ETV Bharat / international

ಉಕ್ರೇನ್, ಮೊಲ್ಡೊವಾ ಜೊತೆ EU ಸದಸ್ಯತ್ವದ ಮಾತುಕತೆ: ಇದು ಉಕ್ರೇನ್ ವಿಜಯ ಎಂದು ಕರೆದ ಝೆಲೆನ್ಸ್ಕಿ - ಉಕ್ರೇನ್ ವಿಜಯ

ಯುರೋಪಿಯನ್ ಯೂನಿಯನ್ ಗ್ರೀನ್‌ಲೈಟ್ಸ್ ಸದಸ್ಯತ್ವದ ಕುರಿತಾದ ಮಾತುಕತೆಗಳನ್ನು ಉಕ್ರೇನ್, ಮೊಲ್ಡೊವಾ ಜೊತೆ ಪ್ರಾರಂಭಿಸಿದೆ ಎಂದು ಯುರೋಪಿಯನ್ ಯೂನಿಯನ್ ಕೌನ್ಸಿಲ್ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

Zelenskyy
ಝೆಲೆನ್ಸ್ಕಿ
author img

By ETV Bharat Karnataka Team

Published : Dec 15, 2023, 7:28 AM IST

ಬ್ರಸ್ಸೆಲ್ಸ್​​​​( ಬೆಲ್ಜಿಯಂ) : ಉಕ್ರೇನ್ ಮತ್ತು ಮೊಲ್ಡೊವಾ ಜೊತೆ ಯುರೋಪಿಯನ್ ಕೌನ್ಸಿಲ್ ಸದಸ್ಯತ್ವದ ಮಾತುಕತೆಗಳನ್ನು ಆರಂಭಿಸಿದೆ ಎಂದು ಯುರೋಪಿಯನ್ ಯೂನಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಗುರುವಾರ ಮಾಹಿತಿ ನೀಡಿದ್ದಾರೆ. ಈ ಬೆಳವಣಿಗೆಯನ್ನು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ"ಉಕ್ರೇನ್ ವಿಜಯ" ಎಂದು ಕರೆದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಝೆಲೆನ್ಸ್ಕಿ, "ಉಕ್ರೇನ್ ಮತ್ತು ಮೊಲ್ಡೊವಾ ದೇಶಗಳಿಗೆ ಯುರೋಪಿಯನ್ ಯೂನಿಯನ್ ಗ್ರೀನ್‌ಲೈಟ್ಸ್ ಸದಸ್ಯತ್ವ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಇದು ಉಕ್ರೇನ್‌ಗೆ ವಿಜಯದ ಸಂಕೇತ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ದಣಿದಿಲ್ಲದವರು ಇತಿಹಾಸವನ್ನು ನಿರ್ಮಿಸುತ್ತಾರೆ" ಎಂದು ಅವರು ಬಣ್ಣಿಸಿದ್ದಾರೆ.

ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಉಕ್ರೇನ್ ರಾಷ್ಟ್ರವು ಯುರೋಪಿಯನ್ ಒಕ್ಕೂಟಕ್ಕೆ ಸೇರುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಈ ಬಣವು ಉಕ್ರೇನ್ ಅನ್ನು ಅಭ್ಯರ್ಥಿ ರಾಜ್ಯವಾಗಿ ಅಂಗೀಕರಿಸಿದ ಸುಮಾರು ಎರಡು ವರ್ಷಗಳ ನಂತರ ಯುರೋಪಿಯನ್ ಕೌನ್ಸಿಲ್​ನಿಂದ ಈ ಘೋಷಣೆ ಹೊರ ಬಿದ್ದಿದೆ.

ಉಕ್ರೇನ್‌ ಮತ್ತು ರಷ್ಯಾ ಸಂಘರ್ಷದ ನಡುವೆ ಗುರುವಾರದ ಈ ಪ್ರಕಟಣೆ ಹೊರ ಬಿದ್ದಿರುವುದು ಉಕ್ರೇನ್‌ಗೆ ಪ್ರಮುಖ ಹೆಜ್ಜೆಯಾಗಿದೆ. ಹಲವಾರು ಯುರೋಪಿಯನ್ ನಾಯಕರು ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ಅಲ್ಬೇನಿಯಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಜಾರ್ಜಿಯಾ, ಮೊಲ್ಡೊವಾ, ಮಾಂಟೆನೆಗ್ರೊ, ಉತ್ತರ ಮ್ಯಾಸಿಡೋನಿಯಾ, ಸೆರ್ಬಿಯಾ ಮತ್ತು ಟರ್ಕಿ ಜೊತೆಗೆ ಪ್ರಸ್ತುತ ಯುರೋಪಿಯನ್​ ಯೂನಿಯನ್​​​ನ ಸದಸ್ಯತ್ವವನ್ನು ಬಯಸುತ್ತಿರುವ ಒಂಬತ್ತು ದೇಶಗಳಲ್ಲಿ ಉಕ್ರೇನ್ ಕೂಡಾ ಒಂದಾಗಿದೆ.

ಇದನ್ನೂ ಓದಿ : ಯುದ್ಧದ ಮಧ್ಯೆ ಉಕ್ರೇನ್​ಗೆ ದಿಢೀರ್​ ಭೇಟಿ ನೀಡಿದ ಜೋ ಬೈಡನ್​ ! ಕಾರಣವೇನು?

ಅಮೆರಿಕದ ಸಹಾಯ ಅವಲಂಬಿಸಿದ ಉಕ್ರೇನ್ : ಇನ್ನೊಂದೆಡೆ, ರಷ್ಯಾ ಮತ್ತು ಉಕ್ರೇನ್ ನಡುವೆ ಎರಡು ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕದ ಪಾತ್ರ ಸಾಕಷ್ಟು ಮಹತ್ವದ್ದಾಗಿದೆ. ಅಮೆರಿಕ ಈಗಾಗಲೇ ರಷ್ಯಾದ ಪ್ರಬಲ ಎದುರಾಳಿಯಾಗಿದೆ. 2021 ರ ಫೆಬ್ರವರಿಯಿಂದ ರಷ್ಯಾವು ಉಕ್ರೇನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದೆ. ಉಕ್ರೇನ್‌ಗೆ ಅಮೆರಿಕ ಬಹಿರಂಗವಾಗಿ ಬೆಂಬಲ ನೀಡಿದೆ. ಆರ್ಥಿಕ ಸಹಾಯದ ಹೊರತಾಗಿಯೂ ಮಿಲಿಟರಿ ನೆರವು ನೀಡುವ ಮೂಲಕ ನಿರಂತರವಾಗಿ ರಷ್ಯಾಕ್ಕೆ ಆಘಾತಗಳನ್ನು ನೀಡುತ್ತಿದೆ. ಅಮೆರಿಕದ ನೆರವಿನ ಆಧಾರದ ಮೇಲೆಯೇ ಉಕ್ರೇನ್ ಇಷ್ಟು ದಿನ ರಷ್ಯಾದ ವಿರುದ್ಧ ನಿಂತು ಪ್ರಬಲವಾಗಿ ಯುದ್ಧ ಮಾಡುತ್ತಿದೆ.

ಈ ಯುದ್ಧ ಆರಂಭವಾಗಿದ್ದೇ, ಉಕ್ರೇನ್​ ಯುರೋಪಿಯನ್ ಯೂನಿಯನ್​​ನ ಸದಸ್ಯತ್ವ ಪಡೆಯಲು ಮುಂದಾಗಿದ್ದರಿಂದ. ಈ ಮೊದಲು ಉಕ್ರೇನ್​ ಯುಎಸ್​ಎಸ್​ಆರ್​​ನ ಪ್ರಮುಖ ಭಾಗವಾಗಿತ್ತು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ : ಅಮೆರಿಕದಲ್ಲಿ ಜೈನ ಸಮುದಾಯದಿಂದ ಡಿಜಿಟಲ್ ಡಿಟಾಕ್ಸ್ ದಿನಾಚರಣೆಗೆ ಕರೆ: ಏನಿದರ ಉದ್ದೇಶ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.