ETV Bharat / international

Global Weather: ಎಲ್ ನಿನೊ ಎಫೆಕ್ಟ್​: 2023 ಅತ್ಯಧಿಕ ಉಷ್ಣಾಂಶದ ವರ್ಷವಾಗುವ ಸಾಧ್ಯತೆ! - El Nino effect

ಎಲ್ ನಿನೊ ಪರಿಣಾಮದ ಕಾರಣದಿಂದ ಈ ವರ್ಷವು ಅತ್ಯಧಿಕ ಉಷ್ಣಾಂಶದ ವರ್ಷವಾಗಿ ದಾಖಲಾಗಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಎಲ್ ನಿನೊ ಎಫೆಕ್ಟ್​: 2023 ಅತ್ಯಧಿಕ ಉಷ್ಣಾಂಶದ ವರ್ಷವಾಗುವ ಸಾಧ್ಯತೆ!
2023 likely to become hottest year ever recorded
author img

By

Published : Jun 15, 2023, 4:56 PM IST

ಲಂಡನ್ : ಈ ವರ್ಷದ ಜೂನ್ ತಿಂಗಳಲ್ಲಿ ಉಷ್ಣಾಂಶವು ದಾಖಲೆಯ ಏರಿಕೆ ಮಟ್ಟವನ್ನು ದಾಖಲಿಸುತ್ತಿದೆ. ಎಲ್ ನಿನೊ ದ ದಟ್ಟ ಪ್ರಭಾವದ ಕಾರಣದಿಂದ ಈ ವರ್ಷವು ಅತ್ಯಧಿಕ ಉಷ್ಣಾಂಶದ ವರ್ಷವಾಗಿ ದಾಖಲಾಗುವ ಸಾಧ್ಯತೆಗಳಿವೆ. ಈ ವರ್ಷದ ಜೂನ್‌ನಲ್ಲಿ ಇಲ್ಲಿಯವರೆಗೆ ಅಳೆಯಲಾದ ಪ್ರಾಥಮಿಕ ಜಾಗತಿಕ ಸರಾಸರಿ ತಾಪಮಾನವು ಅದೇ ತಿಂಗಳಿನಲ್ಲಿ ಈ ಹಿಂದೆ ದಾಖಲಾದ ಮಟ್ಟಕ್ಕಿಂತ ಸುಮಾರು 1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದಕ್ಕಾಗಿ 1979 ರಿಂದೀಚೆಗಿನ ಅಂಕಿ ಅಂಶಗಳನ್ನು ಪರಿಗಣಿಸಲಾಗಿದೆ.

ಈ ತಿಂಗಳು ಇನ್ನೂ ಪೂರ್ಣಗೊಂಡಿಲ್ಲ ಮತ್ತು ಜೂನ್‌ನಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸದಿದ್ದರೂ ಇದು ಜಾಗತಿಕ ತಾಪಮಾನವನ್ನು ಬಲಪಡಿಸುವ ಮಾದರಿಯನ್ನು ಅನುಸರಿಸುತ್ತದೆ ಎಂದು ಹವಾಮಾನ ವಿಜ್ಞಾನಿಗಳು ಹೇಳುತ್ತಾರೆ. ಹೀಗಾಗಿ ಈ ವರ್ಷವು 2016ರ ನಂತರ ಇದುವರೆಗೆ ದಾಖಲಾದ ಅತ್ಯಂತ ಬಿಸಿಯಾದ ವರ್ಷವಾಗಬಹುದು.

ಪಳೆಯುಳಿಕೆ ಇಂಧನಗಳ ಸುಡುವಿಕೆಯಿಂದ ಉಂಟಾದ ದೀರ್ಘಾವಧಿಯ ಉಷ್ಣತೆಯ ಪರಿಸ್ಥಿತಿಗಳು ಎಲ್ ನಿನೊ ಮೂಲಕ ಶಾಖದ ಮತ್ತಷ್ಟು ಅಲೆಗಳನ್ನು ಪಡೆಯುತ್ತವೆ. ಎಲ್ ನಿನೊ ಎಂಬುದು ನೈಸರ್ಗಿಕವಾಗಿ ಮರುಕಳಿಸುವ ವಿದ್ಯಮಾನವಾಗಿದ್ದು, ಇದರಲ್ಲಿ ಪೆಸಿಫಿಕ್ ಸಾಗರದ ವಿಭಾಗಗಳು ಬಿಸಿಯಾಗುತ್ತವೆ. ಇದರಿಂದ ಸಾಮಾನ್ಯವಾಗಿ ಪ್ರಪಂಚದಾದ್ಯಂತ ತಾಪಮಾನವು ಹೆಚ್ಚಾಗಲು ಕಾರಣವಾಗುತ್ತದೆ.

ಎಲ್ ನಿನೊ ಪರಿಸ್ಥಿತಿಗಳು ಈಗ ನಡೆಯುತ್ತಿವೆ ಮತ್ತು ಇವು ಕಾಲಕಳೆದಂತೆ ಇನ್ನೂ ಪ್ರಬಲವಾಗುವ ಸಾಧ್ಯತೆಗಳಿವೆ ಎಂದು ನ್ಯಾಷನಲ್ ಆ್ಯಂಡ್ ಅಟ್ಮೊಸ್ಫೆರಿಕ್ ಆ್ಯಡ್ಮಿನಿಸ್ಟ್ರೇಶನ್ (Atmospheric Administration -NOAA) ಸಂಸ್ಥೆಯು ಹೇಳಿದೆ. ಈ ಬಗ್ಗೆ ಮಾತನಾಡಿದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಹವಾಮಾನ ವಿಜ್ಞಾನಿ ಮೈಕೆಲ್ ಮಾನ್, ಒಟ್ಟಾರೆ ಜಾಗತಿಕ ತಾಪಮಾನಕ್ಕೆ ಮಾನವ ಉಂಟುಮಾಡುವ ತಾಪಮಾನ ಸೇರಿಕೊಳ್ಳುವುದರಿಂದ 0.1-0.2 ಡಿಗ್ರಿಗಳ ನಡುವೆ ಉಷ್ಣತಾಮಾನ ಹೆಚ್ಚಾಗುತ್ತದೆ ಎಂದು ಹೇಳಿದರು.

ಜಾಗತಿಕ ಮೇಲ್ಮೈ ತಾಪಮಾನದ ವೈಪರೀತ್ಯವು ಇದೀಗ ದಾಖಲೆಯ ಮಟ್ಟದಲ್ಲಿ ಅಥವಾ ಅದಕ್ಕೆ ಸಮೀಪದಲ್ಲಿದೆ ಮತ್ತು 2023 ಖಂಡಿತವಾಗಿಯೂ ದಾಖಲೆಯ ಅತ್ಯಂತ ಬಿಸಿಯಾದ ವರ್ಷವಾಗಲಿದೆ ಎಂದು ಮಾನ್ ತಿಳಿಸಿದ್ದಾರೆ.

ಈ ವರ್ಷದ ಮಾನ್ಸೂನ್ ಕೂಡ ಪೆಸಿಫಿಕ್ ಸಾಗರದಲ್ಲಿ ಎಲ್ ನಿನೋ ಮೋಡದ ಅಡಿಯಲ್ಲಿ ಪ್ರಗತಿಯಲ್ಲಿದೆ. ಎಲ್ ನಿನೊ ಇದು ಸಾಮಾನ್ಯವಾಗಿ ತಿಳಿದಿರುವಂತೆ ಸಮಭಾಜಕ ಪೆಸಿಫಿಕ್ ಸಾಗರದಲ್ಲಿ ಮೇಲ್ಮೈ ನೀರಿನ ಅಸಹಜ ತಾಪಮಾನವನ್ನು ಸೂಚಿಸುತ್ತದೆ. ಇದು ಮಾನ್ಸೂನ್ ಮಳೆಯನ್ನು ನಿಗ್ರಹಿಸುತ್ತದೆ ಎಂದು ತಿಳಿದಿದೆ. ಇದರ ವಿರುದ್ಧ ಹಂತ ಲಾ ನಿನಾ ಆಗಿದೆ. ಇದು ಅದೇ ಪ್ರದೇಶದಲ್ಲಿ ಸಮುದ್ರದ ಮೇಲ್ಮೈ ನೀರಿನ ಅಸಹಜ ತಂಪಾಗಿಸುವಿಕೆಯಾಗಿದೆ. ಇದು ಭಾರತದ ಮೇಲೆ ಮಳೆಗೆ ಸಹಾಯ ಮಾಡುತ್ತದೆ. ಮೂರನೇ ತಟಸ್ಥ ಹಂತವಿದೆ. ಇದರಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ದೀರ್ಘಾವಧಿಯ ಸರಾಸರಿಗೆ ಅನುಗುಣವಾಗಿ ಉಳಿಯುತ್ತದೆ.

ಇದನ್ನೂ ಓದಿ : Truecaller: ಕಾಲ್ ರೆಕಾರ್ಡಿಂಗ್ ಸೌಲಭ್ಯ ಆರಂಭಿಸಿದ ಟ್ರೂಕಾಲರ್; ಇದು ದುಡ್ಡು ಕೊಡುವ ಗ್ರಾಹಕರಿಗೆ ಮಾತ್ರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.