ETV Bharat / international

ದುಬೈ: 122 ಕೋಟಿ ರೂಪಾಯಿಗೆ ಹರಾಜಾದ 'P7' ಫ್ಯಾನ್ಸಿ ನಂಬರ್​ ಪ್ಲೇಟ್​ - ಫ್ಯಾನ್ಸಿ ಕಾರ್ ನಂಬರ್

ದುಬೈನಲ್ಲಿ ಕಾರಿನ ನಂಬರ್​ ಒಂದನ್ನು 122 ಕೋಟಿ ರೂಪಾಯಿ ನೀಡಿ ಖರೀದಿಸಲಾಗಿದೆ. ಆದರೆ ಇಷ್ಟು ದೊಡ್ಡ ಮೊತ್ತ ನೀಡಿ P7 ನಂಬರ್ ಖರೀದಿಸಿದ ವ್ಯಕ್ತಿಯ ಹೆಸರನ್ನು ಮಾತ್ರ ಬಹಿರಂಗಪಡಿಸಲಾಗಿಲ್ಲ.

Dubai car number plate 'P7' sold for record DH55M
ದುಬೈ: 122 ಕೋಟಿ ರೂಪಾಯಿಗೆ ಹರಾಜಾದ 'P7' ಫ್ಯಾನ್ಸಿ ನಂಬರ್​ ಪ್ಲೇಟ್​
author img

By

Published : Apr 9, 2023, 4:00 PM IST

ದುಬೈ : ಫ್ಯಾನ್ಸಿ ಕಾರ್ ನಂಬರೊಂದು ಹೆಚ್ಚೆಂದರೆ ಕೆಲ ಲಕ್ಷ ರೂಪಾಯಿಗೆ ಮಾರಾಟವಾಗಬಹುದು. ಆದರೆ ದುಬೈನಲ್ಲಿ ಫ್ಯಾನ್ಸಿ ಕಾರ್ ನಂಬರ್ ಒಂದನ್ನು ಬರೋಬ್ಬರಿ 122 ಕೋಟಿ ರೂಪಾಯಿ ಕೊಟ್ಟು ಖರೀದಿಸಿರುವುದು ಅಚ್ಚರಿ ಮೂಡಿಸಿದೆ. ದುಬೈನಲ್ಲಿ ನಡೆದ 'ಮೋಸ್ಟ್ ನೋಬಲ್ ನಂಬರ್ಸ್' (ಶುಭ ಸಂಖ್ಯೆಗಳ ಹರಾಜು) ಹರಾಜಿನಲ್ಲಿ ವಾಹನದ ನಂಬರ್ ಪ್ಲೇಟ್ P7 ಅನ್ನು ದಾಖಲೆಯ 55 ಮಿಲಿಯನ್ ದಿರ್ಹಮ್​ಗಳಿಗೆ (Dh55M) ಗೆ ಮಾರಾಟ ಮಾಡಲಾಗಿದೆ.

ಶನಿವಾರ ರಾತ್ರಿ ನಡೆದ ಆಕ್ಷನ್‌ನಲ್ಲಿ 15 ಮಿಲಿಯನ್ ದಿರ್ಹಮ್ ಬಿಡ್‌ನಿಂದ ಪ್ರಾರಂಭವಾಗಿ, ಬಿಡ್‌ಗಳು ಸೆಕೆಂಡುಗಳಲ್ಲಿ 30 ಮಿಲಿಯನ್ ದಿರ್ಹಮ್‌ಗೆ ಏರಿತು. ಟೆಲಿಗ್ರಾಮ್ ಅಪ್ಲಿಕೇಶನ್‌ನ ಸಂಸ್ಥಾಪಕ ಮತ್ತು ಮಾಲೀಕ ಫ್ರೆಂಚ್ ಎಮಿರಾಟಿ ಉದ್ಯಮಿ ಪಾವೆಲ್ ವ್ಯಾಲೆರಿವಿಚ್ ಡುರೊವ್ ಈ ನಂಬರ್​ ಅನ್ನು 35 ದಿರ್ಹಮ್​ಗಳಿಗೆ ಬಿಡ್ ಮಾಡಿದ್ದರು. ಈ ಬಿಡ್ ನಂತರ ಹಲವಾರು ನಿಮಿಷಗಳ ಕಾಲ ಬಿಡ್​ ಅಲ್ಲಿಯೇ ಸ್ಥಿರವಾಗಿತ್ತು. ಇದಾಗಿ ಕೆಲವೇ ಕ್ಷಣಗಳಲ್ಲಿ ಬಿಡ್​ ಏರಲಾರಂಭಿಸಿ 55 ಮಿಲಿಯನ್​ ದಿರ್ಹಮ್​ಗಳಿಗೆ (122 ಕೋಟಿ 61 ಲಕ್ಷ ಭಾರತೀಯ ರೂಪಾಯಿ) ತಲುಪಿತು. ಬಿಡ್​ನಲ್ಲಿ ಭಾಗವಹಿಸಿದ್ದ 7ನೇ ಪ್ಯಾನೆಲ್​ ಈ ಬಿಡ್​ ಕೂಗಿತ್ತು. ಆದರೆ ಇಷ್ಟು ಮೊತ್ತ ನೀಡಿ ನಂಬರ್​ 7 ಅನ್ನು ಖರೀದಿಸಿದ ವ್ಯಕ್ತಿಯು ತನ್ನ ಐಡೆಂಟಿಟಿಯನ್ನು ಬಹಿರಂಗಪಡಿಸಿಲ್ಲ.

ಇದೇ ಸಮಯದಲ್ಲಿ ಅನೇಕ ಇತರ ವಿಐಪಿ ನಂಬರ್ ಪ್ಲೇಟ್‌ಗಳು ಮತ್ತು ಫೋನ್ ಸಂಖ್ಯೆಗಳ ಹರಾಜುಗಳಿಂದ 100 ಮಿಲಿಯನ್ ದಿರ್ಹಮ್​ ($27 ಮಿಲಿಯನ್) ಸಂಗ್ರಹಿಸಲಾಗಿದೆ. ಈ ಮೊತ್ತವನ್ನು ರಮ್ಜಾನ್​ ಹಬ್ಬದ ಸಮಯದಲ್ಲಿ ಅಗತ್ಯವಿರುವವರಿಗೆ ಆಹಾರ ಹಂಚಲು ಬಳಸಲಾಗುವುದು. ಜುಮೇರಾದಲ್ಲಿನ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ಕಾರ್ ನಂಬರ್ ಪ್ಲೇಟ್‌ಗಳು ಮತ್ತು ವಿಶೇಷ ಮೊಬೈಲ್ ಫೋನ್ ಸಂಖ್ಯೆಗಳ ಮಾರಾಟದಿಂದ 97,920,000 ದಿರ್ಹಮ್ ($26662313) ಸಂಗ್ರಹಿಸಲಾಗಿದೆ. ಎಮಿರೇಟ್ಸ್​ ಆಕ್ಷನ್, ದುಬೈ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರ, ಎಟಿಲ್​ಸ್ಯಾಟ್​ ಕಂಪನಿಗಳ ವತಿಯಿಂದ ಈ ಹರಾಜು ಪ್ರಕ್ರಿಯೆಯನ್ನು ಆಯೋಜಿಸಲಾಗಿತ್ತು.

2008 ರಲ್ಲಿ ಅಬುಧಾಬಿಯಲ್ಲಿ ನಂ.1 ನಂಬರ್ ಪ್ಲೇಟ್​ ಅನ್ನು ಉದ್ಯಮಿಯೊಬ್ಬರು 52.2 ಮಿಲಿಯನ್​ ದಿರ್ಹಮ್​ಗಳಿಗೆ ಖರೀದಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಈಗ P 7 ಅದನ್ನೂ ಮೀರಿಸಿ 55 ಮಿಲಿಯನ್​ ದಿರ್ಹಮ್​ಗಳಿಗೆ ಮಾರಾಟವಾಗಿದೆ. ಹರಾಜಿನಿಂದ ಬರುವ ಎಲ್ಲ ಹಣವನ್ನು ಜಾಗತಿಕ ಹಸಿವಿನ ಸಮಸ್ಯೆಯನ್ನು ನೀಗಿಸಲು ಆರಂಭಿಸಲಾಗಿರುವ ಒನ್ ಬಿಲಿಯನ್ ಮೀಲ್ಸ್​ (ಒಂದು ಕೋಟಿ ಊಟ) ಅಭಿಯಾನಕ್ಕಾಗಿ ಬಳಸಲಾಗುತ್ತದೆ. ದುಬೈನ ಉಪ ರಾಷ್ಟ್ರಪತಿ ಮತ್ತು ರಾಜನಾಗಿರುವ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅವರು ಒನ್ ಬಿಲಿಯನ್ ಮೀಲ್ಸ್​ ದಾನ ಯೋಜನೆಯನ್ನು ಆರಂಭಿಸಿದ್ದು. ಪವಿತ್ರ ರಮ್ಜಾನ್ ಹಬ್ಬದ ಕೊಡುಗೆಯಾಗಿ ಇದನ್ನು ಆರಂಭಿಸಲಾಗಿತ್ತು.

ಪ್ರಪಂಚದಾದ್ಯಂತ ವಾಹನಗಳ ಫ್ಯಾನ್ಸಿ ನಂಬರುಗಳಿಗೆ ಭಾರಿ ಕ್ರೇಜ್ ಇದೆ. ಫ್ಯಾನ್ಸಿ ನಂಬರ್ ಹರಾಜಿನಲ್ಲಿ ನೀವು ನಿಮಗಿಷ್ಟವಾದ ನಂಬರ್ ಆಯ್ಕೆ ಮಾಡಿಕೊಳ್ಳಬಹುದು. ಕಾರಿನ ನಂಬರ್ ಪ್ಲೇಟ್, ಮೊಬೈಲ್ ನಂಬರ್​ ಹೀಗೆ ಹಲವಾರು ರೀತಿಯ ನಂಬರ್​ಗಳನ್ನು ಹರಾಜು ಹಾಕಲಾಗುತ್ತದೆ.

ಇದನ್ನೂ ಓದಿ : ತಾರ್ಕಿಕವಾಗಿ ಯೋಚಿಸದ ಚಾಟ್​ಜಿಪಿಟಿ ಅನ್ಯಗ್ರಹದ ಬುದ್ಧಿಮತ್ತೆಯಂತಿದೆ: ಅಮೇರಿಕನ್ ಉದ್ಯಮಿ ರೋಸ್‌ಡೇಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.