ETV Bharat / international

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಾಮಸ್ವಾಮಿ ಭರವಸೆಯ ಅಭ್ಯರ್ಥಿ; ಎಲೋನ್ ಮಸ್ಕ್​ ಶ್ಲಾಘನೆ

Elon Musk praises Ramaswamy: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪ್ರೈಮರೀಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಭಾರತೀಯ-ಅಮೆರಿಕನ್ ಜನಪ್ರತಿನಿಧಿ ವಿವೇಕ ರಾಮಸ್ವಾಮಿ ಅವರು ತುಂಬಾ ಭರವಸೆದಾಯಕ ಅಭ್ಯರ್ಥಿ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ.

Elon Musk calls Indian-American Ramaswamy

author img

By

Published : Aug 18, 2023, 6:27 PM IST

ವಾಶಿಂಗ್ಟನ್ ಡಿಸಿ (ಅಮೆರಿಕ) : ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್ ಅವರ ವಿರುದ್ಧ ರಿಪಬ್ಲಿಕನ್ ಪ್ರೈಮರೀಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಭಾರತೀಯ-ಅಮೆರಿಕನ್ ಜನಪ್ರತಿನಿಧಿ ವಿವೇಕ ರಾಮಸ್ವಾಮಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಭರವಸೆಯ ಅಭ್ಯರ್ಥಿಯಾಗಿದ್ದಾರೆ ಎಂದು ಎಲೋನ್ ಮಸ್ಕ್​ ಶ್ಲಾಘಿಸಿದ್ದಾರೆ. ಜನಪ್ರಿಯ ಪತ್ರಕರ್ತ ಟಕರ್ ಕಾರ್ಲ್ಸನ್ ಅವರೊಂದಿಗಿನ ರಾಮಸ್ವಾಮಿ ಅವರ ಸಂದರ್ಶನವನ್ನು ಉಲ್ಲೇಖಿಸಿರುವ ಎಲೋನ್ ಮಸ್ಕ್, "ಅವರು ಬಹಳ ಭರವಸೆಯ ಅಭ್ಯರ್ಥಿ" ಎಂದು ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಹೇಳಿದ್ದಾರೆ.

ಏತನ್ಮಧ್ಯೆ, ರಾಮಸ್ವಾಮಿ ಅವರು ಹಲವಾರು ವಿಷಯಗಳಲ್ಲಿ ತಮ್ಮ ನೇರವಂತಿಕೆಯನ್ನು ತೋರ್ಪಡಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಅವರು ಅಮೆರಿಕಕ್ಕೆ ಚೀನಾ ಬಹುದೊಡ್ಡ ಬೆದರಿಕೆಯಾಗಿದೆ ಎಂದು ಕರೆದಿದ್ದಾರೆ ಮತ್ತು ತಾವು ಅಧಿಕಾರಕ್ಕೆ ಬಂದಲ್ಲಿ ಬೀಜಿಂಗ್​ನೊಂದಿಗಿನ ಸಂಬಂಧಕ್ಕೆ ಸಂಪೂರ್ಣ ಅಂತ್ಯ ಹಾಡುವುದಾಗಿ ಘೋಷಿಸಿದ್ದಾರೆ. ಪೆಸಿಫಿಕ್​ ವಲಯದಲ್ಲಿ ಮತ್ತೆ ಸಂಪೂರ್ಣವಾಗಿ ವ್ಯಾಪಾರವನ್ನು ಪ್ರಾರಂಭಿಸುವುದಾಗಿ ಮತ್ತು ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾದಂಥ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಮಸ್ವಾಮಿ, "ಕ್ಸಿ ಜಿನ್​ ಪಿಂಗ್ ಸರ್ವಾಧಿಕಾರಿಯಾಗಿದ್ದಾರೆ ಮತ್ತು ಚೀನಾ ಅಮೆರಿಕಕ್ಕೆ ಬಹುದೊಡ್ಡ ಅಪಾಯವಾಗಿದೆ. ಚೀನಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ನಾನು ಸ್ಪಷ್ಟತೆಯನ್ನು ಹೊಂದಿರುವ ಅಭ್ಯರ್ಥಿಯಾಗಿದ್ದೇನೆ. ಅದೇ ನಮ್ಮ ನೀತಿಯ ಮೊದಲ ಹೆಜ್ಜೆಯಾಗಿದೆ." ಎಂದು ಅವರು ಹೇಳಿದರು. ಚೀನಾದೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿತಗೊಳಿಸುತ್ತೇನೆ ಮತ್ತು ಬೀಜಿಂಗ್​ ಜೊತೆಗೆ ವ್ಯವಹಾರ ಮಾಡದಂತೆ ಯುಎಸ್ ಕಂಪನಿಗಳನ್ನು ನಿಷೇಧಿಸುತ್ತೇನೆ ಎಂದು ಅವರು ತಿಳಿಸಿದರು.

"ಚೀನಾದೊಂದಿಗಿನ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಪರವಾಗಿ ನಾನಿದ್ಧೇನೆ. ಸಿಸಿಪಿ ತನ್ನ ನಡವಳಿಕೆಯನ್ನು ಸುಧಾರಿಸಿಕೊಳ್ಳುವವರೆಗೂ ಹೆಚ್ಚಿನ ಯುಎಸ್ ಕಂಪನಿಗಳು ಚೀನಾದೊಂದಿಗೆ ವ್ಯವಹಾರ ಮಾಡುವುದನ್ನು ನಾನು ನಿಷೇಧಿಸುತ್ತೇನೆ... ಇದರಿಂದ ಅಲ್ಪಾವಧಿಯ ಪರಿಣಾಮಗಳು ಉಂಟಾಗಬಹುದು. ಆದರೆ ನಾವು ಯಾವುದಕ್ಕಾಗಿ ತ್ಯಾಗ ಮಾಡುತ್ತಿದ್ದೇವೆ ಎಂದು ತಿಳಿದಿದ್ದರೆ ನಾವು ತ್ಯಾಗ ಮಾಡಬಹುದು ಎಂದು ನಾನು ಭಾವಿಸುತ್ತೇನೆ. ನೀವು ತ್ಯಾಗ ಮಾಡಲು ಸಿದ್ಧರಿದ್ದಾಗ, ವಾಸ್ತವದಲ್ಲಿ ನೀವೂ ಏನನ್ನೂ ತ್ಯಾಗ ಮಾಡಬೇಕಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ರಾಮಸ್ವಾಮಿ ಹೇಳಿದರು.

1985ರ ಆಗಸ್ಟ್ 9ರಂದು ಓಹಿಯೋದ ಸಿನ್ಸಿನಾಟಿಯಲ್ಲಿ ಜನಿಸಿದ 37ರ ಹರೆಯದ ರಾಮಸ್ವಾಮಿ ಅವರ ಪೋಷಕರು ಕೇರಳದಿಂದ ಯುಎಸ್​ಗೆ ವಲಸೆ ಬಂದಿದ್ದರು. ನಿಕ್ಕಿ ಹ್ಯಾಲೆ ಮತ್ತು ಹಿರ್ಶ್ ವರ್ಧನ್ ಸಿಂಗ್ ಅವರೊಂದಿಗೆ ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಪ್ರೈಮರೀಸ್​​ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸಲಿರುವ ಮೂರನೇ ಭಾರತೀಯ-ಅಮೆರಿಕನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ರಾಮಸ್ವಾಮಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ನಂತರ ಯೇಲ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ರಾಮಸ್ವಾಮಿ ಅವರು ಓಹಿಯೋ ಸ್ಟೇಟ್ ಯೂನಿವರ್ಸಿಟಿ ವೆಕ್ಸ್​ನರ್ ಮೆಡಿಕಲ್ ಸೆಂಟರ್​ನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಅಪೂರ್ವ ತಿವಾರಿ ಅವರನ್ನು ವಿವಾಹವಾಗಿದ್ದಾರೆ.

ಇದನ್ನೂ ಓದಿ : Libya clashes: ಲಿಬಿಯಾದಲ್ಲಿ ಸಶಸ್ತ್ರ ಗುಂಪುಗಳ ನಡುವೆ ಕಾದಾಟ; 55 ಸಾವು, 146 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.