ETV Bharat / international

ತೈವಾನ್ ಈಶಾನ್ಯ ಭಾಗದಲ್ಲಿ 6.3 ತೀವ್ರತೆಯ ಭೂಕಂಪನ - taiwan earthquake

ತೈಪೆಯಲ್ಲಿ 6.3 ತೀವ್ರತೆಯ ಭೂಕಂಪನ ಸಂಭವಿಸಿದೆ. ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ತೈವಾನ್​ನ ಈಶಾನ್ಯಭಾಗದಲ್ಲಿ  ಭೂಕಂಪ
ತೈವಾನ್​ನ ಈಶಾನ್ಯಭಾಗದಲ್ಲಿ ಭೂಕಂಪ
author img

By ANI

Published : Sep 19, 2023, 8:02 AM IST

Updated : Sep 19, 2023, 1:14 PM IST

ತೈಪೆ (ತೈವಾನ್​): ತೈವಾನ್​ನ ಈಶಾನ್ಯಭಾಗದಲ್ಲಿ ಸೋಮವಾರ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಯುನೈಟೆಡ್​ ಸ್ಟೇಟ್ಸ್​ ಜಿಯೋಲಾಜಿಕಲ್​ ಸರ್ವೆ ವರದಿ ಮಾಡಿದೆ. ಭೂಕಂಪನ ಕೇಂದ್ರಬಿಂದು 185 ಕಿ.ಮಿ ಆಳದಲ್ಲಿ ಪತ್ತೆಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕೆಲವು ದಿನಗಳ ಹಿಂದೆ ಇಂಡೋನೇಷ್ಯಾದ ರೆಸಾರ್ಟ್ ದ್ವೀಪ ಬಾಲಿ ಮತ್ತು ದೇಶದ ಇತರ ಭಾಗಗಳಲ್ಲಿ ಪ್ರಬಲ ಭೂಕಂಪನ ಉಂಟಾಗಿತ್ತು. 513.5 ಕಿಲೋಮೀಟರ್ ಆಳದಲ್ಲಿ 7.1 ತೀವ್ರತೆಯ ಭೂಕಂಪನವಾಗಿತ್ತು. ಬಾಲಿಯ ಪಕ್ಕದಲ್ಲಿರುವ ಲೊಂಬಾಕ್ ದ್ವೀಪದ ಕರಾವಳಿಯ ಸಣ್ಣದ್ವೀಪ ಗಿಲಿ ಏರ್‌ನಿಂದ ಈಶಾನ್ಯಕ್ಕೆ 181 ಕಿಲೋಮೀಟರ್ ದೂರದಲ್ಲಿ ಕೇಂದ್ರಬಿಂದು ಇತ್ತು.

ಕಳೆದ ತಿಂಗಳು ಇಸ್ತಾಂಬುಲ್​ನಲ್ಲಿ 5.3 ತೀವ್ರತೆಯ ಭೂಕಂಪನ ಜರುಗಿತ್ತು. ಅನೇಕ ಕಟ್ಟಡಗಳು ಹಾನಿಗೊಳಗಾಗಿದ್ದವು. 23 ಜನರು ಗಾಯಗೊಂಡಿದ್ದರು. ಭೂಕಂಪದ ಕೇಂದ್ರಬಿಂದು ಮಾಲತ್ಯಾ ಪ್ರಾಂತ್ಯದ ಯೆಸಿಲುರ್ಟ್ ನಗರದಲ್ಲಿತ್ತು.

ಇದೇ ತಿಂಗಳಾರಂಭದಲ್ಲಿ ಮೊರಾಕ್ಕೊ ದೇಶದಲ್ಲಿ ಪ್ರಬಲ ಭೂಕಂಪನ ಸಂಭವಿಸಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಮರಕೇಶ್​ನ ನೈರುತ್ಯ ಭಾಗದಲ್ಲಿ 6.8 ತೀವ್ರತೆಯ ಭೂಕಂಪನವಾಗಿತ್ತು. 18.5 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಕಂಡುಬಂದಿತ್ತು. ಸಾವಿರಾರು ಜನರು ಗಾಯಗೊಂಡಿದ್ದರು. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದರು.

ಉತ್ತರ ಚಿಲಿಯಲ್ಲಿ ಇದೇ ತಿಂಗಳಾರಂಭದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಯಾವುದೇ ಪ್ರಾಣ ಹಾನಿ, ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿರಲಿಲ್ಲ. ಭೂಕಂಪದ ಕೇಂದ್ರಬಿಂದು ಚಿಲಿಯ ಕೊಕ್ವಿಂಬೊದಿಂದ ದಕ್ಷಿಣ-ನೈಋತ್ಯದಲ್ಲಿ 41 ಕಿಲೋ ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಭೂಕಂಪವು ಭೂಮಿಯ 41 ಕಿಲೋಮೀಟರ್ ಆಳದಲ್ಲಿ ಉಂಟಾಗಿತ್ತು. ಚಿಲಿ ಪೆಸಿಫಿಕ್‌ನಲ್ಲಿ ರಿಂಗ್ ಆಫ್ ಫೈರ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಭಾಗದಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತವೆ. 2010 ರಲ್ಲಿ 8.8 ತೀವ್ರತೆಯ ಭೂಕಂಪ ಮತ್ತು ನಂತರದ ಸಂಭವಿಸಿದ ಸುನಾಮಿ 526 ಜೀವಗಳನ್ನು ಬಲಿ ತೆಗೆದುಕೊಂಡಿತ್ತು.

ಟರ್ಕಿ ಮತ್ತು ಸಿರಿಯಾದಲ್ಲಿ ವರ್ಷದ ಆರಂಭದಲ್ಲಿ ಪ್ರಬಲ ಭೂಕಂಪನ ಸಂಭವಿಸಿತ್ತು 7.8 ತೀವ್ರತೆಯ ಭೂಕಂಪನದಲ್ಲಿ 640 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಟರ್ಕಿಯೊಂದರಲ್ಲೇ 284 ಜನರು ಸಾವನ್ನಪ್ಪಿದ್ದರು. ಸಿರಿಯಾದಲ್ಲೂ ಇಷ್ಟೇ ಪ್ರಮಾಣದ ಜನರು ಅಸುನೀಗಿದ್ದರು. ಘಟನೆಯಲ್ಲಿ 2300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 1700 ಕ್ಕೂ ಅಧಿಕ ಕಟ್ಟಡಗಳು ನೆಲಸಮಗೊಂಡಿದ್ದವು. ಅಲೆಪ್ಪೊ ಮತ್ತು ಹಮಾ ಡಮಾಸ್ಕಸ್‌ ನಗರ ಸೇರಿದಂತೆ 30 ಕಿಮೀ ವ್ಯಾಪ್ತಿಯಲ್ಲಿ ಕಟ್ಟಡಗಳು ಕುಸಿದಿದ್ದವು ಎಂದು ಸಿರಿಯಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿದ್ದವು.

ಇದನ್ನೂ ಓದಿ: ಮಣಿಪುರ, ಅಂಡಮಾನ್ ಸಮುದ್ರದಲ್ಲಿ ಭೂಕಂಪನ

Last Updated : Sep 19, 2023, 1:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.