ಇಸ್ಲಾಮಾಬಾದ್(ಪಾಕಿಸ್ತಾನ): ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ಗೆ ಇದೀಗ ಸಂಕಷ್ಟವೊಂದು ಎದುರಾಗಿದ್ದು, ತಮ್ಮ ಅಧಿಕಾರ ಅವಧಿಯಲ್ಲಿ ಉಡುಗೊರೆಯಾಗಿ ಬಂದಿದ್ದ ನೆಕ್ಲೆಸ್ ಮಾರಾಟ ಮಾಡಿರುವ ಆರೋಪಕ್ಕೊಳಗಾಗಿದ್ದಾರೆ. ಹೀಗಾಗಿ ಅವರು ಉನ್ನತ ತನಿಖಾ ಸಂಸ್ಥೆಯಿಂದ ವಿಚಾರಣೆಗೊಳಪಡುವ ಸಾಧ್ಯತೆ ಇದೆ.
ಪಾಕಿಸ್ತಾನದ ಪ್ರಧಾನಿಯಾಗಿದ್ದ ವೇಳೆ ಇಮ್ರಾನ್ ಖಾನ್ಗೆ 18 ಕೋಟಿ ರೂ. ಮೌಲ್ಯದ ನೆಕ್ಲೆಸ್ ಉಡುಗೊರೆಯಾಗಿ ಬಂದಿತ್ತು. ಇದನ್ನ ದೇಶದ ಉಡುಗೊರೆ ಭಂಡಾರಕ್ಕೆ ನೀಡುವ ಬದಲು ಆಭರಣ ವ್ಯಾಪಾರಿಗೆ ಮಾರಾಟ ಮಾಡಿದ್ದಾರೆಂಬ ಆರೋಪ ಅವರ ಮೇಲೆ ಕೇಳಿ ಬಂದಿದೆ. ಹೀಗಾಗಿ, ಅಲ್ಲಿನ ಉನ್ನತ ಶಿಕ್ಷಣ ಸಂಸ್ಥೆ ವಿಚಾರಣೆ ಆರಂಭ ಮಾಡಿದೆ.
ಇದನ್ನೂ ಓದಿ: ನೋಡಿ: ಈ ರೆಸ್ಟೋರೆಂಟ್ನಲ್ಲಿ ರೈಲಲ್ಲಿ ಬರುತ್ತೆ ಡೈನಿಂಗ್ ಟೇಬಲ್ಗೆ ಫುಡ್!
ಇಮ್ರಾನ್ ಖಾನ್ ವಿರುದ್ಧ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ತನಿಖೆ ಆರಂಭ ಮಾಡಿದ್ದು, ಮುಂದಿನ ಕೆಲ ದಿನಗಳಲ್ಲಿ ಅವರನ್ನ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಸಾರ್ವಜನಿಕವಾಗಿ ಬರುವ ಉಡುಗೊರೆಗಳನ್ನ ಅದರ ಅರ್ಧ ಬೆಲೆ ಪಾವತಿ ಮಾಡುವ ಮೂಲಕ ವೈಯಕ್ತಿಕವಾಗಿ ಇಟ್ಟುಕೊಳ್ಳಬಹುದಾಗಿದೆ. ಆದರೆ, ಕಳೆದ ವಾರ ಸಂಸತ್ತಿನಲ್ಲಿ ಬೆಂಬಲ ಕಳೆದುಕೊಂಡಿರುವ ಇಮ್ರಾನ್ ಖಾನ್ ಅಕ್ರಮವಾಗಿ ರಾಷ್ಟ್ರೀಯ ಖಜಾನೆಗೆ ಲಕ್ಷಾಂತರ ರೂಪಾಯಿ ಮಾತ್ರ ಠೇವಣಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಪಾಕಿಸ್ತಾನ ರಾಜಕೀಯ ಬಿಕ್ಕಟ್ಟಿನಲ್ಲಿ ಅವಿಶ್ವಾಸ ವೇಳೆ ಸೋಲು ಕಂಡಿರುವ ಇಮ್ರಾನ್ ಖಾನ್ ಸ್ಥಾನಕ್ಕೆ ಈಗಾಗಲೇ ನವಾಜ್ ಷರೀಫ್ ಸಹೋದರ ಶೆಹಜಾನ್ ಷರೀಫ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.