ETV Bharat / international

ಹಿಂದಿಯಲ್ಲಿ ಟ್ವೀಟ್​ ಮಾಡಿ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಫ್ರಾನ್ಸ್​ ಅಧ್ಯಕ್ಷ

author img

By

Published : Jul 14, 2023, 1:25 PM IST

ಬಾಸ್ಟಿಲ್ ಡೇ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಪೂರ್ವಭಾವಿಯಾಗಿ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಪ್ರಧಾನಿ ಮೋದಿಯವರಿಗೆ ಸ್ವಾಗತ ಕೋರಿದ್ದಾರೆ.

ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಫ್ರಾನ್ಸ್​ ಅಧ್ಯಕ್ಷ

ಪ್ಯಾರಿಸ್: ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಅದಕ್ಕೂ ಮುನ್ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಪ್ರಧಾನಿ ಮೋದಿಯವರಿಗೆ ಸ್ವಾಗತ ಕೋರಿದರು. ಈ ಬಗ್ಗೆ ಟ್ವೀಟ್​ ಮಾಡಿರುವ ಮ್ಯಾಕ್ರೋನ್​, 'ಭಾರತ ಮತ್ತು ಫ್ರಾನ್ಸ್​ 25 ವರ್ಷಗಳ ಕಾರ್ಯತಂತ್ರದ ಪಾಲುದಾರಿಕೆಯ ವಿಶ್ವಾಸ, ಸ್ನೇಹ ಬಂಧವನ್ನು ಆಚರಿಸುತ್ತಿವೆ. ಪ್ರೀತಿಯ ನರೇಂದ್ರ ಮೋದಿಯವರಿಗೆ, ಪ್ಯಾರಿಸ್‌ಗೆ ಆತ್ಮೀಯ ಸ್ವಾಗತ ಎಂದು ಹಿಂದಿಯಲ್ಲಿ ಟ್ವೀಟ್​ ಮಾಡಿದ್ದಾರೆ.

ಇದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಎಲಿಸೀ ಅರಮನೆಯಲ್ಲಿ ಆತಿಥ್ಯ ವಹಿಸಿದ್ದಕ್ಕಾಗಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಫ್ರಾನ್ಸ್‌ನ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ತಮ್ಮ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಪ್ರಧಾನಿ ಮೋದಿ, "ಎಲಿಸಿ ಅರಮನೆಯಲ್ಲಿ ನನಗೆ ಆತಿಥ್ಯ ವಹಿಸಿದ್ದಕ್ಕಾಗಿ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಬ್ರಿಗಿಟ್ಟೆ ಮ್ಯಾಕ್ರನ್ ಅವರಿಗೆ ನನ್ನ ಧನ್ಯವಾದಗಳು" ಎಂದು ಟ್ವೀಟ್​ ಮಾಡಿದ್ದರು.

  • भारत और फ्रांस 25 साल की रणनीतिक साझेदारी तथा विश्वास और दोस्ती के सदैव मजबूत बंधन का जश्न मना रहे हैं।

    प्रिय @NarendraModi, पैरिस में हार्दिक स्वागत! pic.twitter.com/sUoSmdfnw8

    — Emmanuel Macron (@EmmanuelMacron) July 14, 2023 " class="align-text-top noRightClick twitterSection" data=" ">

ಎರಡು ದಿನಗಳ ಫ್ರಾನ್ಸ್ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. 1789 ರಲ್ಲಿ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಬಾಸ್ಟಿಲ್ ಜೈಲು ದಾಳಿಯ ನೆನಪಿಗಾಗಿ ಫ್ರಾನ್ಸ್ ರಾಷ್ಟ್ರೀಯ ದಿನ ಅಥವಾ ಬಾಸ್ಟಿಲ್ಲೆ ದಿನವನ್ನು ಆಚರಿಸಲಾಗುತ್ತದೆ. ಭಾರತದ 269 ಸದಸ್ಯರ ಮೂರು ಸೇನಾ ತುಕಡಿ ಪರೇಡ್‌ನಲ್ಲಿ ಭಾಗವಹಿಸಿವೆ. ಈ ಸಂದರ್ಭದಲ್ಲಿ ಫ್ರೆಂಚ್ ಜೆಟ್‌ಗಳ ಜೊತೆಗೆ ಭಾರತೀಯ ವಾಯುಪಡೆಯ ಮೂರು ರಫೇಲ್ ಯುದ್ಧವಿಮಾನಗಳು ಸಹ ಬಾಸ್ಟಿಲ್ ಡೇ ಫ್ಲೈಪಾಸ್ಟ್‌ನಲ್ಲಿ ಭಾಗವಹಿಸಲುಸಿದ್ಧವಾಗಿವೆ.

ಈ ಬಾರಿ ಬಾಸ್ಟಿಲ್ ಡೇ ಪರೇಡ್​ನಲ್ಲಿ ವಿವಿಧ ಕವಾಯತು ತಂಡಗಳ ಸುಮಾರು 6,300 ಸೈನಿಕರು ಭಾಗವಹಿಸಲಿದ್ದಾರೆ. ಇದು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ತುಕಡಿಯನ್ನು ಒಳಗೊಂಡಿದೆ. ಭಾರತೀಯ ಸೇನೆಯನ್ನು ಪಂಜಾಬ್ ರೆಜಿಮೆಂಟ್ ಪ್ರತಿನಿಧಿಸುತ್ತಿದೆ. ಕಾರಣ ಎರಡೂ ವಿಶ್ವ ಯುದ್ಧಗಳಲ್ಲಿ ಭಾಗವಹಿಸಿದ ಈ ರೆಜಿಮೆಂಟ್​ ಪ್ರಥಮ ವಿಶ್ವಯುದ್ದದಲ್ಲಿ ಯುದ್ಧದಲ್ಲಿ 18 ಬ್ಯಾಟಲ್ ಮತ್ತು ಥಿಯೇಟರ್ ಗೌರವಗಳನ್ನು ಪಡೆದಿತ್ತು. ಎರಡನೇಯ ಮಹಾಯುದ್ಧದಲ್ಲಿ ಪಂಜಾಬ್​ ರೆಜಿಮೆಂಟ್ 16 ಬ್ಯಾಟಲ್ ಆನರ್ಸ್ ಮತ್ತು 14 ಥಿಯೇಟರ್ ಗೌರವಗಳನ್ನು ಪಡೆದುಕೊಂಡಿತ್ತು.

ಇದನ್ನೂ ಓದಿ: ಫ್ರಾನ್ಸ್‌ ರಾಷ್ಟ್ರೀಯ ದಿನಾಚರಣೆ ಕವಾಯತಿನಲ್ಲಿ ಭಾಗಿಯಾಗಲಿದ್ದಾರೆ ಮಂಗಳೂರಿನ ದಿಶಾ ಅಮೃತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.