ಬರ್ಲಿನ್(ಜರ್ಮನಿ) : ಇಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರಿಗೆ ತಮ್ಮ ಜಮೀನಿನಲ್ಲೇ ವಿಷಕಾರಿ ಹಾವೊಂದು ಕಚ್ಚಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಓಡಿ ಬಂದಿದ್ದಾರೆ. ಆ ವೇಳೆ, ಮಹಿಳೆ ತಮ್ಮ ಜಮೀನಿನಲ್ಲಿ ವಿಷಕಾರಿ ಹಾವುಗಳನ್ನು ಸಂಗ್ರಹಿಸಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಮಹಿಳೆಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಿದ ಬಳಿಕ ಆಕೆಯ ಫಾರ್ಮ್‌ಗೆ ಭೇಟಿ ನೀಡಿದ ಜರ್ಮನಿ ಪೊಲೀಸರು ಅಲ್ಲಿದ್ದ 110ಕ್ಕೂ ಹೆಚ್ಚಿನ ಅಪಾಯಕಾರಿ ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮುಂಜಾನೆ 35 ವರ್ಷದ ಮಹಿಳೆಯೊಬ್ಬರು ಹ್ಯಾನೋವರ್ ಬಳಿಯ ಸಾಲ್ಜ್‌ಗಿಟ್ಟರ್‌ನಲ್ಲಿರುವ ಆಸ್ಪತ್ರೆಗೆ ಓಡಿ ಬಂದು, ತನ್ನ ರ್ಯಾಟಲ್ ಸ್ನೇಕ್‌ಗಳಲ್ಲಿ ಒಂದು ತನ್ನ ಬೆರಳಿಗೆ ಕಚ್ಚಿದೆ. ಚಿಕಿತ್ಸೆ ನೀಡಿ ಎಂದು ಅಲ್ಲಿನ ವೈದ್ಯರಿಗೆ ತಿಳಿಸಿದ್ದಾರೆ. ಮಹಿಳೆಯ ಸ್ಥಿತಿ ಹದಗೆಟ್ಟಾಗ ಅಲ್ಲಿನ ಅಧಿಕಾರಿಗಳು ತರಾತುರಿಯಲ್ಲಿ ಹ್ಯಾಂಬರ್ಗ್‌ನ ವಿಶೇಷ ಸಂಸ್ಥೆಯಿಂದ ಔಷಧ ತರಿಸಿ ಚಿಕಿತ್ಸೆ ನೀಡಿದ್ದಾರೆ.
ಈ ವಿಷಯ ತಿಳಿದ ಪೊಲೀಸರು ಮಧ್ಯ ಜರ್ಮನಿಯ ಫಾರ್ಮ್‌ಗೆ ಭೇಟಿ ನೀಡಿದ್ದು, ಆ ವೇಳೆ ಮಹಿಳೆ ಫಾರ್ಮ್ನಲ್ಲಿ ಸಂಗ್ರಹಿಸಿಟ್ಟಿದ್ದ ಡಜನ್ಗಟ್ಟಲೆ ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಿಳೆಯ ಫಾರ್ಮ್ನಿಂದ ನಾವು ಸಂಗ್ರಹಿಸಿರುವ ಹಾವುಗಳನ್ನು ಪರಿಶೀಲಿಸಿದ ತಜ್ಞರು ಹಾವಿನ ಸಂಗ್ರಹಣೆಯಲ್ಲಿ ಸಂಕೋಚಿತ ಮತ್ತು ವಿಷಕಾರಿ ಪ್ರಭೇದಗಳು ಇವೆ. ಇವುಗಳನ್ನು ಸೂಕ್ತವಾದ ರೀತಿಯಲ್ಲಿ ಇರಿಸಿರಲಿಲ್ಲ ಎಂಬುದು ಪೊಲೀಸರು ಅಲ್ಲಿಗೆ ಭೇಟಿ ನೀಡಿದಾಗ ತಿಳಿದು ಬಂದಿದೆ. ಅಲ್ಲಿ ಸಿಕ್ಕ ಸರೀಸೃಪಗಳೆಲ್ಲವನ್ನೂ ಪೊಲೀಸರು ಈಗ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಅಂಬರ್ ಹರ್ಡ್, ರಾಬರ್ಟ್ ಪ್ಯಾಟಿನ್ಸನ್ 'ವಿಶ್ವದ ಅತ್ಯಂತ ಸುಂದರ ತಾರೆಯರು'!