ಚಿಕೋ (ಯುಎಸ್): ಉತ್ತರ ಕ್ಯಾಲಿಫೋರ್ನಿಯಾದ ಕಾಲೇಜ್ ಕ್ಯಾಂಪಸ್ ಬಳಿ ಪಾರ್ಟಿಯೊಂದರಲ್ಲಿ ಶನಿವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ 17 ವರ್ಷದ ಬಾಲಕಿ ಸಾವನ್ನಪ್ಪಿ, ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಮುಖ್ಯಸ್ಥ ಬಿಲ್ಲಿ ಆಲ್ಡ್ರಿಡ್ಜ್ ಪ್ರತಿಕ್ರಿಯಿಸಿ, "ಮುಂಜಾನೆ 3.30ರ ಸುಮಾರಿಗೆ(ಸ್ಥಳೀಯ ಕಾಲಮಾನ) ಚಿಕೋದಲ್ಲಿನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಆರು ಜನರ ಮೇಲೆ ಗುಂಡು ಹಾರಿಸಲಾಗಿದೆ. ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 17 ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾಳೆ" ಎಂದು ತಿಳಿಸಿದ್ದಾರೆ.
21 ಮತ್ತು 19 ವರ್ಷದ ಇಬ್ಬರು ಯುವಕರು ಮತ್ತು 17 ವರ್ಷದ ಬಾಲಕಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 18 ಮತ್ತು 20 ವರ್ಷದ ಇತರ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ ಎಂದು ಆಲ್ಡ್ರಿಡ್ಜ್ ಹೇಳಿದರು. ಗುಂಡಿನ ದಾಳಿ ಒಂದು ಪ್ರತ್ಯೇಕ ಘಟನೆಯಂತೆ ಕಂಡುಬಂದಿದೆ. ಸಮುದಾಯಕ್ಕೆ ಯಾವುದೇ ಬೆದರಿಕೆ ಇಲ್ಲ. ಶೂಟರ್ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: ಮನೆಯಲ್ಲಿ 4 ಶವ ಪತ್ತೆ, ಮೂವರಿಗೆ ಗಾಯ
-
Censored video showing the mass shooting suspect dead on the floor on the site of Allen Premium Outlets mall in Allen, Texas. The suspect, who appears to be white, and possibly in his early 20s, is seen wearing tactical clothing. pic.twitter.com/EvfZXOSyYO
— Global Affairs (@OurEarthAffairs) May 7, 2023 " class="align-text-top noRightClick twitterSection" data="
">Censored video showing the mass shooting suspect dead on the floor on the site of Allen Premium Outlets mall in Allen, Texas. The suspect, who appears to be white, and possibly in his early 20s, is seen wearing tactical clothing. pic.twitter.com/EvfZXOSyYO
— Global Affairs (@OurEarthAffairs) May 7, 2023Censored video showing the mass shooting suspect dead on the floor on the site of Allen Premium Outlets mall in Allen, Texas. The suspect, who appears to be white, and possibly in his early 20s, is seen wearing tactical clothing. pic.twitter.com/EvfZXOSyYO
— Global Affairs (@OurEarthAffairs) May 7, 2023
ಟೆಕ್ಸಾಸ್‌ನ ಶಾಪಿಂಗ್ ಮಾಲ್‌ನಲ್ಲಿ ಗುಂಡಿನ ಮೊರೆತ: ಮತ್ತೊಂದೆಡೆ, ಟೆಕ್ಸಾಸ್‌ನ ಅಲೆನ್‌ನಲ್ಲಿರುವ ಅಲೆನ್ ಪ್ರೀಮಿಯಂ ಔಟ್‌ಲೆಟ್‌ಗಳ ಮಾಲ್‌ನಲ್ಲಿ ಶನಿವಾರ ಗುಂಡಿನ ಸದ್ದು ಕೇಳಿದೆ. ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದಾನೆ. ಪೊಲೀಸರ ಪ್ರಕಾರ, ಘಟನೆಯಲ್ಲಿ ಮಕ್ಕಳು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ. ಓರ್ವ ಶಂಕಿತ ದಾಳಿಕೋರ ಮೃತಪಟ್ಟಿದ್ದಾನೆ. ಮತ್ತೊಬ್ಬನಿಗಾಗಿ ಶೋಧ ನಡೆಯುತ್ತಿದೆ.
ಗಾಯಗೊಂಡವರ ಸ್ಥಿತಿ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ದಾಳಿಕೋರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರ ಗುಂಡು ಹಾರಿಸಿದ ನಂತರ ಸ್ವತಃ ಗುಂಡು ಹಾರಿಸಿಕೊಂಡಿದ್ದಾನೆಯೇ ಅಥವಾ ಪೊಲೀಸರ ಪ್ರತೀಕಾರದ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ. ಆಂಬ್ಯುಲೆನ್ಸ್ ಮೂಲಕ ಹಲವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ಕಂಡು ಬಂದಿದೆ. ಟೆಕ್ಸಾಸ್‌ನ ಮಾಲ್‌ನಲ್ಲಿ ಗುಂಡಿನ ದಾಳಿ ನಡೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ದಾಳಿಕೋರ ಮೃತಪಟ್ಟಿರುವುದನ್ನು ಕಾಣಬಹುದು.
ಮೇ 3 ರಂದು ಅಟ್ಲಾಂಟಾದ ವೈದ್ಯಕೀಯ ಕೇಂದ್ರದ 11 ನೇ ಮಹಡಿಯ ನಿರೀಕ್ಷಣಾ ಕೊಠಡಿಯಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ್ದ. ಘಟನೆಯಲ್ಲಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದರು.
ಇದನ್ನೂ ಓದಿ: ಕ್ಯಾಲಿಫೋರ್ನಿಯಾದ ಗುರುದ್ವಾರದಲ್ಲಿ ಶೂಟೌಟ್: ಇಬ್ಬರಿಗೆ ಗಾಯ