ETV Bharat / international

Bastille Day Parade: ಪ್ರಧಾನಿ ಮೋದಿ ಭಾಗಿ.. ಫ್ರೆಂಚ್ ರಾಷ್ಟ್ರ ಧ್ವಜದ ಬಣ್ಣಗಳಲ್ಲಿ ಗಮನ ಸೆಳೆದ ಫ್ಲೈಪಾಸ್ಟ್

author img

By

Published : Jul 14, 2023, 4:11 PM IST

ಬಾಸ್ಟಿಲ್ ಡೇ ಪರೇಡ್‌ನ ಭಾಗವಾಗಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಚಾಂಪ್ಸ್ - ಎಲಿಸೀಸ್ ಮೇಲೆ ವೈಮಾನಿಕ ಪ್ರದರ್ಶನ(ಫ್ಲೈಪಾಸ್ಟ್ ) ನಡೆಸಿದ್ದು ರೋಮಾಂಚನಕಾರಿಯಾಗಿತ್ತು.

flypast at Bastille Day parade in Paris
ಫ್ರೆಂಚ್ ರಾಷ್ಟ್ರ ಧ್ವಜದ ಬಣ್ಣಗಳಲ್ಲಿ ಗಮನ ಸೆಳೆದ ಫ್ಲೈಪಾಸ್ಟ್

ಪ್ಯಾರಿಸ್‌(ಫ್ರಾನ್ಸ್​): ಪ್ಯಾರಿಸ್‌ನಲ್ಲಿ 'ಬಾಸ್ಟಿಲ್ ಡೇ ಪರೇಡ್' (ಫ್ರೆಂಚ್ ನ್ಯಾಷನಲ್ ಡೇ) ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್, ಫ್ರಾನ್ಸ್​ನ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರೋನ್ ಈ ಸಂಭ್ರಮಾಚರಣೆಗೆ ಸಾಕ್ಷಿಯಾದರು. ಬಾಸ್ಟಿಲ್ ಡೇ ಪರೇಡ್‌ಗೆ ಮುನ್ನ ಪ್ರಧಾನಿ ಮೋದಿ, ಅಧ್ಯಕ್ಷ ಮ್ಯಾಕ್ರನ್ ಚಾಂಪ್ಸ್-ಎಲಿಸೀಸ್‌ಗೆ ಆಗಮಿಸಿದ್ದರು.

ಇಂದು ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯ ಪ್ರಮುಖ ಭಾಗವಾಗಿರುವ ಬಾಸ್ಟಿಲ್ ಡೇ ಪರೇಡ್‌ಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಪ್ಯಾರಿಸ್‌ನಲ್ಲಿ ಭೇಟಿಯಾದರು. ಅಧ್ಯಕ್ಷ ಮ್ಯಾನುಯೆಲ್ ತೆರೆದ ಸೇನಾ ವಾಹನದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದರು. ಫ್ರಾನ್ಸ್ ಅಧ್ಯಕ್ಷರನ್ನು ಪ್ರಧಾನಿ ಎಲಿಜಬೆತ್ ಬೊರ್ನೆ ಹಾಗೂ ಸೇನಾಧಿಕಾರಿಗಳು ಸ್ವಾಗತಿಸಿದರು. ಸೇನಾ ಗೌರವ ಸ್ವೀಕರಿಸಿದ ಮ್ಯಾಕ್ರೋನ್ ಬಳಿಕ ಪ್ರಧಾನಿ ಮೋದಿ ಬಳಿ ಆಗಮಿಸಿ ಆತ್ಮೀಯವಾಗಿ ಆಲಿಂಗಿಸಿಕೊಂಡರು.

ಫ್ರೆಂಚ್ ಅಧ್ಯಕ್ಷರ ಆಹ್ವಾನದ ಮೇರೆಗೆ ಪರೇಡ್‌ನಲ್ಲಿ ಗೌರವಾನ್ವಿತ ಅತಿಥಿಯಾಗಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಮ್ಯಾಕ್ರೋನ್ ಸೇರಿದಂತೆ ಗಣ್ಯರು ತಮ್ಮ ಆಸೀನದಲ್ಲಿ ಕುಳಿತಕೊಂಡ ಬೆನ್ನಲ್ಲೇ ಸೇನೆಯ ವೈಮಾನಿಕ ಪ್ರದರ್ಶನ(ಫ್ಲೈಪಾಸ್ಟ್) ಆರಂಭಗೊಂಡಿತು. ಫ್ರೆಂಚ್ ರಾಷ್ಟ್ರ ಧ್ವಜದ ಬಣ್ಣಗಳಲ್ಲಿ ಆಗಸದಲ್ಲಿ ಸೇನಾ ಏರ್‌ಕ್ರಾಫ್ಟ್ ಚಿತ್ತಾರ ಮೂಡಿಸಿತು. ಬಾಸ್ಟಿಲ್ ಡೇ ದಿನಾಚರಣೆಗೂ ಮುನ್ನ ಪ್ರಧಾನಿ ಮೋದಿ ಅವರಿಗೆ ಫ್ರಾನ್ಸ್ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಫ್ರೆಂಚ್‌ನ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್' ಗೌರವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು.

  • #WATCH | French President Emmanuel Macron tweets, "A giant in world history, with a decisive role to play in the future, a strategic partner, a friend. We are proud to welcome India as our guest of honour at the 14 July parade." pic.twitter.com/MBhEkwrXPl

    — ANI (@ANI) July 14, 2023 " class="align-text-top noRightClick twitterSection" data=" ">

ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾರತೀಯ ವಾಯುಪಡೆ: ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರೋನ್ ಮತ್ತು ಫ್ರಾನ್ಸ್‌ನ ಪಿಎಂ ಎಲಿಜಬೆತ್ ಬೊರ್ನೆ ಅವರು ಬಾಸ್ಟಿಲ್ ಡೇ ಪರೇಡ್‌ಗೆ ಮುಂಚಿತವಾಗಿ ಪ್ರಧಾನಿ ಮೋದಿಯನ್ನು ಬರಮಾಡಿಕೊಂಡರು. ಈ ವರ್ಷದ ಭೇಟಿ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವನ್ನು ಸಂಕೇತಿಸುತ್ತದೆ.

  • #WATCH | Indian Army's Punjab Regiment march along the Champs-Élysées during the Bastille Day parade in Paris, France. The contingent is being led by Captain Aman Jagtap. pic.twitter.com/PV24VTgHHo

ಫ್ರಾನ್ಸ್ ಮತ್ತು ಭಾರತ ಈ ವರ್ಷ ತಮ್ಮ ಕಾರ್ಯತಂತ್ರದ ಪಾಲುದಾರಿಕೆಯ 25 ವರ್ಷಗಳನ್ನು ಆಚರಿಸುತ್ತಿರುವ ಕಾರಣ ಪ್ಯಾರಿಸ್‌ನಲ್ಲಿ ಪ್ರಧಾನಿ ಮೋದಿ ಉಪಸ್ಥಿತಿ ಮಹತ್ವ ಪಡೆದುಕೊಂಡಿದೆ. 269 ಸದಸ್ಯರ ಭಾರತೀಯ ಮೂರು ಸೇನಾ ತುಕಡಿ ಬಾಸ್ಟಿಲ್ ಡೇ ಪರೇಡ್‌ನ ಭಾಗವಾಗಿದೆ. ಸೇನಾ ತುಕಡಿಯ ಭಾಗವಾಗಿ ಮೂರು ಭಾರತೀಯ ವಾಯುಪಡೆಯ ರಫೇಲ್ ಯುದ್ಧವಿಮಾನಗಳು ಸಹ ಪ್ಯಾರಿಸ್‌ನ ಚಾಂಪ್ಸ್ ಎಲಿಸೀಸ್‌ನಲ್ಲಿ ಬಾಸ್ಟಿಲ್ ಡೇ ಫ್ಲೈಪಾಸ್ಟ್‌ನಲ್ಲಿ ಭಾಗವಹಿಸಿವೆ.

ಬಾಸ್ಟಿಲ್ ಡೇ ಪರೇಡ್ ಬಗ್ಗೆ ಒಂದಿಷ್ಟು..: ಬಾಸ್ಟಿಲ್ ಡೇ ಪರೇಡ್ ಎಂಬುದು ಫ್ರೆಂಚ್ ಕ್ರಾಂತಿಯ ಸಮಯದಲ್ಲಿ(1789 1789ರ ಜು.14 ) ಪ್ರಾಚೀನ ರಾಜಮನೆತನದ ಕೋಟೆಯಾದ ಬಾಸ್ಟಿಲ್ ಜೈಲು ದಾಳಿಯನ್ನು ಸ್ಮರಿಸುತ್ತದೆ. ಫ್ರೆಂಚರು ತಮ್ಮ ಐಕ್ಯತೆ ಸಾರುವ ದಿನ ಇದು. ವಿಶೇಷವಾಗಿ 'ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ'ದ ಮೌಲ್ಯಗಳನ್ನು ಎತ್ತಿಹಿಡಿಯುವ ದಿನಾಚರಣೆಯಾಗಿದೆ. ಇದು ಫ್ರೆಂಚ್ ಕ್ರಾಂತಿಯ ಯಶಸ್ಸಿಗೆ ಒಂದು ಮಹತ್ವದ ತಿರುವು. ಈ ದಿನವನ್ನು ಫ್ರಾನ್ಸ್ ರಾಷ್ಟ್ರೀಯ ದಿನವೆಂದು ಗುರುತಿಸಲಾಗಿದೆ.

ಈ ವರ್ಷ ಬಾಸ್ಟಿಲ್ ಡೇ ಪರೇಡ್ ವಿವಿಧ ಮೆರವಣಿಗೆಯಲ್ಲಿ 6,300 ಸೈನಿಕರನ್ನು ಒಳಗೊಂಡಿದೆ. ಇದು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ತ್ರಿ-ಸೇನ ತುಕಡಿಯನ್ನು ಸಹ ಒಳಗೊಂಡಿದೆ. ಭಾರತೀಯ ಸೇನೆಯನ್ನು ಪಂಜಾಬ್ ರೆಜಿಮೆಂಟ್ ಪ್ರತಿನಿಧಿಸುತ್ತದೆ. ಮೊದಲ ಯುದ್ಧದಲ್ಲಿ 18 ಬ್ಯಾಟಲ್ ಮತ್ತು ಥಿಯೇಟರ್ ಗೌರವಗಳನ್ನು ಪಡೆದ ರೆಜಿಮೆಂಟ್ ಪಡೆಗಳು ಎರಡೂ ವಿಶ್ವ ಯುದ್ಧಗಳಲ್ಲಿ ಭಾಗವಹಿಸಿವೆ. ಪಂಜಾಬ್ ರೆಜಿಮೆಂಟ್ ಮೊದಲ ವಿಶ್ವ ಯುದ್ದದ ಸಮಯ(1915)ದಲ್ಲಿ ಲ್ಲಿ ಫ್ರಾನ್ಸ್‌ನ ನ್ಯೂವ್ ಚಾಪೆಲ್ ಬಳಿ ಆಕ್ರಮಣದಲ್ಲಿ ಭಾಗವಹಿಸಿತ್ತು. ಎರಡನೆಯ ಮಹಾಯುದ್ಧದಲ್ಲಿ ರೆಜಿಮೆಂಟ್ 16 ಬ್ಯಾಟಲ್ ಆನರ್ಸ್ ಮತ್ತು 14 ಥಿಯೇಟರ್ ಗೌರವಗಳನ್ನು ಗೆದ್ದು ಕೊಂಡಿದ್ದು ವಿಶೇಷ.

  • Bastille Day Parade underway in Paris; Prime Minister Narendra Modi, French President Emmanuel Macron, France's First Lady Brigitte Macron witness the celebrations. pic.twitter.com/8cHOCUgnqc

"ಸೇನಾ ತುಕಡಿಯನ್ನು ಭಾರತೀಯ ಸೇನೆಯ ಅತ್ಯಂತ ಹಳೆಯ ರೆಜಿಮೆಂಟ್‌ಗಳಲ್ಲಿ ಒಂದಾಗಿರುವ ಪಂಜಾಬ್ ರೆಜಿಮೆಂಟ್ ಪ್ರತಿನಿಧಿಸುತ್ತಿದೆ. ರೆಜಿಮೆಂಟ್‌ನ ಪಡೆಗಳು ವಿಶ್ವ ಯುದ್ಧಗಳು ಮತ್ತು ಸ್ವಾತಂತ್ರ್ಯದ ನಂತರದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿವೆ." ಈ ತುಕಡಿಯನ್ನು ಕ್ಯಾಪ್ಟನ್ ಅಮನ್ ಜಗತಾಪ್ ಮುನ್ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಪತ್ರಿಕಾ ಪ್ರಕಟಣೆಯಲ್ಲಿ ರಕ್ಷಣಾ ಸಚಿವಾಲಯವು, "77 ಕವಾಯತು ಸಿಬ್ಬಂದಿ ಮತ್ತು 38 ಬ್ಯಾಂಡ್ ಸದಸ್ಯರನ್ನು ಒಳಗೊಂಡಿರುವ ಭಾರತೀಯ ಸೇನಾ ತುಕಡಿಯನ್ನು ಕ್ಯಾಪ್ಟನ್ ಅಮನ್ ಜಗತಾಪ್ ಮುನ್ನಡೆಸುತ್ತಿದ್ದಾರೆ. ಭಾರತೀಯ ನೌಕಾಪಡೆಯ ತುಕಡಿಯನ್ನು ಕಮಾಂಡರ್ ವ್ರತ್ ಬಾಘೆಲ್ ಮತ್ತು ಭಾರತೀಯ ವಾಯುಪಡೆಯ ತುಕಡಿಯು ಸ್ಕ್ವಾಡ್ರನ್ ಲೀಡರ್ ಸಿಂಧು ರೆಡ್ಡಿ ಅವರು ಮುನ್ನಡೆಸುತ್ತಿದ್ದಾರೆ ಎಂದು ಹೇಳಿತ್ತು.

ಪ್ರಧಾನಿ ಮೋದಿಯವರ ಫ್ರಾನ್ಸ್​ ಭೇಟಿಯು ಕೈಗಾರಿಕೆಗಳನ್ನು ಒಳಗೊಂಡಂತೆ ಕಾರ್ಯತಂತ್ರ, ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಹೊಸ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸುವ ಮೂಲಕ ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯ ಮುಂದಿನ ಹಂತಕ್ಕೆ ನಾಂದಿ ಹಾಡುವ ನಿರೀಕ್ಷೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: ಹಿಂದಿಯಲ್ಲಿ ಟ್ವೀಟ್​ ಮಾಡಿ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಫ್ರಾನ್ಸ್​ ಅಧ್ಯಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.