ETV Bharat / international

ರಷ್ಯಾದ ಸದಸ್ಯತ್ವ ಅಮಾನತುಗೊಳಿಸಿದ ಹಣಕಾಸು ಕ್ರಿಯಾ ಕಾರ್ಯಪಡೆ (FATF) - ಉಕ್ರೇನ್​ ಮೇಲಿನ ಯುದ್ಧ

ಹಣಕಾಸು ಕ್ರಿಯಾ ಕಾರ್ಯಪಡೆಯು ರಷ್ಯಾದ ಸದಸ್ಯತ್ವವನ್ನು ಅಮಾನತು ಮಾಡುವ ತೀರ್ಮಾನ ಕೈಗೊಂಡಿದೆ.

Etv Bharat
Etv Bharat
author img

By

Published : Feb 24, 2023, 11:04 PM IST

ಪ್ಯಾರಿಸ್​ (ಫ್ರಾನ್ಸ್​): ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಪೂರೈಕೆಯಾಗುವ ಹಣಕಾಸಿನ ಮೇಲೆ ನಿಗಾವಹಿಸುವ ಅಂತರ್‌ಸರ್ಕಾರಗಳ ಕಾರ್ಯಪಡೆಯಾದ ಹಣಕಾಸು ಕ್ರಿಯಾ ಕಾರ್ಯಪಡೆ (Financial Action Task Force- FATF)ಯು ರಷ್ಯಾದ ಸದಸ್ಯತ್ವವನ್ನು ಅಮಾನತುಗೊಳಿಸಲು ನಿರ್ಧರಿಸಿದೆ. ಉಕ್ರೇನ್​ ಮೇಲಿನ ಯುದ್ಧ ವಿಚಾರವಾಗಿ ಎಫ್​​ಎಟಿಎಫ್​ ಈ ತೀರ್ಮಾನಕ್ಕೆ ಬಂದಿದೆ.

ಜಾಗತಿಕ ಹಣಕಾಸು ವ್ಯವಸ್ಥೆಯ ಭದ್ರತೆ, ಸುರಕ್ಷತೆ ಮತ್ತು ಸಮಗ್ರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ತನ್ನ ಮೂಲ ತತ್ವಗಳಿಗೆ ರಷ್ಯಾದ ಒಕ್ಕೂಟದ ಕ್ರಮಗಳು ಸ್ವೀಕಾರಾರ್ಹವಲ್ಲ ಎಂದು ಎಫ್​​ಎಟಿಎಫ್ ಹೇಳಿದೆ. ರಷ್ಯಾದ ಒಕ್ಕೂಟವು ಉಕ್ರೇನ್‌ ಮೇಲಿನ ಅಕ್ರಮ, ಅಪ್ರಚೋದಿತ ಮತ್ತು ನ್ಯಾಯ ಸಮ್ಮತವಲ್ಲದ ಪೂರ್ಣ ಪ್ರಮಾಣದ ಮಿಲಿಟರಿ ಆಕ್ರಮಣದ ಒಂದು ವರ್ಷದ ನಂತರವೂ ಕೂಡ ಎಫ್​​ಎಟಿಎಫ್, ಉಕ್ರೇನ್ ಜನರ ಬಗ್ಗೆ ತನ್ನ ಆಳವಾದ ಸಹಾನುಭೂತಿ ಹೊಂದಿದೆ ಎಂದು ಪುನರುಚ್ಚರಿಸುತ್ತದೆ. ರಷ್ಯಾದ ಒಕ್ಕೂಟದ ನಡೆಯುತ್ತಿರುವ ಕ್ರೂರತೆಯಿಂದ ಉಂಟಾದ ಅಪಾರ ಜೀವಹಾನಿ ಹಾಗೂ ದುರುದ್ದೇಶಪೂರಿತ ವಿನಾಶವನ್ನು ಖಂಡಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ: ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು: ಕಾಶ್ಮೀರಿ ನಾಯಕತ್ವ, ಪ್ರತ್ಯೇಕತಾವಾದಿಗಳ ಮೇಲೇನು ಪರಿಣಾಮ?

ಇದೇ ವೇಳೆ ಎಫ್‌ಎಟಿಎಫ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯನ್ನು ಅಂಗೀಕರಿಸುತ್ತದೆ. ರಷ್ಯಾದ ಒಕ್ಕೂಟವು ತನ್ನ ಎಲ್ಲ ಸೇನೆ ಪಡೆಗಳನ್ನು ತಕ್ಷಣವೇ ಸಂಪೂರ್ಣವಾಗಿ ಮತ್ತು ಬೇಷರತ್ತಾಗಿ ಉಕ್ರೇನ್​ನಿಂದ ತನ್ನ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಯೊಳಗೆ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತದೆ ಎಂದೂ ಸ್ಪಷ್ಟವಾಗಿ ಹೇಳಿದೆ. ರಷ್ಯಾ ಅಂತಾರಾಷ್ಟ್ರೀಯ ಸಹಕಾರ ಮತ್ತು ಪರಸ್ಪರ ಗೌರವದ ಬದ್ಧತೆಯ ಸಂಪೂರ್ಣವಾಗಿ ಉಲ್ಲಂಘಿಸುತ್ತಿದೆ. ಹೀಗಾಗಿ ಈ ರಾಷ್ಟ್ರದ ಮೇಲೆ ಎಲ್ಲ ಸದಸ್ಯರು ಎಫ್​​ಎಟಿಎಫ್ ಮಾನದಂಡಗಳನ್ನು ಜಾರಿಗೆ ತರಲು ಸಮ್ಮತಿಸಿದ್ದಾರೆ ಎಂದು ಪ್ರಕಟಣೆಯನ್ನು ಹೊರಡಿಸಿದೆ.

ಮತ್ತೊಂದೆಡೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿಂದು ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಮತ್ತು ತಕ್ಷಣ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ರಷ್ಯಾವನ್ನು ಒತ್ತಾಯಿಸುವ ನಿರ್ಣಯಕ್ಕೆ ಸಂಬಂಧಿಸಿದಂತೆ ಮತ ಚಲಾಯಿಸಲಾಗಿದೆ. ಇದರ ಬೆನ್ನಲ್ಲೇ, ಎಫ್​​ಎಟಿಎಫ್​ ರಷ್ಯಾದ ಸದಸ್ಯತ್ವ ಅಮಾನತು ಮಾಡುವ ಈ ನಿರ್ಧಾರಕ್ಕೆ ಬಂದಿದೆ.

ಇದನ್ನೂ ಓದಿ: ಉಕ್ರೇನ್​​ನಲ್ಲಿ ಶಾಂತಿ ಸ್ಥಾಪನೆ, ತಕ್ಷಣ ರಷ್ಯಾ ಸೇನೆ ವಾಪಸ್​ ಪಡೆಯುವಂತೆ ನಿರ್ಣಯ: ಮತದಾನದಿಂದ ದೂರ ಉಳಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.