ETV Bharat / international

ಪಪುವಾ ನ್ಯೂಗಿನಿ ರಾಜಧಾನಿಯಲ್ಲಿ 7.2 ತೀವ್ರತೆಯ ಭೂಕಂಪನ

ಪುಟ್ಟ ದೇಶ ಪಪುವಾ ನ್ಯೂಗಿನಿ ರಾಜಧಾನಿ ಪೋರ್ಟ್ ಮೊರೆಸ್ಬಿಯಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ.

earthquake
ಭೂಕಂಪನ
author img

By

Published : Apr 3, 2023, 12:32 PM IST

ಪೋರ್ಟ್ ಮೊರೆಸ್ಬಿ (ಪಾಪುವಾ ನ್ಯೂಗಿನಿ): ಪಪುವಾ ನ್ಯೂಗಿನಿ ದೇಶದ ರಾಜಧಾನಿ ಪೋರ್ಟ್ ಮೊರೆಸ್ಬಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಪೋರ್ಟ್ ಮೊರೆಸ್ಬಿ ಎಂಬ ನಗರವು ಓಷಿಯಾನಿಯಾದ ಪಪುವಾ ನ್ಯೂಗಿನಿ ರಾಜಧಾನಿ. ರಾಜಧಾನಿಯಲ್ಲಿ ನಿನ್ನೆ, ಭಾರತೀಯ ಕಾಲಮಾನ ಮಧ್ಯರಾತ್ರಿ 11:34ಕ್ಕೆ 80 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ (USGS) ಹೇಳಿಕೆಯ ಪ್ರಕಾರ, ಕಳೆದ ತಿಂಗಳ ಆರಂಭದಲ್ಲಿ, ನ್ಯೂಜಿಲೆಂಡ್‌ನ ಉತ್ತರದಲ್ಲಿರುವ ಕೆರ್ಮಾಡೆಕ್ ದ್ವೀಪಗಳ ಪ್ರದೇಶದಲ್ಲಿ 7 ಮತ್ತು 5 ರ ತೀವ್ರತೆಯ ಎರಡು ಭೂಕಂಪಗಳು ಜರುಗಿದ್ದವು. M7ನ (Major) ಮೊದಲ ಭೂಕಂಪ ಉಂಟಾಗಿದ್ದರೆ ಮತ್ತೆ ಐವತ್ತು ನಿಮಿಷಗಳ ನಂತರ ನ್ಯೂಜಿಲೆಂಡ್‌ನ ಜನವಸತಿಯಿಲ್ಲದ ದ್ವೀಪಗಳಲ್ಲಿ 5 ತೀವ್ರತೆಯಲ್ಲಿ ಮತ್ತೊಂದು ಭೂಕಂಪ ಉಂಟಾಗಿತ್ತು. ಇದನ್ನು USGS ಕೂಡ ದಾಖಲಿಸಿದೆ.

  • Earthquake of Magnitude:7.2, Occurred on 02-04-2023, 23:34:12 IST, Lat: -4.34 & Long: 143.23, Depth: 80 Km ,Location: 715km NW of Port Moresby, Papua New Guinea for more information Download the BhooKamp App https://t.co/Vf6on55NwY pic.twitter.com/oFCPD4goWo

    — National Center for Seismology (@NCS_Earthquake) April 2, 2023 " class="align-text-top noRightClick twitterSection" data=" ">

ಮೊದಲ ಭೂಕಂಪನವು 22 ಕಿಮೀ ಆಳದಲ್ಲಿ ವರದಿಯಾಗಿದೆ. ಇದರ ಪರಿಣಾಮ ಭೂಕಂಪನ ಸಂಭವಿಸಿದ ಕೇಂದ್ರದಿಂದ 300 ಕಿಲೋಮೀಟರ್‌ಗಳೊಳಗೆ ಇರುವ ಕರಾವಳಿಯಲ್ಲಿ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಏಜೆನ್ಸಿ ಎಚ್ಚರಿಕೆ ನೀಡಿತ್ತು. ಸುಮಾರು 50 ನಿಮಿಷಗಳ ನಂತರ ಎರಡನೇ ಭೂಕಂಪನವು 10 ಕಿ.ಮೀ ಆಳದಲ್ಲಿ ವರದಿಯಾಗಿದೆ.

ನ್ಯೂಜಿಲೆಂಡ್ ದೇಶವಿರುವ ಪ್ರದೇಶವು ಎರಡು ಪ್ರಮುಖ (ಪೆಸಿಫಿಕ್ ಪ್ಲೇಟ್ ಮತ್ತು ಆಸ್ಟ್ರೇಲಿಯನ್ ಪ್ಲೇಟ್) ಟೆಕ್ಟೋನಿಕ್ ಪ್ಲೇಟ್‌ಗಳ (ಭೂಪದರ) ಮೇಲೆ ಇರುವುದರಿಂದ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿರುತ್ತವೆ. ಸಾಮಾನ್ಯವಾಗಿ ಈ ದ್ವೀಪ ದೇಶವು ಅತಿಯಾಗಿ ಸಂಭವಿಸುವ ಭೂಕಂಪನ ವಲಯದಲ್ಲಿದೆ.

ಇದನ್ನೂ ಓದಿ: ಸೌದಿ, ಇರಾಕ್‌ ಸೇರಿ OPEC Plusನಿಂದ ಕಚ್ಚಾ ತೈಲ ಉತ್ಪಾದನೆ ಕಡಿತ: ಪೆಟ್ರೋಲ್​, ಡೀಸೆಲ್​ ದರ ಏರಿಕೆ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.