ETV Bharat / international

EXPLAINER: ಶಿಂಜೊ ಅಬೆ ಸರ್ಕಾರಿ ಅಂತ್ಯಕ್ರಿಯೆಗೆ ಜಪಾನ್​ನಲ್ಲಿ ವಿರೋಧವೇಕೆ?

ಯುದ್ಧದ ನಂತರ ಸರ್ಕಾರಿ ಅಂತ್ಯಕ್ರಿಯೆಯ ಕಾನೂನನ್ನು ರದ್ದುಗೊಳಿಸಲಾಯಿತು. ಜಪಾನ್‌ನ ಯುಎಸ್ ಆಕ್ರಮಣವನ್ನು ಕೊನೆಗೊಳಿಸುವ ಮತ್ತು ಮಿತ್ರರಾಷ್ಟ್ರಗಳೊಂದಿಗಿನ ಸಂಬಂಧಗಳನ್ನು ಮರುಸ್ಥಾಪಿಸುವ ಸ್ಯಾನ್ ಫ್ರಾನ್ಸಿಸ್ಕೊ ​​ಒಪ್ಪಂದಕ್ಕೆ ಸಹಿ ಹಾಕಿದ ರಾಜಕೀಯ ನಾಯಕ ಶಿಗೆರು ಯೋಶಿದಾಗೆ 1967 ರಲ್ಲಿ ಜಪಾನ್‌ನ ಸರ್ಕಾರಿ ಅಂತ್ಯಕ್ರಿಯೆ ನಡೆಯಿತು.

author img

By

Published : Sep 27, 2022, 1:25 PM IST

Updated : Sep 28, 2022, 4:28 PM IST

ಶಿಂಜೊ ಅಬೆ ಸರ್ಕಾರಿ ಅಂತ್ಯಕ್ರಿಯೆಗೆ ಜಪಾನ್​ನಲ್ಲಿ ವಿರೋಧ ಏಕೆ?
EXPLAINER: Why is Japan split over Abe's state funeral?

ಟೋಕಿಯೊ (ಜಪಾನ್): ಜುಲೈನಲ್ಲಿ ಹತ್ಯೆಗೀಡಾದ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಸರ್ಕಾರಿ ಅಂತ್ಯಕ್ರಿಯೆಯು ಜಪಾನ್​ನಲ್ಲಿ ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ. ದಿಟ್ಟ ವ್ಯಕ್ತಿತ್ವದ ಅಬೆ, ಯುದ್ಧನಂತರ ದೇಶ ಕಂಡ ರಾಷ್ಟ್ರದ ಅತ್ಯಂತ ವಿಭಜಿತ ಗುಣದ ನಾಯಕರಲ್ಲೊಬ್ಬರಾಗಿದ್ದರು. ಆದರೆ ಈಗ ಆಡಳಿತ ಪಕ್ಷವು ಅಲ್ಟ್ರಾ-ಕನ್ಸರ್ವೇಟಿವ್ ಯೂನಿಫಿಕೇಶನ್ ಚರ್ಚ್‌ನೊಂದಿಗೆ ಹೊಂದಿರುವ ಸ್ನೇಹಶೀಲ ಸಂಬಂಧದ ಕಾರಣದಿಂದ ಅಬೆ ಅವರ ಅಂತ್ಯಕ್ರಿಯೆಗೆ ಹೆಚ್ಚಿನ ವಿರೋಧ ವ್ಯಕ್ತವಾಗುತ್ತಿದೆ.

ತನ್ನ ಪಕ್ಷದ ಜನಪ್ರತಿನಿಧಿಗಳು ಚರ್ಚ್​​ನೊಂದಿಗೆ ಹೊಂದಿರುವ ಸಂಬಂಧ ಮತ್ತು ಅಬೆ ಅವರ ಸರ್ಕಾರಿ ಅಂತ್ಯಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಪ್ರಧಾನಿ ಫುಮಿಯೊ ಕಿಶಿಡಾ ಅವರು ಎರಡು ರೀತಿಯಿಂದ ರಾಜಕೀಯ ಸಂದಿಗ್ಧದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅಬೆ ಅವರ ಸರ್ಕಾರಿ ಅಂತ್ಯಕ್ರಿಯೆಗೆ ಎದ್ದಿರುವ ಅಪಸ್ವರಗಳಿಗೆ ಕೆಲ ಕಾರಣಗಳು ಇಲ್ಲಿವೆ.

ಜಪಾನ್​ನಲ್ಲಿ ಯಾರಿಗೆಲ್ಲ ಸರ್ಕಾರಿ ಅಂತ್ಯಕ್ರಿಯೆ ಮಾಡಲಾಗುತ್ತದೆ?: ದೇಶಕ್ಕೆ ಅಪ್ರತಿಮ ಕೊಡುಗೆ ನೀಡುವವರಿಗೆ ಚಕ್ರವರ್ತಿಯು ನೀಡುವ ಸನ್ಮಾನದ ಪರಂಪರೆಯಲ್ಲಿ ಇದರ ಬೇರುಗಳು ಅಡಗಿವೆ. ಎರಡನೇ ಮಹಾಯುದ್ಧಕ್ಕೆ ಮೊದಲು ಚಕ್ರವರ್ತಿಯನ್ನು ದೇವರೆಂದು ಪರಿಗಣಿಸಲಾಗುತ್ತಿತ್ತು ಮತ್ತು ಸರ್ಕಾರಿ ಅಂತ್ಯಕ್ರಿಯೆಯ ಗೌರವ ಪಡೆದವರಿಗಾಗಿ ಸಾರ್ವಜನಿಕ ಶೋಕಾಚರಣೆ ಕಡ್ಡಾಯವಾಗಿತ್ತು. ಸರ್ಕಾರಿ ಅಂತ್ಯಕ್ರಿಯೆಗಳು ಬಹುತೇಕ ರಾಜಮನೆತನದವರಿಗೆ ಸೀಮಿತವಾಗಿದ್ದವು. ಆದಾಗ್ಯೂ ರಾಜಕೀಯ ಮತ್ತು ಮಿಲಿಟರಿ ನಾಯಕರಿಗೂ ಸರ್ಕಾರಿ ಅಂತ್ಯಕ್ರಿಯೆಯ ಗೌರವ ನೀಡಲಾಗಿತ್ತು. ಜಪಾನ್​ನ ಪರ್ಲ್​ ಹಾರ್ಬರ್ ದಾಳಿಯ ನೇತೃತ್ವ ವಹಿಸಿ 1943ರಲ್ಲಿ ನಿಧನರಾದ ಇಸೋರೊಕು ಯಮಾಮೊಟೊ ಅವರಿಗೆ ಸರ್ಕಾರಿ ಅಂತ್ಯಕ್ರಿಯೆಯ ಗೌರವ ನೀಡಲಾಗಿತ್ತು.

ಕಾನೂನಿನ ಆಧಾರವಿಲ್ಲ: ಯುದ್ಧದ ನಂತರ ಸರ್ಕಾರಿ ಅಂತ್ಯಕ್ರಿಯೆಯ ಕಾನೂನನ್ನು ರದ್ದುಗೊಳಿಸಲಾಯಿತು. ಜಪಾನ್‌ನ ಯುಎಸ್ ಆಕ್ರಮಣವನ್ನು ಕೊನೆಗೊಳಿಸುವ ಮತ್ತು ಮಿತ್ರರಾಷ್ಟ್ರಗಳೊಂದಿಗಿನ ಸಂಬಂಧಗಳನ್ನು ಮರುಸ್ಥಾಪಿಸುವ ಸ್ಯಾನ್ ಫ್ರಾನ್ಸಿಸ್ಕೊ ​​ಒಪ್ಪಂದಕ್ಕೆ ಸಹಿ ಹಾಕಿದ ರಾಜಕೀಯ ನಾಯಕ ಶಿಗೆರು ಯೋಶಿದಾಗೆ 1967 ರಲ್ಲಿ ಜಪಾನ್‌ನ ಸರ್ಕಾರಿ ಅಂತ್ಯಕ್ರಿಯೆ ನಡೆಯಿತು. ಯೋಶಿದಾ ಅಂತ್ಯಕ್ರಿಯೆಯನ್ನು ಯಾವುದೇ ಕಾನೂನಿನ ಆಧಾರವಿಲ್ಲದೆ ನಡೆಸಲಾಯಿತು ಎಂಬ ಟೀಕೆಯಿಂದಾಗಿ, ನಂತರದ ಸರ್ಕಾರಗಳು ಅಂಥ ಸಂಪ್ರದಾಯಗಳನ್ನು ಕಡಿಮೆಗೊಳಿಸಿದವು. ಸರ್ಕಾರಿ ಅಂತ್ಯಕ್ರಿಯೆಯು ಪ್ರಜಾಪ್ರಭುತ್ವದ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಚುವೊ ವಿಶ್ವವಿದ್ಯಾಲಯದ ಇತಿಹಾಸಕಾರ ಜುನಿಚಿ ಮಿಯಾಮಾ ಹೇಳಿದ್ದಾರೆ.

ಶಿಂಜೊ ಅಬೆ ಅವರಿಗೆ ಸರ್ಕಾರಿ ಅಂತ್ಯಕ್ರಿಯೆ ಏಕೆ?: ಜಪಾನ್‌ನ ಆಧುನಿಕ ರಾಜಕೀಯ ಇತಿಹಾಸದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ನಾಯಕ ಮತ್ತು ಜಪಾನ್‌ನ ಅಂತರರಾಷ್ಟ್ರೀಯ ಪ್ರೊಫೈಲ್ ಅನ್ನು ಹೆಚ್ಚಿಸಿದ ಅವರ ರಾಜತಾಂತ್ರಿಕ, ಭದ್ರತೆ ಮತ್ತು ಆರ್ಥಿಕ ನೀತಿಗಳಿಗಾಗಿ ಅಬೆ ಅವರು ಸರ್ಕಾರಿ ಅಂತ್ಯಕ್ರಿಯೆಗೆ ಅರ್ಹರು ಎಂದು ಕಿಶಿಡಾ ಹೇಳುತ್ತಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಬೆಯ ಹತ್ಯೆಯನ್ನು ಗಮನಿಸಿದ ಕಿಶಿದಾ, ಪ್ರಜಾಪ್ರಭುತ್ವದ ವಿರುದ್ಧ ಹಿಂಸೆಗೆ ಎಂದಿಗೂ ತಲೆಬಾಗದ ತನ್ನ ದೃಢಸಂಕಲ್ಪವನ್ನು ಜಪಾನ್ ತೋರಿಸಬೇಕು ಎಂದು ಹೇಳುತ್ತಾರೆ.

ಸರ್ಕಾರಿ ಅಂತ್ಯಕ್ರಿಯೆಯು ಅಬೆ ಅವರ ಕೆಟ್ಟ ಆಡಳಿತವನ್ನು ಮರೆಮಾಚುವ ಹಾಗೂ ಯುನಿಫಿಕೇಶನ್ ಚರ್ಚ್​ನೊಂದಿಗೆ ಅವರ ಹಗರಣಗಳನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ ಎನ್ನುತ್ತಾರೆ ಸೋಫಿಯಾ ವಿಶ್ವವಿದ್ಯಾನಿಲಯದ ಅಂತರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕ ಕೊಯಿಚಿ ನಕಾನೊ. ಅಕ್ರಮ ನೇಮಕಾತಿ ಮತ್ತು ಅನೈತಿಕ ವ್ಯಾಪಾರದ ಆರೋಪಗಳು ಚರ್ಚ್ ಮೇಲಿವೆ. ಆದರೆ ಚರ್ಚ್ ಅದನ್ನು ನಿರಾಕರಿಸಿದೆ.

ಸರ್ಕಾರಿ ಅಂತ್ಯಕ್ರಿಯೆ ಏಕೆ ವಿವಾದಾತ್ಮಕ? : ಅಂತ್ಯಕ್ರಿಯೆಯನ್ನು ನಡೆಸಲು ಕಿಶಿಡಾ ಕ್ಯಾಬಿನೆಟ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಇದು ಪ್ರಜಾಸತ್ತಾತ್ಮಕವಲ್ಲ ಎಂದು ಸ್ಪಷ್ಟ ಕಾನೂನು ಆಧಾರಗಳ ಕೊರತೆಯನ್ನು ಉಲ್ಲೇಖಿಸಿರುವ ಅವರ ವಿರೋಧಿಗಳು ಹೇಳುತ್ತಾರೆ. ಅಬೆ ಅವರು ಯುದ್ಧಕಾಲದಲ್ಲಿ ಜಪಾನ್​ನ ಅನ್ಯಾಯಗಳನ್ನು ಮುಚ್ಚಿಹಾಕಿದ್ದು, ಹೆಚ್ಚಿನ ಮಿಲಿಟರಿ ಖರ್ಚಿಗೆ ಮುಂದಾಗಿದ್ದು, ಲಿಂಗಾಧಾರಿತ ದೃಷ್ಟಿಕೋನ ಮತ್ತು ಸರ್ವಾಧಿಕಾರಿ ಹಾಗೂ ಬಂಡವಾಳಶಾಹಿ ನಾಯಕತ್ವ ಈ ಎಲ್ಲ ಅಂಶಗಳನ್ನು ಅವರ ವಿರೋಧಿಗಳು ಎತ್ತಿ ತೋರಿಸುತ್ತಿದ್ದಾರೆ. ಯುನಿಫಿಕೇಶನ್ ಚರ್ಚ್​​ನೊಂದಿಗೆ ಅಬೆ ಮತ್ತು ಎಲ್​ಡಿಪಿ ಜನಪ್ರತಿನಿಧಿಗಳ ಲಿಂಕ್ ಗಳ ಬಗ್ಗೆ ಮಾಹಿತಿಗಳು ಹೊರಬೀಳುತ್ತಿರುವಂತೆ ಅವರ ಸರ್ಕಾರಿ ಅಂತ್ಯಕ್ರಿಯೆ ವಿರೋಧಗಳು ಹೆಚ್ಚಾಗುತ್ತಿವೆ.

ದಕ್ಷಿಣ ಕೊರಿಯಾ ಮೂಲದ ಚರ್ಚ್ ಸಂಪ್ರದಾಯವಾದಿ ಹಿತಾಸಕ್ತಿಗಳ ಮೇಲೆ ಎಲ್​ಡಿಪಿ ಶಾಸಕರೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿದೆ. ಅಬೆ ಅವರನ್ನು ಕೊಲೆಗೈದ ವ್ಯಕ್ತಿ ಅವರ ಪಕ್ಷ ಮತ್ತು ಚರ್ಚ್ ನಡುವಿನ ಸಂಬಂಧಗಳ ಬಗ್ಗೆ ಕೋಪಗೊಂಡಿದ್ದನೆಂದು ವರದಿಯಾಗಿದೆ. ಅಬೆ ಅವರ ಅಜ್ಜ ಮತ್ತು ಮಾಜಿ ನಾಯಕ ನೋಬುಸುಕೆ ಕಿಶಿ, ಜಪಾನ್​ನಲ್ಲಿ ಚರ್ಚ್ ಬೇರೂರಲು ಸಹಾಯ ಮಾಡಿದ್ದರು ಎನ್ನಲಾಗಿದ್ದು, ಈಗ ಹಗರಣದಲ್ಲಿ ಅಬೆ ಅವರೇ ಪ್ರಮುಖ ಪಾತ್ರಧಾರಿ ಎಂದು ಆರೋಪಿಸಲಾಗುತ್ತಿದೆ. ಅಬೆ ಅವರಿಗೆ ಸರ್ಕಾರಿ ಅಂತ್ಯಕ್ರಿಯೆ ಗೌರವ ನೀಡುವುದೆಂದರೆ, ಯುನಿಫಿಕೇಶನ್ ಚರ್ಚ್​​ನೊಂದಿಗೆ ಪಕ್ಷದ ಸಂಬಂಧಗಳನ್ನು ಸಮರ್ಥಿಸಿಕೊಂಡಂತೆ ಎಂದು ಆರೋಪಿಸಲಾಗುತ್ತಿದೆ.

ಸರ್ಕಾರಿ ಅಂತ್ಯಕ್ರಿಯೆ ವೆಚ್ಚ ಎಷ್ಟು?: ಅತಿಥಿಗಳಿಗೆ ಸ್ಥಳ, ಭದ್ರತೆ, ಸಾರಿಗೆ ಮತ್ತು ವಸತಿಗಾಗಿ ಸುಮಾರು 1.7 ಬಿಲಿಯನ್ ಯೆನ್ ($ 11.8 ಮಿಲಿಯನ್) ಅಗತ್ಯವಿದೆ ಎಂದು ಸರ್ಕಾರ ಹೇಳಿದೆ. ಅಬೆ ಅವರ ನೀತಿಗಳಿಂದ ಉಂಟಾದ ವ್ಯಾಪಕ ಆರ್ಥಿಕ ಅಸಮಾನತೆಗಳನ್ನು ಪರಿಹರಿಸುವಂಥ ಹೆಚ್ಚು ಅರ್ಥಪೂರ್ಣ ಕಾರಣಗಳಿಗಾಗಿ ತೆರಿಗೆ ಹಣವನ್ನು ಖರ್ಚು ಮಾಡಬೇಕು ಎಂದು ವಿರೋಧಿಗಳು ಕುಟುಕಿದ್ದಾರೆ.

ಕಿಶಿಡಾ ಮೇಲಾಗುವ ಪರಿಣಾಮಗಳೇನು?: ಒಂದು ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡ ಕಿಶಿಡಾ ಅವರು ಸ್ಥಿರವಾದ ಸಾರ್ವಜನಿಕ ಬೆಂಬಲವನ್ನು ಹೊಂದಿದ್ದರು. ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದ ಅವರಿಗೆ ಮೂರು ವರ್ಷಗಳ ಆಡಳಿತಾವಧಿಯಿದೆ. ಆದರೆ ಅವರ ಬೆಂಬಲದ ರೇಟಿಂಗ್‌ಗಳು ಸರ್ಕಾರಿ ಅಂತ್ಯಕ್ರಿಯೆಯ ನಿರ್ವಹಣೆ ಮತ್ತು ದಕ್ಷಿಣ ಕೊರಿಯಾದ ಚರ್ಚ್‌ಗೆ ಅವರ ಆಡಳಿತ ಪಕ್ಷದ ಸಂಬಂಧಗಳ ಕಾರಣದಿಂದ ಕುಸಿಯುತ್ತಿವೆ.

ಇದನ್ನೂ ಓದಿ: ಗುಂಡಿನ ದಾಳಿಗೊಳಗಾದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಇನ್ನಿಲ್ಲ

Last Updated : Sep 28, 2022, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.