ETV Bharat / international

ನೈಜರ್‌ನಿಂದ ಸೇನೆ ಹಿಂತೆಗೆದುಕೊಂಡ ಫ್ರಾನ್ಸ್ - ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್

ನೈಜರ್‌ನಲ್ಲಿ ಮಿಲಿಟರಿ ಅಧ್ಯಕ್ಷ ಮೊಹಮ್ಮದ್ ಬಜೌಮ್‌ನನ್ನು ಪದಚ್ಯುತಗೊಳಿಸಿದ ಬೆನ್ನಲ್ಲೇ ಅಲ್ಲಿಂದ ಸೇನೆಯನ್ನು ಫ್ರಾನ್ಸ್ ಹಿಂತೆಗೆದುಕೊಂಡಿದೆ.

French President Emmanuel Macron
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್
author img

By PTI

Published : Dec 23, 2023, 12:05 PM IST

ಅಬುಜಾ (ನೈಜೀರಿಯಾ) : ನೈಜರ್‌ನಲ್ಲಿ ಈ ಹಿಂದೆ ಬೀಡುಬಿಟ್ಟಿದ್ದ 1,500 ಫ್ರೆಂಚ್ ಸೈನಿಕರ ಪೈಕಿ ಕೊನೆಯ 50 ಮಂದಿ ಶುಕ್ರವಾರ ಬೆಳಗ್ಗೆ ದೇಶ ತೊರೆದಿದ್ದು, ಉಭಯ ದೇಶಗಳ ನಡುವಿನ ಸೇನಾ ಸಹಕಾರ ಅಂತ್ಯಗೊಂಡಿದೆ ಎಂದು ನೈಜೀರಿಯನ್ ಸೇನೆ ತಿಳಿಸಿದೆ.

ನೈಜೀರಿಯನ್ ಸೈನ್ಯದ ಮುಖ್ಯಸ್ಥ ಮಾಮಾನೆ ಸಾನಿ ಕಿಯಾವು ಮತ್ತು ಫ್ರೆಂಚ್ ಸೈನ್ಯದ ಪ್ರತಿನಿಧಿ ಎರಿಕ್ ಓಜಾನ್ ಅವರು ಶುಕ್ರವಾರ ಜಂಟಿ ದಾಖಲೆಗೆ ಸಹಿ ಹಾಕಿದರು. ಈ ಹಿನ್ನೆಲೆಯಲ್ಲಿ ನೈಜರ್‌ನಿಂದ ಫ್ರೆಂಚ್ ಸೈನ್ಯವನ್ನು ಹಿಂತೆಗೆದುಕೊಳ್ಳಲಾಗಿದೆ. ಕಳೆದ ಶುಕ್ರವಾರದಿಂದ ಎಲ್ಲಾ ಯುದ್ಧ ಉಪಕರಣಗಳನ್ನು ವಾಪಸ್​ ಕಳುಹಿಸಲಾಗಿದೆ.

ನೈಜೀರಿಯನ್ ಸೈನ್ಯದ ಪತ್ರಿಕಾ ಪ್ರಕಟಣೆಯ ಪ್ರಕಾರ, ಅನುಕೂಲಕರ ಪರಿಸ್ಥಿತಿಗಳಲ್ಲಿ ಮತ್ತು ನೈಜರ್‌ನಲ್ಲಿ ಅಧಿಕಾರಿಗಳು ನಿಗದಿಪಡಿಸಿದ ವೇಳಾಪಟ್ಟಿಗೆ ಅನುಗುಣವಾಗಿ ಫ್ರೆಂಚ್ ಪಡೆಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಫ್ರಾನ್ಸ್, ನೈಜರ್‌ನಲ್ಲಿ 1,500 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿತ್ತು. ಔಲ್ಲಮ್, ಅಯೋರೌ ಮತ್ತು ನಿಯಾಮಿಯಲ್ಲಿ ಪಡೆಗಳು ನೆಲೆಸಿದ್ದವು. ನೈಜರ್‌ನ ರಕ್ಷಣಾ ಮತ್ತು ಭದ್ರತಾ ಪಡೆಗಳ ಬೆಂಗಾವಲಾಗಿ ಅಕ್ಟೋಬರ್ 10 ರಂದು ಫ್ರೆಂಚ್ ಸೈನಿಕರ ಮೊದಲ ಬೆಂಗಾವಲು ಪಡೆ ಹೊರಟಿತು ಎಂದು ತಿಳಿಸಿದೆ.

ಜುಲೈನಲ್ಲಿ ಜುಂಟಾ ಪಡೆಯ ಅಧ್ಯಕ್ಷ ಒಮರ್‌ ಟ್ಚಿಯಾನಿ ನೇತೃತ್ವದಲ್ಲಿ ನಡೆದ ದಂಗೆಯಲ್ಲಿ ಮೊಹಮ್ಮದ್‌ ಬಜೌಮ್‌ ಅವರನ್ನು ಬಂಧಿಸಲಾಗಿತ್ತು. ಅಲ್ಲದೆ, ತಾನೇ ನೈಜರ್‌ನ ಅಧ್ಯಕ್ಷ ಎಂದು ಒಮರ್‌ ಘೋಷಿಸಿಕೊಂಡಿದ್ದರು. ಈ ವೇಳೆ ರಾಜತಾಂತ್ರಿಕ ಅಧಿಕಾರಿಗಳನ್ನು ಹಿಂಪಡೆಯುವಂತೆ ಜುಂಟಾ ಪಡೆ ಫ್ರಾನ್ಸ್‌ಗೆ ಎಚ್ಚರಿಸಿತ್ತು.

ಇದನ್ನೂ ಓದಿ : ನೌಕಾಪಡೆಗೆ 26 ರಫೇಲ್​​ ಎಂ ಫೈಟರ್​​ ಜೆಟ್​ ಖರೀದಿ ; ಫ್ರಾನ್ಸ್​​​​​ಗೆ ಭಾರತದಿಂದ ಅಧಿಕೃತ ವಿನಂತಿ ಪತ್ರ

ಮೊಹಮ್ಮದ್‌ ಬಜೌಮ್‌ ಸರ್ಕಾರದ ಕೋರಿಕೆಯ ಮೇಲೆ ಫ್ರಾನ್ಸ್‌, ನೈಜರ್‌ ದೇಶಕ್ಕೆ ತನ್ನ ಮಿಲಿಟಿರಿ ಸಹಕಾರವನ್ನು ವಿಸ್ತರಿಸಿತ್ತು. ಆದರೆ, ನೈಜರ್‌ನಲ್ಲಿ ಮಿಲಿಟರಿ ಅಧ್ಯಕ್ಷ ಮೊಹಮ್ಮದ್ ಬಜೌಮ್‌ನನ್ನು ಪದಚ್ಯುತಗೊಳಿಸಿದ ಬೆನ್ನಲ್ಲೇ ನೈಜರ್‌ ಸರ್ಕಾರದೊಂದಿಗಿನ ಮಿಲಿಟರಿ ಸಹಕಾರವನ್ನು ಕೊನೆಗೊಳಿಸುವುದಾಗಿ ಮತ್ತು ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಘೋಷಿಸಿದ್ದರು. ಇದೀಗ, ಫ್ರಾನ್ಸ್ ನೈಜರ್‌ನಲ್ಲಿ ವೀಸಾ ವಿತರಣೆಯನ್ನು ಸಹ ಸ್ಥಗಿತಗೊಳಿಸಿದೆ ಮತ್ತು ಅದರ ನಾಗರಿಕರನ್ನು ಸ್ಥಳಾಂತರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.