ETV Bharat / international

ಅಕ್ರಮ ವಲಸಿಗರಿಂದ ಯುರೋಪಿಯನ್ ದೇಶಗಳ ವಿನಾಶ; ಯುಕೆ ಪ್ರಧಾನಿ ಸುನಕ್ ಎಚ್ಚರಿಕೆ - ನಿರಾಶ್ರಿತರ ನಿಯಮ

ಅಕ್ರಮ ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ಜಾಗತಿಕ ನಿರಾಶ್ರಿತರ ನಿಯಮಗಳಲ್ಲಿ ಬದಲಾವಣೆ ಅಗತ್ಯ ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.

Migration threatens to 'overwhelm' Europe nations: Rishi Sunak

author img

By ETV Bharat Karnataka Team

Published : Dec 17, 2023, 12:28 PM IST

ಲಂಡನ್ : ಅಕ್ರಮ ವಲಸಿಗರನ್ನು ಉದ್ದೇಶಪೂರ್ವಕವಾಗಿ ತಮ್ಮ ದೇಶದ ಗಡಿಗಳಿಗೆ ನುಗ್ಗಿಸುವ ಮೂಲಕ ಶತ್ರು ದೇಶಗಳು ತಮ್ಮ ದೇಶದ ಸಮಾಜದಲ್ಲಿ ಅಸ್ಥಿರತೆ ಮೂಡಿಸಲು ಪ್ರಯತ್ನಿಸುತ್ತಿವೆ ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಅಕ್ರಮ ವಲಸೆಯ ವಿರುದ್ಧ ಪ್ರಬಲ ಧ್ವನಿ ಎತ್ತಿರುವ ಸುನಕ್, ಈ ಸಮಸ್ಯೆಯ ಪರಿಹಾರಕ್ಕಾಗಿ ತ್ವರಿತ ಕ್ರಮ ತೆಗೆದುಕೊಳ್ಳದಿದ್ದರೆ ಹೆಚ್ಚುತ್ತಿರುವ ವಲಸಿಗರ ಸಂಖ್ಯೆ ಯುರೋಪಿಯನ್ ದೇಶಗಳನ್ನು ವಿನಾಶದಂಚಿಗೆ ತರಬಹುದು ಎಂದು ಎಚ್ಚರಿಸಿದ್ದಾರೆ ಎಂದು ದಿ ಈವಿನಿಂಗ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

ಇಟಲಿಯ ಇಟಾಲಿಯನ್ ಕನ್ಸರ್ವೇಟಿವ್ಸ್ ಮತ್ತು ಬಲಪಂಥೀಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಸುನಕ್, "ಕ್ರಿಮಿನಲ್ ಗ್ಯಾಂಗ್​ಗಳು ನಮ್ಮ ಮಾನವೀಯತೆಯನ್ನು ದುರುಪಯೋಗಪಡಿಸಿಕೊಳ್ಳಲು ಅಡ್ಡದಾರಿ ಹಿಡಿಯುತ್ತಿವೆ ಮತ್ತು ಅಕ್ರಮ ವಲಸಿಗರನ್ನು ದೋಣಿಗಳ ಮೂಲಕ ತಮ್ಮ ಗಡಿಗಳಿಗೆ ತಲುಪಿಸುವ ಪ್ರಯತ್ನದಲ್ಲಿ ಆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ" ಎಂದು ಹೇಳಿದರು.

"ನಾವು ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳದಿದ್ದರೆ ಅಕ್ರಮ ವಲಸಿಗರ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಇದು ನಮ್ಮ ದೇಶಗಳ ಮೇಲೆ ವಿಪರೀತ ಹೊರೆಯನ್ನುಂಟು ಮಾಡುತ್ತದೆ ಮತ್ತು ಇದರಿಂದ ನಿಜವಾಗಿಯೂ ಸಹಾಯದ ಅಗತ್ಯವಿರುವವರಿಗೆ ನಾವು ಸಹಾಯ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಲಿದೆ" ಎಂದು ಸುನಕ್ ಕಳವಳ ವ್ಯಕ್ತಪಡಿಸಿದರು.

ಅಕ್ರಮ ವಲಸೆಯನ್ನು ನಿಭಾಯಿಸಲು ಜಾಗತಿಕ ನಿರಾಶ್ರಿತರ ನಿಯಮಗಳಲ್ಲಿ ಬದಲಾವಣೆ ಮಾಡುವುದು ಇಂದಿನ ಅಗತ್ಯವಾಗಿದೆ. ನಾವು ಈಗ ಈ ಸಮಸ್ಯೆಯನ್ನು ಪರಿಹರಿಸದಿದ್ದರೆ, ದೋಣಿಗಳು ಬರುತ್ತಲೇ ಇರುತ್ತವೆ ಮತ್ತು ಸಮುದ್ರದಲ್ಲಿ ಮುಳುಗಿ ಜನ ಸಾಯುತ್ತಲೇ ಇರುತ್ತಾರೆ ಎಂದು ಅವರು ನುಡಿದರು. ಕಳೆದ ವಾರ ರುವಾಂಡಾ ಮಸೂದೆಯ ಬಗ್ಗೆ ತಮ್ಮ ಸಂಸದರ ಬಂಡಾಯದಿಂದ ಸ್ವಲ್ಪದರಲ್ಲೇ ಪಾರಾದ ನಂತರ ಸುನಕ್ ಅವರ ಈ ಹೇಳಿಕೆಗಳು ಮಹತ್ವ ಪಡೆದಿವೆ.

ಅಕ್ರಮ ವಲಸಿಗರನ್ನು ಹೊತ್ತು ದೇಶದ ಗಡಿಗಳತ್ತ ಬರುವ ದೋಣಿಗಳನ್ನು ತಡೆದು ವಾಪಸ್ ಕಳುಹಿಸುವುದು ರುವಾಂಡಾ ಮಸೂದೆಯ ಕೇಂದ್ರಬಿಂದುವಾಗಿದೆ. ವಲಸಿಗರ ದೋಣಿಗಳನ್ನು ತಡೆಯುವುದು ಸುನಕ್ ಈ ವರ್ಷದ ಆರಂಭದಲ್ಲಿ ಘೋಷಿಸಿದ ತಮ್ಮ ಆಡಳಿತದ ಐದು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಯುಕೆ ಸಂಸತ್ತಿನಲ್ಲಿ ಪರಿಚಯಿಸಲಾದ ಅತ್ಯಂತ ಕಠಿಣ ವಲಸೆ ಶಾಸನಗಳಲ್ಲಿ ಒಂದಾದ ಈ ಮಸೂದೆಯು ರಾಜಮನೆತದ ಒಪ್ಪಿಗೆ ಪಡೆದ ನಂತರ, ರುವಾಂಡಾದ ಅಕ್ರಮ ವಲಸಿಗರನ್ನು ಪತ್ತೆ ಮಾಡುವ ಮತ್ತು ಅವರನ್ನು ವಿಮಾನಗಳ ಮೂಲಕ ವಾಪಸ್ ಕಳುಹಿಸುವ ಪ್ರಕ್ರಿಯೆಗೆ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ : ಹಮಾಸ್ ನಾಯಕ ಸಿನ್ವರ್ ಗಾಝಾದಲ್ಲಿ ಯಾರಿಗೂ ಇಷ್ಟವಾಗದ ವ್ಯಕ್ತಿ; ಮಾಜಿ ಸಚಿವರ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.