ETV Bharat / international

ಜಾಗತಿಕ ವ್ಯಾಪಾರ & ಹೂಡಿಕೆಯ ಲಾಭ ಪೂರ್ಣವಾಗಿ ಪಡೆದುಕೊಳ್ಳುವ ಹಕ್ಕು ವಿಶ್ವದ ದಕ್ಷಿಣದ ರಾಷ್ಟ್ರಗಳಿಗಿದೆ: ರಮಾಫೋಸಾ - ಸಿರಿಲ್ ರಾಮಫೋಸಾ

ಜಾಗತಿಕ ದಕ್ಷಿಣದ ಹಲವು ದೇಶಗಳು ಕೈಗಾರಿಕೀಕರಣ, ತಾಂತ್ರಿಕ ಅಭಿವೃದ್ಧಿ, ನಾವೀನ್ಯತೆ ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಗಮನಾರ್ಹ ಪ್ರಗತಿಯನ್ನು ಕಾಣುತ್ತಿರುವಾಗ, ಆ ದೇಶಗಳು ಆರ್ಥಿಕ ಲಾಭವನ್ನು ಸಂಪೂರ್ಣವಾಗಿ ಪಡೆಯುತ್ತಿಲ್ಲ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಹೇಳಿದ್ದಾರೆ.

SA President Ramaphosa and PM Modi
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಹಾಗೂ ಪ್ರಧಾನಿ ಮೋದಿ
author img

By ETV Bharat Karnataka Team

Published : Aug 25, 2023, 9:15 AM IST

ಜೋಹಾನ್ಸ್‌ಬರ್ಗ್( ದಕ್ಷಿಣ ಆಫ್ರಿಕಾ): ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆ ಸೇರಿದಂತೆ ವಿಶ್ವದ ಆರ್ಥಿಕ, ಹಣಕಾಸು ಮತ್ತು ರಾಜಕೀಯ ಆಡಳಿತದಲ್ಲಿ ಸುಧಾರಣೆಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಗುರುವಾರ ಕರೆ ನೀಡಿದರು.

2023 ಬ್ರಿಕ್ಸ್ ಶೃಂಗಸಭೆಯ ನಂತರ ಗುರುವಾರ ಇಲ್ಲಿ ನಡೆದ ಬ್ರಿಕ್ಸ್-ಆಫ್ರಿಕಾ ಔಟ್‌ರೀಚ್ ಮತ್ತು ಬ್ರಿಕ್ಸ್ ಪ್ಲಸ್ ಸಂವಾದದಲ್ಲಿ ಅವರು ಸುಮಾರು 50 ದೇಶಗಳ ನಾಯಕರಿಗೆ ಈ ಕರೆ ನೀಡಿದರು. ಇಡೀ ಜಾಗತಿಕ ದಕ್ಷಿಣವು ವಿಶ್ವ ವ್ಯಾಪಾರ ಮತ್ತು ಹೂಡಿಕೆಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷರು ಪ್ರತಿಪಾದಿಸಿದ್ದಾರೆ.

ಜಾಗತಿಕ ದಕ್ಷಿಣದ ಹಲವು ದೇಶಗಳು ಕೈಗಾರಿಕೀಕರಣ, ತಾಂತ್ರಿಕ ಅಭಿವೃದ್ಧಿ, ನಾವೀನ್ಯತೆ ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಗಮನಾರ್ಹ ಪ್ರಗತಿಯನ್ನು ಕಾಣುತ್ತಿರುವಾಗ, ಆ ದೇಶಗಳು ಆರ್ಥಿಕ ಲಾಭವನ್ನು ಸಂಪೂರ್ಣವಾಗಿ ಪಡೆಯುತ್ತಿಲ್ಲ ಎಂದು ಅವರು ಹೇಳಿದರು. "ಜಾಗತಿಕ ವ್ಯಾಪಾರ ಮತ್ತು ಹೂಡಿಕೆಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳುವುದು ಆಫ್ರಿಕಾ ಮತ್ತು ಇಡೀ ಜಾಗತಿಕ ದಕ್ಷಿಣದ ಹಕ್ಕು. ವ್ಯಾಪಾರ ಮತ್ತು ಹೂಡಿಕೆ ಇಲ್ಲದೆ ನಮ್ಮ ಆರ್ಥಿಕತೆಗಳು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಮತ್ತು ನಮ್ಮ ಜನರ ಪರಿಸ್ಥಿತಿಗಳು ಸುಧಾರಿಸಲು ಸಾಧ್ಯವಿಲ್ಲ" ಎಂದು ರಮಾಫೋಸಾ ಹೇಳಿದರು.

"ನಾವು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಒಳಗೊಂಡಂತೆ ಜಾಗತಿಕ ಆರ್ಥಿಕ, ಹಣಕಾಸು ಮತ್ತು ರಾಜಕೀಯ ಆಡಳಿತವನ್ನು ಸುಧಾರಿಸಬೇಕಾಗಿದೆ. ಇದರಿಂದ ನಾವು ನ್ಯಾಯಯುತ ವ್ಯಾಪಾರಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತೇವೆ". ಇಂದು ವಿಶ್ವದಲ್ಲಿ ಬ್ರಿಕ್ಸ್‌ನ ಉದ್ದೇಶ ಮತ್ತು ಪಾತ್ರ 1955ರ ಬ್ಯಾಂಡಂಗ್ ಸಮ್ಮೇಳನವನ್ನು ನೆನಪಿಸುತ್ತದೆ ಎಂದು ಅವರು ಬಣ್ಣಿಸಿದರು.

ಸಮ್ಮೇಳನದಲ್ಲಿ ಏಷ್ಯಾ ಮತ್ತು ಆಫ್ರಿಕನ್ ರಾಷ್ಟ್ರಗಳು ವಿಶ್ವ ವ್ಯವಹಾರಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪರ ಧ್ವನಿ ಎತ್ತಿದ್ದವು. ಬೃಹತ್​ ಮತ್ತು ಸಣ್ಣ ಎಲ್ಲಾ ರಾಷ್ಟ್ರಗಳ ಸಮಾನತೆಯನ್ನು ಗುರುತಿಸಲು ಸಮ್ಮೇಳನವು ಕರೆ ನೀಡಿದೆ. ನಾವು ಪೂರ್ವ, ಪಶ್ಚಿಮ ಹಾಗೂ ಉತ್ತರ ಮತ್ತು ದಕ್ಷಿಣದ ನಡುವಿನ ಅಡೆತಡೆಗಳಿಲ್ಲದ ಜಗತ್ತನ್ನು ಬಯಸುತ್ತೇವೆ. ಇನ್ನೂ ಪರಸ್ಪರ ಗೌರವದಿಂದ ಒಟ್ಟಿಗೆ ಕೆಲಸ ಮಾಡುವ ಜಗತ್ತನ್ನು ಹುಡುಕುತ್ತಿದ್ದೇವೆ. 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ನಡೆದ ಸಂವಾದವು ಏಕತೆ, ಸ್ನೇಹ ಮತ್ತು ಸಹಕಾರದ ಮನೋಭಾವವನ್ನು ಮುನ್ನಡೆಸಲು ಶ್ರಮಿಸಬೇಕು ಎಂದು ರಮಾಫೋಸಾ ಕರೆ ನೀಡಿದ್ದಾರೆ.

ನಾವು ಬ್ರಿಕ್ಸ್ ಪಾಲುದಾರಿಕೆಯನ್ನು ಜಾಗತಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ವೇಗವರ್ಧಕವಾಗಿ ನೋಡುತ್ತೇವೆ. ಅದು ಎಲ್ಲ ರಾಷ್ಟ್ರಗಳ ಅಗತ್ಯಗಳಿಗೆ ಸ್ಪಂದಿಸುತ್ತದೆ ಎಂದ ಅವರು ಆಫ್ರಿಕನ್ ಖಂಡದ ಗಣನೀಯ ಸಂಪನ್ಮೂಲಗಳನ್ನು ಜನರು ಅಭಿವೃದ್ಧಿಗೆ ಬಳಸಿಕೊಳ್ಳಲು ಇದೇ ವೇಳೆ ಕರೆ ನೀಡಿದರು.

ಇನ್ನು ಆಫ್ರಿಕನ್ ಖಂಡವು ಫ್ರೀ ಟ್ರೇಡ್ ಏರಿಯಾ ಆಗಿ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಿದರೆ ಆಫ್ರಿಕಾ ಮತ್ತು ಇತರ ದೇಶಗಳಿಗೆ ಗಣನೀಯ ಅವಕಾಶಗಳನ್ನು ಸೃಷ್ಟಿಸಿ ಕೊಡುತ್ತದೆ . ಈ ಅವಕಾಶಗಳನ್ನು ಬಳಸಿಕೊಳ್ಳಲು, ಆಫ್ರಿಕಾ ಮೂಲಸೌಕರ್ಯ ಮತ್ತು ಅಭಿವೃದ್ಧಿ ಹಣಕಾಸು ಅನ್ಲಾಕ್ ಮಾಡಲು ಬ್ರಿಕ್ಸ್ ಪಾಲುದಾರಿಕೆಯನ್ನು ನೋಡುತ್ತಿದೆ. ಇದು ಹೊಸ ಅಭಿವೃದ್ಧಿ ಬ್ಯಾಂಕ್‌ನ ಸ್ಥಾಪನಾ ದೃಷ್ಟಿಯ ಭಾಗವಾಗಿದೆ. ಜಾಗತಿಕ ದಕ್ಷಿಣದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಮತ್ತು ಬ್ರಿಕ್ಸ್ ಕರೆನ್ಸಿಗಳ ಬಳಕೆಯನ್ನು ಬಲಪಡಿಸುವ ಮೂಲಕ ಜಾಗತಿಕ ವ್ಯಾಪಾರ ಮತ್ತು ಹಣಕಾಸು ವ್ಯವಸ್ಥೆಗಳಿಗೆ ನ್ಯಾಯಸಮ್ಮತತೆಯನ್ನು ತರುವ ಪ್ರಯತ್ನಗಳಲ್ಲಿ ಬ್ಯಾಂಕ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ರಮಾಫೋಸಾ ಹೇಳಿದ್ದಾರೆ.

ಇದನ್ನೂ ಓದಿ: ಬ್ರಿಕ್ಸ್​ ವಿಸ್ತರಣೆ: 6 ಹೊಸ ಸದಸ್ಯ ರಾಷ್ಟ್ರಗಳ ಸೇರ್ಪಡೆಗೆ ಒಪ್ಪಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.