ETV Bharat / international

ಡ್ರಗ್ಸ್​ ಸೇವನೆ ಆರೋಪ..ಯಾವುದೇ​ ಪರೀಕ್ಷೆಗೆ ನಾನು ರೆಡಿ ಎಂದ ಜಗತ್ತಿನ ಕಿರಿಯ ಪ್ರಧಾನಿ ಮರಿನ್​ - ವಿಡಿಯೋ ಲೀಕ್ ಆಗಿರುವುದು ದುರದೃಷ್ಟಕರ ಎಂದ ಪಿಎಂ ಮರಿನ್

ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದು ಗೊತ್ತಿರುವ ಸುದ್ದಿ. ಈ ವಿಡಿಯೋ ಬಳಿಕ ಪಿಎಂ ಮರಿನ್​ ವಿರುದ್ಧ ಡ್ರಗ್ಸ್​ ಸೇವನೆ ಆರೋಪ ಎದ್ದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಡ್ರಗ್ಸ್​ ಪರೀಕ್ಷೆಗೆ ನಾನು ಸಜ್ಜು ಎಂದು ಹೇಳಿದ್ದಾರೆ.

Finland PM sanna marin is ready to take drug test  Finland PM sanna marin  Finland PM sanna marin party video viral  drugs allegation on Finland PM sanna marin  ಪರೀಕ್ಷೆಗೆ ನಾನು ರೆಡಿ ಎಂದ ಜಗತ್ತಿನ ಕಿರಿಯ ಪ್ರಧಾನಿ ಮರಿನ್​ ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್ ವಿಡಿಯೋ  ಸನ್ನಾ ಮರಿನ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್  ಪಿಎಂ ಮರಿನ್​ ವಿರುದ್ಧ ಡ್ರಗ್ಸ್​ ಸೇವನೆ ಆರೋಪ  ಸ್ನೇಹಿತರೊಂದಿಗೆ ಕುಡಿಣಿದು ಕುಪ್ಪಳಿಸಿದ ಪಿಎಂ ಮರಿನ್  ಡ್ರಗ್ಸ್​ ಪರೀಕ್ಷೆಗೆ ಪಿಎಂ ಮರಿನ್​ ಸಜ್ಜು  ವಿಡಿಯೋ ಲೀಕ್ ಆಗಿರುವುದು ದುರದೃಷ್ಟಕರ ಎಂದ ಪಿಎಂ ಮರಿನ್  ಜಗತ್ತಿನ ಅತ್ಯಂತ ಕಿರಿಯ ಪ್ರಧಾನಿ ಮರಿನ್
ಪಿಎಂ ಮರಿನ್​ ವಿರುದ್ಧ ಡ್ರಗ್ಸ್​ ಸೇವನೆ ಆರೋಪ
author img

By

Published : Aug 19, 2022, 10:52 AM IST

ಕೋಪನ್ ಹೇಗನ್​​: ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್ ಅವರ ಪಾರ್ಟಿಯ ವೀಡಿಯೊ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಂತರ ಅವರನ್ನು ತೀವ್ರವಾಗಿ ಟೀಕಿಸಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ 36 ವರ್ಷದ ಪ್ರಧಾನಿ ಸನಾ ಮರಿನ್ ತನ್ನ ಸ್ನೇಹಿತರೊಂದಿಗೆ ಡ್ಯಾನ್ಸ್​, ಸಾಂಗ್​ ಮತ್ತು ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ.

ಮಾಧ್ಯಮ ವರದಿಗಳ ಪ್ರಕಾರ, ನಡೆದ ಖಾಸಗಿ ಪಾರ್ಟಿಯಲ್ಲಿ ಪಿಎಂ ಮರಿನ್​ ವಿರುದ್ಧ ಡ್ರಗ್ಸ್​ ಸೇವನೆ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮೌನ ಮುರಿದ ಪಿಎಂ ಮರಿನ್, ನಾನು ಡ್ರಗ್ಸ್ ಸೇವನೆ ಮಾಡಿಲ್ಲ. ಇದನ್ನೂ ಸಾಬೀತು ಪಡಿಸಿಕೊಳ್ಳಲು ನಾನು ಯಾವುದೇ ಪರೀಕ್ಷೆಗೆ ಒಳಗಾಗುವುದಕ್ಕೆ ಸಜ್ಜು. ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುವಾಗ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

  • You won't believe it, but the prime minister of Finland, Sanna Marin, is on fire in this video. If anything, she's on the left in a black top and white pants. Looks like she really knows how to enjoy herself. pic.twitter.com/eM1NN8pLnx#UkraineRussiaWar

    — Ukrainian News24 (@MarkRid89403375) August 18, 2022 " class="align-text-top noRightClick twitterSection" data=" ">

ಸ್ನೇಹಿತರೊಂದಿಗೆ ಕುಡಿಣಿದು ಕುಪ್ಪಳಿಸಿದ ಪಿಎಂ ಮರಿನ್​: ವೈರಲ್ ವಿಡಿಯೋದಲ್ಲಿ ಫಿನ್‌ಲ್ಯಾಂಡ್‌ನ ಪ್ರಧಾನಿ ಕುಣಿದು ಕುಪ್ಪಳಿಸಿದ್ದಾರೆ. ಪಿಎಂ ಮರಿನ್​ ಜೊತೆ ಕನಿಷ್ಠ ಆರು ಜನರು ಹಾಡುವುದು, ಡ್ಯಾನ್ಸ್ ಮಾಡುವುದು ಕಾಣಬಹುದಾಗಿದೆ. ಫಿನ್‌ಲ್ಯಾಂಡ್‌ ಪಿಎಂ ಮರಿನ್ ಡ್ಯಾನ್ಸ್ ಫ್ಲೋರ್‌ನಲ್ಲಿ ತನ್ನ ತೋಳುಗಳನ್ನು ಹಿಡಿದು ನೃತ್ಯ ಮಾಡುತ್ತಿದ್ದಾರೆ.

ಡ್ರಗ್ಸ್​ ಸೇವನೆ ಆರೋಪದ ಬಗ್ಗೆ ಮಾತನಾಡಿದ ಪಿಎಂ ಮರಿನ್​, ಒಂದು ದಿನ ಸಂಜೆ ಖಾಸಗಿ ಪಾರ್ಟಿಯಲ್ಲಿ ನಾನು ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿರುವಾಗ ಡ್ಯಾನ್ಸ್​, ಸಾಂಗ್​ ಸೇರಿದಂತೆ ಮಜಾ ಮಾಡಿದ್ದೇವೆ. ಈ ವೇಳೆ ಮದ್ಯ ಸೇವನೆ ಸಹ ಮಾಡಲಾಗಿದೆ. ಆದ್ರೆ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡ್ರಗ್ಸ್​ ಪರೀಕ್ಷೆಗೆ ಪಿಎಂ ಮರಿನ್​ ಸಜ್ಜು: ಮರಿನ್ ಅವರ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಮಿತ್ರ ಮತ್ತು ಸೆಂಟರ್ ಪಾರ್ಟಿ ಎಂಪಿ ಮಿಕ್ಕೊ ಕರ್ನ್ ಅವರು ಪ್ರಧಾನಿ ಸ್ವಯಂಪ್ರೇರಣೆಯಿಂದ ಡ್ರಗ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದರು. ಬಂದಿರುವ ಮಾಹಿತಿ ಪ್ರಕಾರ ಪಿಎಂ ಮರಿನ್ ಕೂಡ ಈ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ್ದಾರೆ. ವರದಿಗಳ ಪ್ರಕಾರ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ (SDP) ಸಂಸದ ಇಲ್ಮರಿ ನೂರ್ಮಿನೆನ್ ಮತ್ತು ಫಿನ್ನಿಷ್ ಗಾಯಕಿ ಅಲ್ಮಾ ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆದರೆ, ಈ ವಿಡಿಯೋ ಯಾವಾಗ ಎಂಬುದು ಸ್ಪಷ್ಟವಾಗಿಲ್ಲ.

ವಿಡಿಯೋ ಲೀಕ್ ಆಗಿರುವುದು ದುರದೃಷ್ಟಕರ ಎಂದ ಪಿಎಂ ಮರಿನ್​: 2019 ರಲ್ಲಿ ಫಿನ್‌ಲ್ಯಾಂಡ್‌ನ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾದ ಮರಿನ್, ಇತರ ವ್ಯಕ್ತಿಗಳಂತೆ ನಾನು ನನ್ನ ಬಿಡುವಿನ ವೇಳೆಯನ್ನು ಸ್ನೇಹಿತರೊಂದಿಗೆ ಕಳೆಯುತ್ತೇನೆ. ನಾನು ಯಾವಾಗಲೂ ಇದ್ದ ವ್ಯಕ್ತಿಯಾಗಿ ಉಳಿಯಲು ಉದ್ದೇಶಿಸುತ್ತೇನೆ. ಖಾಸಗಿ ಪಾರ್ಟಿಯಲ್ಲಿ ಭಾಗಿಯಾಗಿ ಸ್ನೇಹಿತರೊಂದಿಗೆ ಮಜಾ ಮಾಡಿದ್ದು ನಿಜ.

ಆ ಖಾಸಗಿ ಪಾರ್ಟಿಯ ವಿಡಿಯೋ ಲೀಕ್ ಆಗಿರುವುದು ದುರದೃಷ್ಟಕರ. ಆಲ್ಕೋಹಾಲ್ ಹೊರತುಪಡಿಸಿ ನಾವು ಯಾವುದೇ ಡ್ರಗ್ಸ್​ ತೆಗೆದುಕೊಂಡಿಲ್ಲ. ನಾವು ಮಾಡುವುದೆಲ್ಲವೂ ಕಾನೂನಿನ ವ್ಯಾಪ್ತಿಯಲ್ಲಿರುತ್ತದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ವಿವರಿಸಿದರು.

ಜಗತ್ತಿನ ಅತ್ಯಂತ ಕಿರಿಯ ಪ್ರಧಾನಿ ಮರಿನ್​: ಪ್ರಧಾನಿ ಮರಿನ್ ಈ ರೀತಿ ಟೀಕೆಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೋವಿಡ್​ಗೆ ಸೋಂಕಿಗೆ ಮರಿನ್​ ಒಳಗಾಗಿದ್ದರು. ಆದರೂ, ಅವರು ವಾರಾಂತ್ಯದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂಬುವುದು ಬೆಳಕಿಗೆ ಬಂದಿತ್ತು. ಈ ವಿಷಯವಾಗಿ ನಂತರ ಸ್ವತಃ ಅವರೇ ಕ್ಷಮೆಯನ್ನೂ ಕೇಳಿದ್ದರು.

ಇನ್ನು, 2019ರಲ್ಲಿ ಫಿನ್​ಲ್ಯಾಂಡ್​ ಪ್ರಧಾನಿ ಹುದ್ದೆಗೇರಿರುವ ಸನ್ನಾ ಮರಿನ್ ವಿಶ್ವದ ಅತಂತ್ಯ ಕಿರಿಯ ಪ್ರಧಾನಿಯ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ತಮ್ಮ 34ನೇ ವಯಸ್ಸಿಗೆ ಮರಿನ್​ ಪ್ರಧಾನಿಯಾಗಿರುವುದು ಗಮನಾರ್ಹ.

ಓದಿ: ಜಗತ್ತಿನ ಅತ್ಯಂತ ಯುವ ಪ್ರಧಾನಿ ಮರಿನ್​ ಅವರ ಪಾರ್ಟಿ ವಿಡಿಯೋ ಲೀಕ್​: ಜನರ ಪ್ರತಿಕ್ರಿಯೆ ಹೇಗಿದೆ?

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.