ETV Bharat / international

ಥಾಯ್ಲೆಂಡ್: ಗುಂಡಿನ ದಾಳಿಗೆ ನಾಲ್ವರು ಬಲಿ

author img

By

Published : Apr 9, 2023, 9:01 AM IST

ದಕ್ಷಿಣ ಥಾಯ್ಲೆಂಡ್‌ನಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Thailand
ಥಾಯ್ಲೆಂಡ್

ಬ್ಯಾಂಕಾಕ್ (ಥಾಯ್ಲೆಂಡ್) : ಬ್ಯಾಂಕಾಕ್‌ನ ದಕ್ಷಿಣಕ್ಕೆ ಸರಿಸುಮಾರು 600 ಕಿ.ಮೀ (370 ಮೈಲು) ದೂರದಲ್ಲಿರುವ ಸೂರತ್ ಥಾನಿ ಪ್ರಾಂತ್ಯದ ಖಿರಿ ರಾತ್ ನಿಖೋಮ್ ಜಿಲ್ಲೆಯಲ್ಲಿ ಶನಿವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟ ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 12 ತಿಂಗಳುಗಳಲ್ಲಿ ಇಲ್ಲಿ ಭಾರಿ ಹಿಂಸಾತ್ಮಕ ಘಟನೆಗಳು ನಡೆಯುತ್ತಿವೆ. ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ಈಶಾನ್ಯ ನಾಂಗ್ ಬುವಾ ಲ್ಯಾಮ್ ಫು ಪ್ರಾಂತ್ಯದಲ್ಲಿ ಮಾಜಿ ಪೊಲೀಸ್ ಸಾರ್ಜೆಂಟ್​ವೊಬ್ಬ 24 ಮಕ್ಕಳು ಸೇರಿದಂತೆ 36 ಜನರನ್ನು ಕೊಂದ ನಂತರ ಆತಂಕ ಮನೆ ಮಾಡಿತ್ತು. ಮತ್ತು ಫೆಟ್ಚಬುರಿ ಪ್ರಾಂತ್ಯದದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ, ಥೈಲ್ಯಾಂಡ್​ನಲ್ಲಿ​ ಹೆಚ್ಚಿನ ಪ್ರಮಾಣದ ಗನ್ ಮಾಲೀಕತ್ವವನ್ನು ಹೊಂದಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಎರಡು ಗುಂಪುಗಳ ಮಧ್ಯೆ ಗುಂಡಿನ ದಾಳಿ, ಎಂಟು ಜನ ಬಲಿ.. ಮನೆ ತೊರೆದ ಹಲವಾರು ಕುಟುಂಬಗಳು

ಇನ್ನೊಂದೆಡೆ, ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ಕಳೆದ ಮಾರ್ಚ್​ ತಿಂಗಳ ಒಂದೇ ವಾರದಲ್ಲಿ ವಿಪರೀತ ವಾಯುಮಾಲಿನ್ಯದಿಂದಾಗಿ 2 ಲಕ್ಷ ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. 10 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಬ್ಯಾಂಕಾಕ್​ನಲ್ಲಿ ಕೈಗಾರಿಕಾ ಹೊರಸೂಸುವಿಕೆ, ವಾಹನಗಳ ಹೊಗೆ, ಕೃಷಿ ಕ್ಷೇತ್ರಗಳಲ್ಲಿನ ಬೆಳೆ ಸುಡುವಿಕೆಯಿಂದ ಉಂಟಾಗುವ ಇಂಗಾಲದ ಡೈ ಆಕ್ಸೈಡ್​ನಿಂದ ಇಲ್ಲಿನ ಜನ ಬಳಲುತ್ತಿದ್ದಾರೆ.

ಇದನ್ನೂ ಓದಿ : ನೈಜೀರಿಯಾದ ಹಳ್ಳಿಯ ಮೇಲೆ ಬಂದೂಕುಧಾರಿಗಳ ದಾಳಿ : 50 ಜನರ ಸಾವು

ಇಸ್ರೇಲ್ ಗುಂಡಿನ ದಾಳಿ : ಇಸ್ರೇಲ್​ನ ಟೆಲ್ ಅವೀವ್​ನಲ್ಲಿ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಜೊತೆಗೆ, ಆರು ಮಂದಿ ಗಾಯಗೊಂಡಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಟೆಲ್ ಅವೀವ್​ನಲ್ಲಿರುವ ಚಾರ್ಲ್ಸ್ ಕ್ಲೋರ್ ಪಾರ್ಕ್‌ನಲ್ಲಿದ್ದ ಜನರ ಮೇಲೆ ಭಯೋತ್ಪಾದಕನೊಬ್ಬ ಕಾರನ್ನು ನುಗ್ಗಿಸಿದ್ದಾನೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್ಸ್‌ಪೆಕ್ಟರ್‌ ಆರೋಪಿಗೆ ಗುಂಡೇಟು ನೀಡಿದ್ದರು.

ಇದನ್ನೂ ಓದಿ : ಇಸ್ರೇಲ್​ನಲ್ಲಿ ದಾಳಿಕೋರನನ್ನು ಗುಂಡಿಕ್ಕಿ ಕೊಂದ ಪೊಲೀಸರು

ಬಾಂಗ್ಲಾದೇಶದಲ್ಲೂ ಗುಂಡಿನ ದಾಳಿ : ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೆ ಬಾಂಗ್ಲಾದೇಶದ ಬಂದರ್ಬನ್‌ನ ರೋವಾಂಗ್‌ಚಾರಿ ಉಪ ಜಿಲ್ಲಾದಲ್ಲಿ ಎರಡು ಸಶಸ್ತ್ರ ಗುಂಪುಗಳ ನಡುವೆ ನಡೆದ ಶೂಟ್‌ಔಟ್ ವೇಳೆ ಎಂಟು ಜನ ಸಾವನ್ನಪ್ಪಿದ್ದರು. ಯುನೈಟೆಡ್ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ (ಡೆಮಾಕ್ರಟಿಕ್) ಮತ್ತು ಕುಕಿ-ಚಿನ್ ನ್ಯಾಷನಲ್ ಫ್ರಂಟ್ (ಕೆಎನ್‌ಎಫ್) ಮಿಲಿಟರಿ ವಿಭಾಗವಾದ ಕುಕಿ-ಚಿನ್ ನ್ಯಾಷನಲ್ ಆರ್ಮಿ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು.

ಇದನ್ನೂ ಓದಿ : ಥಾಯ್ಲೆಂಡ್‌: ಒಂದೇ ವಾರದಲ್ಲಿ ಆಸ್ಪತ್ರೆ ಸೇರಿದ 2 ಲಕ್ಷಕ್ಕೂ ಅಧಿಕ ಜನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.