ಫ್ರಾನ್ಸ್ : ಪ್ರಸ್ತುತ ಎಮ್ಯಾನುಯೆಲ್ ಮ್ಯಾಕ್ರನ್ ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸತತ ಎರಡನೇ ಬಾರಿ ಜಯಗಳಿಸಿದ್ದಾರೆ. ಮ್ಯಾಕ್ರನ್ ಶೇ.58.2ರಷ್ಟು ಮತಗಳನ್ನು ಪಡೆಯುವ ಮೂಲಕ ಮರೀನ್ ಲೆ ಪೆನ್ರನ್ನು ಸೋಲಿಸಿ 2ನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಮ್ಯಾಕ್ರನ್ ಗೆಲುವಿನ ಬಳಿಕ ಪ್ಯಾರಿಸ್‌ನ ಐಫೆಲ್ ಟವರ್ ಬಳಿ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಇಲ್ಲಿನ ಚಾಂಪ್ ಡಿ ಮಾರ್ಸ್ ಪಾರ್ಕ್ನಲ್ಲಿ ಬೃಹತ್ ಪರದೆಯಲ್ಲಿ ಅಂತಿಮ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅವರ ಬೆಂಬಲಿಗರು ಪರಸ್ಪರ ಅಭಿನಂದಿಸಿದರು. ನಂತರ ಫ್ರೆಂಚ್ ಮತ್ತು ಯುರೋಪಿಯನ್ ಒಕ್ಕೂಟದ ಧ್ವಜಗಳನ್ನು ಬೀಸುವ ಮೂಲಕ ಸಂಭ್ರಮ ಆಚರಿಸಿದರು.
ವಿವಿಧ ದೇಶಗಳಿಂದ ಅಭಿನಂದನೆಗಳು : ಫ್ರಾನ್ಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ಇಮ್ಯಾನುಯೆಲ್ ಮ್ಯಾಕ್ರನ್ರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಟ್ವೀಟ್ ಮಾಡಿದ ಮೋದಿ, ಭಾರತ-ಫ್ರಾನ್ಸ್ ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನು ಹೆಚ್ಚು ಶಕ್ತಿಯುತಗೊಳಿಸಲು ಒಟ್ಟಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು. ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮ್ಯಾಕ್ರನ್ರಿಗೆ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರಾಗಿ ನೀವು ಮರು ಆಯ್ಕೆಯಾಗಿದ್ದಕ್ಕಾಗಿ ಅಭಿನಂದನೆಗಳು. ಫ್ರಾನ್ಸ್ ನಮ್ಮ ಹತ್ತಿರದ ಮತ್ತು ಪ್ರಮುಖ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ. ನಮ್ಮ ದೇಶಗಳು ಮತ್ತು ಜಗತ್ತು ಎರಡಕ್ಕೂ ಹೆಚ್ಚು ಮುಖ್ಯವಾದ ವಿಷಯಗಳಲ್ಲಿ ಒಟ್ಟಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಓದಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ಗೆ ಮೊಟ್ಟೆ ಏಟು..!
ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಘಿ ಮಾತನಾಡಿ, ‘ಫ್ರೆಂಚ್ ಅಧ್ಯಕ್ಷೀಯ ಚುನಾವಣೆಯಲ್ಲಿ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ಗೆಲುವು ಯುರೋಪ್ನಾದ್ಯಂತ ಒಳ್ಳೆಯ ಸುದ್ದಿಯಾಗಿದೆ’ ಎಂದರು. ಇದು ಪ್ರಜಾಪ್ರಭುತ್ವದ ಗೆಲುವು, ಯುರೋಪ್ನ ವಿಜಯ ಎಂದು ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಹೇಳಿದರು.
-
Prime Minister Narendra Modi congratulates Emmanuel Macron on being re-elected as the President of France; tweets, "I look forward to continuing working together to deepen the India-France Strategic Partnership."
— ANI (@ANI) April 25, 2022 " class="align-text-top noRightClick twitterSection" data="
(File photos) pic.twitter.com/8fEFT6vWJF
">Prime Minister Narendra Modi congratulates Emmanuel Macron on being re-elected as the President of France; tweets, "I look forward to continuing working together to deepen the India-France Strategic Partnership."
— ANI (@ANI) April 25, 2022
(File photos) pic.twitter.com/8fEFT6vWJFPrime Minister Narendra Modi congratulates Emmanuel Macron on being re-elected as the President of France; tweets, "I look forward to continuing working together to deepen the India-France Strategic Partnership."
— ANI (@ANI) April 25, 2022
(File photos) pic.twitter.com/8fEFT6vWJF
ಯುರೋಪಿನ ನಾಯಕರ ಗುಂಪು ಮ್ಯಾಕ್ರನ್ ಅವರ ವಿಜಯವನ್ನು ಶ್ಲಾಘಿಸಿದೆ. ಏಕೆಂದರೆ, ರಷ್ಯಾವನ್ನು ನಿರ್ಬಂಧಗಳೊಂದಿಗೆ ಶಿಕ್ಷಿಸಲು ಮತ್ತು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಅಂತಾರಾಷ್ಟ್ರೀಯ ಪ್ರಯತ್ನಗಳಲ್ಲಿ ಫ್ರಾನ್ಸ್ ಪ್ರಮುಖ ಪಾತ್ರವಹಿಸಿದೆ. ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಟ್ವೀಟ್ ಮಾಡಿ, ನಾವು ಒಟ್ಟಾಗಿ ಫ್ರಾನ್ಸ್ ಮತ್ತು ಯುರೋಪ್ ಅನ್ನು ಮುನ್ನಡೆಸುತ್ತೇವೆ ಎಂದು ಹೇಳಿದ್ದಾರೆ.
ಮ್ಯಾಕ್ರನ್ ಅವರ ವಿಜಯದ ನಂತರ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಕೂಡ ಅಭಿನಂದಿಸಿದ್ದಾರೆ. ಝೆಲೆನ್ಸ್ಕಿ ಭಾನುವಾರ ಮ್ಯಾಕ್ರನ್ ಅವರನ್ನು ಉಕ್ರೇನ್‌ನ ನಿಜವಾದ ಸ್ನೇಹಿತ ಎಂದು ಕರೆದರು ಮತ್ತು ಅವರ ಬೆಂಬಲವನ್ನು ಶ್ಲಾಘಿಸಿದರು. ಫ್ರೆಂಚ್ ಭಾಷೆಯಲ್ಲಿ ಟ್ವೀಟ್ ಮಾಡಿದ ಝೆಲೆನ್ಸ್ಕಿ, ನಾವು ಬಲವಾದ ಮತ್ತು ಯುನೈಟೆಡ್ ಯುರೋಪ್ಗಾಗಿ ಜಂಟಿ ವಿಜಯದ ಕಡೆಗೆ ಒಟ್ಟಾಗಿ ಮುನ್ನಡೆಯುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದಿದ್ದಾರೆ.
ಓದಿ: ಉಕ್ರೇನ್ - ರಷ್ಯಾ ಅಧ್ಯಕ್ಷರೊಂದಿಗೆ ಫೋನ್ ಕರೆ ಮೂಲಕ ಮಾತುಕತೆ ನಡೆಸಿದ ಫ್ರಾನ್ಸ್ ನಾಯಕ!
ಚುನಾವಣೆಯಲ್ಲಿ ಗೆದ್ದ ನಂತರ ಮಾತನಾಡಿದ ಮ್ಯಾಕ್ರನ್, ನಾನು ಯಾರ ಕೈಯನ್ನು ನಡು ರಸ್ತೆಯಲ್ಲಿ ಬಿಡುವುದಿಲ್ಲ. ನಾವು ಮಾಡಬೇಕಾದ ಕೆಲಸ ಇನ್ನು ಬಹಳವಿದೆ. ಉಕ್ರೇನ್‌ನಲ್ಲಿನ ಯುದ್ಧವು ದುರಂತದ ಸಮಯದಲ್ಲಿ ಫ್ರಾನ್ಸ್ ತನ್ನ ಧ್ವನಿಯನ್ನು ಎತ್ತಬೇಕು ಎಂದು ನಮಗೆ ನೆನಪಿಸುತ್ತದೆ ಎಂದು ಹೇಳಿದರು.
20 ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ 2ನೇ ಬಾರಿ ಗೆದ್ದ ಮೊದಲ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಆಗಿದ್ದಾರೆ. ಮ್ಯಾಕ್ರನ್ ಡಿಸೆಂಬರ್ 1977ರಲ್ಲಿ ಅಮಿಯೆನ್ಸ್‌ನಲ್ಲಿ ಜನಿಸಿದರು. ಅವರು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ನಂತರ ಅವರು ಕೋಲ್ ನ್ಯಾಶನಲ್ ಡಿ'ಆಡ್ಮಿನಿಸ್ಟ್ರೇಷನ್ (ENA) ಗೆ ಹಾಜರಾದರು.
ಅಲ್ಲಿ ಅವರು 2004ರಲ್ಲಿ ಪದವಿ ಪಡೆದರು. ನಂತರ ಅವರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲು ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದರು. 2012ರಲ್ಲಿ ಅವರು ಗಣರಾಜ್ಯದ ಪ್ರೆಸಿಡೆನ್ಸಿಯ ಡೆಪ್ಯುಟಿ ಸೆಕ್ರೆಟರಿ ಜನರಲ್ ಆದರು. ಅವರು ಜುಲೈ 2014ರಲ್ಲಿ ಕೆಳಗಿಳಿದರು ಮತ್ತು ಆಗಸ್ಟ್ 2014 ರಿಂದ ಆಗಸ್ಟ್ 2016ರವರೆಗೆ ಆರ್ಥಿಕತೆ, ಕೈಗಾರಿಕೆ ಮತ್ತು ಡಿಜಿಟಲ್ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು.