ಲಂಡನ್: "ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಭಾರತ ತನ್ನ ಖರೀದಿ ನೀತಿಗಳ ಮೂಲಕ ತೈಲ ಮತ್ತು ಅನಿಲ ಬೆಲೆಗಳು ಏರಿಕೆಯಾಗದಂತೆ ಅಂತರರಾಷ್ಟ್ರೀಯ ಹಣದುಬ್ಬರವನ್ನು ನಿಯಂತ್ರಿಸಿತು" ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದರು. ಐದು ದಿನಗಳ ಭೇಟಿಗಾಗಿ ಬ್ರಿಟನ್‌ಗೆ ಭೇಟಿ ನೀಡಿರುವ ಅವರು, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತೈಲ ಬೆಲೆ ನಿಗದಿ ಮಾಡಿರುವ ಭಾರತಕ್ಕೆ ಉಳಿದ ದೇಶಗಳು ಧನ್ಯವಾದ ಹೇಳಬೇಕು ಎಂದು ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.
-
#WATCH | London, UK: On oil purchase, External Affairs Minister of India, Dr S Jaishankar says, "When it comes to the purchase of oil...In fact, at least India was a big enough country to command some respect in the markets but there were much smaller countries that didn't even… pic.twitter.com/wkgBcApPmP
— ANI (@ANI) November 15, 2023 " class="align-text-top noRightClick twitterSection" data="
">#WATCH | London, UK: On oil purchase, External Affairs Minister of India, Dr S Jaishankar says, "When it comes to the purchase of oil...In fact, at least India was a big enough country to command some respect in the markets but there were much smaller countries that didn't even… pic.twitter.com/wkgBcApPmP
— ANI (@ANI) November 15, 2023#WATCH | London, UK: On oil purchase, External Affairs Minister of India, Dr S Jaishankar says, "When it comes to the purchase of oil...In fact, at least India was a big enough country to command some respect in the markets but there were much smaller countries that didn't even… pic.twitter.com/wkgBcApPmP
— ANI (@ANI) November 15, 2023
"ಭಾರತದ ಖರೀದಿ ನೀತಿಗಳ ಮೂಲಕ ಅಂತರರಾಷ್ಟ್ರೀಯ ತೈಲ, ಇಂಧನ ಮಾರುಕಟ್ಟೆಗಳು ಬೆಲೆ ಏರಿಳಿತಗಳ ಹೊಡೆತಕ್ಕೆ ಸಿಲುಕಿಲ್ಲ. ಅಂತರರಾಷ್ಟ್ರೀಯ ಹಣದುಬ್ಬರ ನಿಯಂತ್ರಣದಲ್ಲಿಡಲು ಆ ನೀತಿಗಳು ತುಂಬಾ ಉಪಯುಕ್ತವಾಗಿವೆ. ಅದಕ್ಕಾಗಿ ಪ್ರಪಂಚದ ಎಲ್ಲಾ ದೇಶಗಳು ಭಾರತಕ್ಕೆ ಧನ್ಯವಾದ ಹೇಳಬೇಕು. ನಾನು ಅದಕ್ಕಾಗಿ ಕಾಯುತ್ತಿದ್ದೇನೆ" ಎಂದರು.
"ಭಾರತ ರಷ್ಯಾದಿಂದ ತೈಲ ಖರೀದಿಸದೇ ಇದ್ದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮಾರಾಟಗಾರರು ರಷ್ಯಾಗೆ ಹೋಗಬೇಕಾಗಿತ್ತು. ಆಗ ತೈಲ ಬೆಲೆಗಳು ನಮ್ಮ ನಿರೀಕ್ಷೆ ಮೀರಿ ಏರುತ್ತಿತ್ತು. ಇದರ ಪರಿಣಾಮವಾಗಿ ಯುರೋಪ್ ಕೂಡ ಅದೇ ಬೆಲೆಗೆ ತೈಲ ಖರೀದಿಸಬೇಕಾಗುತ್ತಿತ್ತು. ಅಂಥ ಸಮಯದಲ್ಲಿ ಎಲ್‌ಪಿಜಿ ಮಾರುಕಟ್ಟೆಯಲ್ಲಿ ಏಷ್ಯಾಕ್ಕೆ ಬರಬೇಕಾಗಿದ್ದ ದೊಡ್ಡ ಪೂರೈಕೆದಾರರು ಯುರೋಪ್ಗೆ ತೆರಳಿದ್ದರು. ಎಲ್‌ಪಿಜಿ ಇಂಧನ ಖರೀದಿಗೆ ಕೆಲವು ಸಣ್ಣ ದೇಶಗಳು ಸಲ್ಲಿಸಿದ ಟೆಂಡರ್‌ಗಳಿಗೆ ಪ್ರತಿಕ್ರಿಯಿಸಲು ಪೂರೈಕೆದಾರರು ಆಸಕ್ತಿ ತೋರಲಿಲ್ಲ" ಎಂದು ಜೈಶಂಕರ್ ಹೇಳಿದರು.
'ಇದುವರೆಗೆ ಯಾವುದೇ ಪುರಾವೆ ನೀಡಿಲ್ಲ': ಮತ್ತೊಂದೆಡೆ, "ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತೀಯ ಏಜೆಂಟ್‌ಗಳ ಕೈವಾಡವಿದೆ ಎಂಬ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪಗಳಿಗೆ ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ. ಭಾರತದ ವಿರುದ್ಧ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕೆನಡಾ ಇದುವರೆಗೆ ಯಾವುದೇ ಪುರಾವೆಗಳನ್ನು ನೀಡಿಲ್ಲ" ಎಂದು ಪುನರುಚ್ಛರಿಸಿದರು.
ಇದನ್ನೂ ಓದಿ: ಕೆನಡಾದಲ್ಲಿ ನಿಜ್ಜರ್ ಹತ್ಯೆ ಪ್ರಕರಣ: ಸಾಕ್ಷ್ಯ ಪ್ರಸ್ತುತಪಡಿಸಿ, ತನಿಖೆಗೆ ನಾವು ಸಿದ್ಧ-ವಿದೇಶಾಂಗ ಸಚಿವ ಜೈಶಂಕರ್