ETV Bharat / international

ತೈವಾನ್​ ಪೂರ್ವ ಕರಾವಳಿಯಲ್ಲಿ 7.2 ತೀವ್ರತೆಯ ಭಾರಿ ಭೂಕಂಪನ

ನಿನ್ನೆ ಸಂಭವಿಸಿರುವ ಭೂಕಂಪನದಲ್ಲಿ ಸಾವು-ನೋವುಗಳಾಗಿರುವ ಸಾಧ್ಯತೆ ಕಡಿಮೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

earthquake-off-east-coast-of-taiwan
ತೈವಾನ್​ ಪೂರ್ವ ಕರಾವಳಿಯಲ್ಲಿ ಭೂಕಂಪ
author img

By

Published : Sep 18, 2022, 1:28 PM IST

ತೈವಾನ್: ತೈವಾನ್‌ನ ಪೂರ್ವ ಕರಾವಳಿಯಲ್ಲಿ ನಿನ್ನೆ 6.6 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ರಾತ್ರಿ 9.30ರ ಸುಮಾರಿಗೆ (1330 GMT) ಕರಾವಳಿ ನಗರವಾದ ಟೈಟುಂಗ್‌ನಿಂದ ಉತ್ತರಕ್ಕೆ 50 ಕಿಲೋಮೀಟರ್ ಪ್ರದೇಶದಲ್ಲಿ (30 ಮೈಲುಗಳು) 10 ಕಿಲೋಮೀಟರ್ ಆಳದಲ್ಲಿ ಘಟನೆ ನಡೆದಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

ತೈವಾನ್‌ನ ಸೆಂಟ್ರಲ್ ವೆದರ್ ಬ್ಯೂರೋ ಪ್ರಕಾರ, ಭೂಕಂಪನ ತೀವ್ರತೆ 6.4 ರಷ್ಟಿತ್ತು. ಆದರೆ ಅದು 7.3 ಕಿಲೋಮೀಟರ್‌ಗಳಷ್ಟು ಆಳದಲ್ಲಿ ಸಂಭವಿಸಿದೆ. ಸ್ಥಳೀಯ ಮಾಧ್ಯಮಗಳು ಆರಂಭದಲ್ಲಿ ಭೂಕಂಪನದಿಂದ ಯಾವುದೇ ಗಾಯ ಅಥವಾ ಹಾನಿ ಸಂಭವಿಸಿಲ್ಲ ಎಂದು ವರದಿ ಮಾಡಿವೆ.

ಆದರೆ ತೈವಾನ್‌ನ ಕೇಂದ್ರ ಸುದ್ದಿ ಸಂಸ್ಥೆ ದ್ವೀಪದ ದಕ್ಷಿಣದಲ್ಲಿರುವ ಕಾವೊಶಿಯುಂಗ್ ನಗರದಲ್ಲಿ ಮೆಟ್ರೋ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ. ರಾಜಧಾನಿ ತೈಪೆಯಲ್ಲೂ ಭೂಕಂಪದ ಅನುಭವವಾಗಿದೆ. ಸುಮಾರು 8,500 ಜನಸಂಖ್ಯೆಯನ್ನು ಹೊಂದಿರುವ ಸಮತಟ್ಟಾದ ಭೂಪ್ರದೇಶದ ಭತ್ತ ಬೆಳೆಯುವ ಪ್ರದೇಶವಾದ ಟೈಟುಂಗ್‌ಕೌಂಟಿ ಭೂಕಂಪನದ ಕೇಂದ್ರಬಿಂದುವಾಗಿದೆ.

ದ್ವೀಪವು ಎರಡು ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನ ಬಳಿ ಇರುವುದರಿಂದ ತೈವಾನ್ ನಿಯಮಿತವಾಗಿ ಭೂಕಂಪಗಳಿಗೆ ಒಳಗಾಗುತ್ತಲೇ ಇರುತ್ತದೆ. ರಿಕ್ಟರ್ ಮಾಪಕದಲ್ಲಿ ಭೂಕಂಪವು 7.0 ಕ್ಕಿಂತ ಹೆಚ್ಚು ಶಕ್ತಿಯುತವಾಗಿರದ ಹೊರತು ದ್ವೀಪದಲ್ಲಿ ಯಾವುದೇ ಸುನಾಮಿ ಸಂಭವಿಸುವ ಸಾಧ್ಯತೆಗಳು ಕಡಿಮೆ ಇರುತ್ತವೆ.

ಇದನ್ನೂ ಓದಿ: ಪಪುವಾ ನ್ಯೂಗಿನಿಯಲ್ಲಿ 7.6 ತೀವ್ರತೆಯ ಭೂಕಂಪನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.