ETV Bharat / international

ಎಮ್ಮಿ ಅವಾರ್ಡ್ ವಿಜೇತ ಹಾಲಿವುಡ್ ನಿರ್ದೇಶಕ ಬ್ರೂಸ್ ಗೋವರ್ಸ್ ಇನ್ನಿಲ್ಲ!

author img

By

Published : Jan 19, 2023, 7:28 PM IST

'ಅಮೆರಿಕನ್ ಐಡಲ್: ದಿ ಸರ್ಚ್ ಫಾರ್ ಎ ಸೂಪರ್‌ಸ್ಟಾರ್' ಸರಣಿ ನಿರ್ದೇಶಿಸಿ ಎಮ್ಮಿ ಅವಾರ್ಡ್​ ವಿಜೇತರಾಗಿದ್ದ ಬ್ರೂಸ್ ಗೋವರ್ಸ್ ನಿಧನರಾಗಿದ್ದಾರೆ. ತಮ್ಮ 82ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಗೋವರ್ಸ್​ ನಿಧನರಾಗಿದ್ದಾರೆ.

emmy-winning-director-bruce-gowers-is-no-more

ವಾಷಿಂಗ್ಟನ್ (ಅಮೆರಿಕ): 'ಅಮೆರಿಕನ್ ಐಡಲ್: ದಿ ಸರ್ಚ್ ಫಾರ್ ಎ ಸೂಪರ್‌ಸ್ಟಾರ್' ನ ಎಮ್ಮಿ ಪ್ರಶಸ್ತಿ ವಿಜೇತ ನಿರ್ದೇಶಕ ಮತ್ತು 'ಬೋಹೀಮಿಯನ್ ರಾಪ್ಸೋಡಿ' ಗಾಗಿ ಮೂಲ ವೀಡಿಯೊ ತಯಾರಕರಾಗಿದ್ದ ಬ್ರೂಸ್ ಗೋವರ್ಸ್ ಜನವರಿ 15 ರಂದು ತಮ್ಮ 82 ನೇ ವಯಸ್ಸಿನಲ್ಲಿ ತೀವ್ರ ಅನಾರೋಗ್ಯದಿಂದ ತಮ್ಮ ಸಾಂಟಾ ಮೋನಿಕಾ ಮನೆಯಲ್ಲಿ ನಿಧನರಾಗಿದ್ದಾರೆ. ಗೋವರ್ಸ್ ಉಸಿರಾಟದ ಸೋಂಕಿನಿಂದ ಅನಾರೋಗ್ಯ ಪೀಡಿತರಾಗಿದ್ದರು. ಗೋವರ್ಸ್​ ನಿಧನದ ಸುದ್ದಿಯನ್ನು ಅವರ ಕುಟುಂಬದ ಸದಸ್ಯರು ಅಮೆರಿಕ ಮೂಲದ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅಮೆರಿಕ ಸುದ್ದಿ ಮಾಧ್ಯಮವೊಂದರ ಪ್ರಕಾರ, 2002 ರಿಂದ 2011 ರವರೆಗಿನ ಎಂಟು ಸೀಸನ್​ಗಳ ಅವಧಿಯಲ್ಲಿ ಗೋವರ್ಸ್, ಅಮೆರಿಕನ್ ಐಡಲ್ ನ 234 ಸಂಚಿಕೆಗಳನ್ನು ನಿರ್ದೇಶಿಸಿದ್ದರು. ಈ ಸಂಚಿಕೆಗಳು ಅವರಿಗೆ ಸಂಗೀತ ಅಥವಾ ಹಾಸ್ಯ ಸರಣಿಗಳಲ್ಲಿ ಅತ್ಯುತ್ತಮ ನಿರ್ದೇಶನಕ್ಕಾಗಿ 2009ರಲ್ಲಿ ಐದು ಗ್ರ್ಯಾಮಿ ನಾಮನಿರ್ದೇಶನಗಳನ್ನು ಪಡೆದುಕೊಂಡಿದ್ದರು. 1997 ರಲ್ಲಿ ದೂರದರ್ಶನದಲ್ಲಿ ವಿಶೇಷ 'ಫ್ಲೀಟ್‌ವುಡ್ ಮ್ಯಾಕ್: ದಿ ಡ್ಯಾನ್ಸ್' ನಲ್ಲಿ ಕೆಲಸ ಮಾಡಿದ ಅನುಭವ ಪಡೆದುಕೊಂಡಿದ್ದರು. ಆ ವರ್ಷ ಅದೇ ಎಮ್ಮಿ ಪ್ರಶಸ್ತಿಗೆ ಗೋವರ್ಸ್ ನಾಮನಿರ್ದೇಶನಗೊಂಡಿದ್ದರು. 1985 ರಲ್ಲಿ, ಅವರು ದಿ ಫಿಫ್ತ್ ಇಂಟರನ್ಯಾಷನಲ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ ಎಡಿಟರ್​ಗಳೊಂದಿಗೆ ಸೀಮಿತ ಸರಣಿ ಅಥವಾ ವಿಶೇಷ ಸರಣಿಗಾಗಿ ಅತ್ಯುತ್ತಮ ವೀಡಿಯೊ ಟೇಪ್ ಸಂಪಾದನೆಗಾಗಿ ನಾಮನಿರ್ದೇಶನಗೊಂಡಿದ್ದರು.

ಸ್ಕಾಟ್ಲೆಂಡ್‌ನ ನ್ಯೂ ಕಿಲ್‌ಬ್ರೈಡ್‌ನಲ್ಲಿ ಜನಿಸಿದ ಗೋವರ್ಸ್, ಬಿಬಿಸಿ ತರಬೇತಿ ಕಾಲೇಜಿನಲ್ಲಿ ದಾಖಲಾಗಿ ಲಂಡನ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಕೊನೆಯಲ್ಲಿ, ರೆಡಿಫ್ಯೂಷನ್ ಮತ್ತು ಲಂಡನ್ ವೀಕೆಂಡ್ ಟೆಲಿವಿಷನ್‌ನಂತಹ ನೆಟ್‌ವರ್ಕ್‌ಗಳಿಗೆ ಕೆಲಸ ಮಾಡಲು ಗೋವರ್ಸ್ ಒಪ್ಪಿಕೊಂಡಿದ್ದರು. ಅಲ್ಲಿ ಅವರು ಉದ್ಯೋಗಿಗಳನ್ನು ನಿರ್ವಹಿಸಿದರು ಮತ್ತು ಚಿತ್ರ ನಿರ್ಮಾಣದ ಕೆಲಸ ಮಾಡಿದ ಅನುಭವ ಹೊಂದಿದ್ದರು. ದೂರದರ್ಶನ ಕಾರ್ಯಕ್ರಮಗಳು ಮತ್ತು ಸಂಗೀತ ವೀಡಿಯೋಗಳ ನಿರ್ದೇಶನ ಕೆಲಸಗಳಿಗಾಗಿ ತಾವು ವಾಸಿಸುತ್ತಿದ್ದ ನಿಯಂತ್ರಣ ಕೊಠಡಿಯಲ್ಲಿ ಅವರು ಸಂತೋಷದಿಂದ ಇದ್ದರು ಎಂದು ಗೋವರ್ಸ್ ಕುಟುಂಬದವರು ಮಾಹಿತಿ ನೀಡಿದ್ದಾರೆ.

1975 ರಲ್ಲಿ ಕ್ವೀನ್ಸ್ "ಬೋಹೀಮಿಯನ್ ರಾಪ್ಸೋಡಿ" ಗಾಗಿ ಹೆಸರಾಂತ ಸಂಗೀತ ವೀಡಿಯೊದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ನಂತರ, ಗೋವರ್ಸ್ ರಾತ್ರೋರಾತ್ರಿ ಜನಮಾನಸದಲ್ಲಿ ಪ್ರಖ್ಯಾತರಾದರು. ರೋಲಿಂಗ್ ಸ್ಟೋನ್ಸ್, 10cc, ರಾಡ್ ಸ್ಟೀವರ್ಟ್, ಬೀ ಗೀಸ್, ಆಲಿಸ್ ಕೂಪರ್, ಜರ್ನಿ, ಸೂಪರ್‌ಟ್ರ್ಯಾಂಪ್, ಮೈಕೆಲ್ ಜಾಕ್ಸನ್, ರಶ್, ಸಂತಾನಾ, ಪ್ರಿನ್ಸ್, REO ಸ್ಪೀಡ್‌ವ್ಯಾಗನ್, ಟೊಟೊ, ಜಾನ್ ಮೆಲೆನ್‌ಕ್ಯಾಂಪ್ ಸೇರಿದಂತೆ ಸಂಗೀತಗಾರರೊಂದಿಗೆ ವರ್ಷವಿಡೀ ಕೆಲಸ ಮಾಡುತ್ತಿದ್ದರು. 1970 ರ ದಶಕದ ನಂತರ ಗೋವರ್ಸ್ ಕ್ಯಾಲಿಫೋರ್ನಿಯಾಗೆ ತೆರಳಿದರು. ಅಲ್ಲಿ ಅವರು ಪ್ರೈಮ್‌ಟೈಮ್ ಎಮ್ಮಿ ಪ್ರಶಸ್ತಿಗಳು, ಬಿಲ್ಬೋರ್ಡ್ ಪ್ರಶಸ್ತಿಗಳು ಮತ್ತು MTV ಪ್ರಶಸ್ತಿಗಳಂತಹ ಪ್ರಮುಖ ಪ್ರಶಸ್ತಿ ಸಮಾರಂಭಗಳನ್ನು ನಿರ್ದೇಶಿಸುವ ಮತ್ತು ಸಂಯೋಜಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಬೋಹೀಮಿಯನ್ ರಾಪ್ಸೋಡಿಗೆ ನೀಡಿದ ಕೊಡುಗೆಗಾಗಿ ಗೋವರ್ಸ್ MTV ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಮತ್ತು ನಂತರ 2004 ರಲ್ಲಿ 'ಜೀನಿಯಸ್: ಎ ನೈಟ್ ಫಾರ್ ರೇ ಚಾರ್ಲ್ಸ್' ಗಾಗಿ ಡೈರೆಕ್ಟರ್ಸ್ ಗಿಲ್ಡ್ ಆಫ್ ಅಮೇರಿಕಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 1986 ರಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಸಹ ಪಡೆದಿದ್ದರು.

ಇದನ್ನೂ ಓದಿ: ಹಾಟ್ ಲುಕ್‌ನಲ್ಲಿ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸಿದ ಅನನ್ಯಾ ಪಾಂಡೆ: ಫೋಟೋಶೂಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.