ಮುತಾರೆ (ಜಿಂಬಾಬ್ವೆ): ಪೂರ್ವ ಜಿಂಬಾಬ್ವೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಈಸ್ಟರ್ ನಿಮಿತ್ತ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು 35 ಮಂದಿ ಮೃತಪಟ್ಟಿದ್ದಾರೆ. ಜಿಂಬಾಬ್ವೆಯ ಪೂರ್ವ ಮಣಿಕಾಲ್ಯಾಂಡ್ ಪ್ರಾಂತ್ಯದ ಚಿಪಿಂಗ್ ಜಿಲ್ಲೆಯ ಬಳಿ ಶುಕ್ರವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ.
ಬಸ್ನಲ್ಲಿ ಸುಮಾರು ನೂರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಉಬ್ಬುತಗ್ಗಾದ ರಸ್ತೆಯಿಂದಾಗಿ ಬಸ್ ತಿರುಗಿ ಆಳ ಕಂದಕಕ್ಕೆ ಬಿದ್ದಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಈಸ್ಟರ್ ರಜೆ ಹಿನ್ನೆಲೆಯಲ್ಲಿ ಜಿಯಾನ್ ಚರ್ಚ್‌ನ ಸದಸ್ಯರನ್ನು ಈ ಬಸ್ ಸಾಗಿಸುತ್ತಿತ್ತು.
ಇಲ್ಲಿನ ಕೆಟ್ಟ ರಸ್ತೆಗಳ ಪರಿಣಾಮವಾಗಿಯೇ ಆಗಾಗ್ಗೆ ಬಸ್ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೇ, ಚಾಲಕರು ವಾಹನದಲ್ಲಿ ಮಿತಿಮೀರಿದ ಪ್ರಯಾಣಿಕನ್ನು ಸಾಗಿಸುತ್ತಾರೆ ಮತ್ತು ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿ, ಎಂಟು ಸೈನಿಕರು ಮೃತ