರು ಮತ್ತು ವಿಕಿರಣಶೀಲತೆಯ ಅಧ್ಯಯನಕ್ಕಾಗಿ ತನ್ನ ತಾಯ್ನಾಡಿನಲ್ಲಿ ಮೊದಲ ಪ್ರಯೋಗಾಲಯವನ್ನು ಸ್ಥಾಪಿಸಿದರು.
ಮೆರಾಸಿನಿನು ತನ್ನ ಹೆಚ್ಚಿನ ಸಮಯವನ್ನು ಕೃತಕ ಮಳೆಯ ಕುರಿತು ಸಂಶೋಧನೆಗೆ ಮೀಸಲಿಟ್ಟರು. ಭೂಕಂಪಗಳು ಮತ್ತು ಮಳೆಯ ನಡುವಿನ ಸಂಪರ್ಕವನ್ನು ಸಹ ಅವರು ಅಧ್ಯಯನ ನಡೆಸಿದರು. ಭೂಕಂಪಕ್ಕೆ ಕಾರಣವಾಗುವ ಕೇಂದ್ರಬಿಂದುವಿನಲ್ಲಿ ವಿಕಿರಣಶೀಲತೆಯ ಗಮನಾರ್ಹ ಹೆಚ್ಚಳವಿದೆ ಎಂದು ವರದಿ ಮಾಡಿದವರಲ್ಲಿ ಮೆರಾಸಿನಿನು ಮೊದಲಿಗರಾದರು. ಮೆರಾಸಿನಿನು ಅವರ ಕೆಲಸವನ್ನು 1936 ರಲ್ಲಿ ರೊಮೇನಿಯಾದ ಅಕಾಡೆಮಿ ಆಫ್ ಸೈನ್ಸಸ್ ಗುರುತಿಸಿತು. ಅಲ್ಲಿ ಅವರು ಸಂಶೋಧನಾ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಆಯ್ಕೆಯಾದರು, ಆದರೆ ಆವಿಷ್ಕಾರಕ್ಕಾಗಿ ಅವರು ಎಂದಿಗೂ ಜಾಗತಿಕ ಮನ್ನಣೆಯನ್ನೂ ಪಡೆಯಲೇ ಇಲ್ಲ.