ETV Bharat / international

ದೇಶಕ್ಕಾಗಿ ಹಗಲಿರುಳು ಶ್ರಮಿಸುವೆ: ಬ್ರಿಟನ್​ ನೂತನ ಪ್ರಧಾನಿ ರಿಷಿ ಸುನಕ್​ ವಾಗ್ದಾನ

author img

By

Published : Oct 24, 2022, 10:36 PM IST

ಇಂಗ್ಲೆಂಡ್​ ಪ್ರಧಾನಿಯಾಗಿ ನಿಯೋಜಿತರಾದ ರಿಷಿ ಸುನಕ್​ ಕನ್ಸರ್​ವೇಟಿವ್​ ಬೆಂಬಲಿಗ ಸಂಸದರಿಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೇ, ದೇಶದ ಸವಾಲುಗಳನ್ನು ಎದುರಿಸಲು ಹಗಲಿರುಲು ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದರು.

designated-uk-pm-rishi-sunak-first-speech
ಬ್ರಿಟನ್​ ನೂತನ ಪ್ರಧಾನಿ ರಿಷಿ ಸುನಕ್​ ವಾಗ್ದಾನ

ಲಂಡನ್(ಇಂಗ್ಲೆಂಡ್​): ತೀವ್ರ ಆರ್ಥಿಕ ಕುಸಿತ ಅನುಭವಿಸುತ್ತಿರುವ, ಒಂದು ಕಾಲದಲ್ಲಿ 'ಸೂರ್ಯ ಮುಳುಗದ ನಾಡು' ಎಂದೇ ಕರೆಯಲ್ಪಡುತ್ತಿದ್ದ ಬ್ರಿಟನ್‌ನ 57ನೇ ಪ್ರಧಾನಿಯಾಗಿ ನಿಯೋಜಿತರಾದ ಭಾರತೀಯ ಸಂಜಾತ ರಿಷಿ ಸುನಕ್​ ದೇಶಕ್ಕಾಗಿ ಹಗಲಿರುಳು ಶ್ರಮಿಸುವುದಾಗಿ ಇಂದು ವಾಗ್ದಾನ ಮಾಡಿದರು.

ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಕನ್ಸರ್​ವೇಟಿವ್​ ಪಕ್ಷದ ಕೇಂದ್ರ ಕಚೇರಿಗೆ ಆಗಮಿಸಿದ ಅವರು ಬೆಂಬಲಿಸಿದ ಎಲ್ಲ ಸಂಸದರನ್ನುದ್ದೇಶಿಸಿ ಮಾತನಾಡುತ್ತಾ, ಜನರನ್ನು ತಲುಪಲು ದಿನವಿಡೀ ಕೆಲಸ ಮಾಡುವೆ. ಸಮಗ್ರತೆ ಮತ್ತು ನಮ್ರತೆಯಿಂದ ದೇಶಕ್ಕಾಗಿ ಸೇವೆ ಸಲ್ಲಿಸುವೆ ಎಂದರು.

ಈಚೆಗೆ ಪ್ರಧಾನಿ ಹುದ್ದೆ ತೊರೆದ ಲಿಜ್​ ಟ್ರಸ್​ ಅವರನ್ನು "ಗೌರವಯುತ ರಾಜಕಾರಣಿ" ಎಂದು ಹೊಗಳುವ ಮೂಲಕ ರಿಷಿ ಸುನಕ್​ ಭಾಷಣ ಆರಂಭಿಸಿದರು. ದೇಶ ಆಂತರಿಕ ಮತ್ತು ಬಾಹ್ಯವಾಗಿ ಬಿಕ್ಕಟ್ಟು ಎದುರಿಸುತ್ತಿದ್ದು, ಅದನ್ನು ಸರ್ವರೂ ಜೊತೆಗೂಡಿ ಎದುರಿಸೋಣ ಎಂದು ಹೇಳಿದರು.

ನನ್ನನ್ನು ಕನ್ಸರ್​ವೇಟಿವ್​ ಪಕ್ಷದ ನಾಯಕನನ್ನಾಗಿ ಒಪ್ಪಿಕೊಂಡ ನನ್ನೆಲ್ಲಾ ಸಹೋದ್ಯೋಗಿಗಳಿಗೆ ಧನ್ಯವಾದ. ಪ್ರಧಾನಿಯಾಗಿ ನಿಯೋಜಿಸಿದ ಪ್ರೀತಿಯ ದೇಶಕ್ಕೆ ನನ್ನಿಂದಾಗುವ ಎಲ್ಲ ಕೆಲಸಗಳನ್ನು ಮಾಡುವೆ. ಋಣಿಯಾಗಿರುವ ದೇಶಕ್ಕೆ ಮರಳಿ ನೀಡಲು ಸಾಧ್ಯವಾಗುವ ಎಲ್ಲ ಪ್ರಯತ್ನ ಮಾಡುವೆ ಎಂದರು.

ಸಬಲ ದೇಶದಲ್ಲಿ ಆರ್ಥಿಕ ಹೊಡೆತ: ಇಂಗ್ಲೆಂಡ್​ನ ಆರ್ಥಿಕ ಸವಾಲುಗಳ ಬಗ್ಗೆ ಮಾತನಾಡಿದ ರಿಷಿ ಸುನಕ್​, ಬ್ರಿಟನ್​ ಒಂದು ಶ್ರೇಷ್ಠ ದೇಶವಾಗಿದೆ. ಆದರೀಗ ಅದು ಗಹನವಾದ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ನಮಗೀಗ ಸ್ಥಿರತೆ ಮತ್ತು ಏಕತೆಯ ಅಗತ್ಯವಿದೆ. ಪಕ್ಷ ಮತ್ತು ದೇಶವನ್ನು ಒಟ್ಟಿಗೆ ನಡೆಸಿಕೊಂಡು ಹೋಗುವುದು ನನ್ನ ಆದ್ಯತೆಯಾಗಿದೆ. ಇದು ನಮಗಿರುವ ಏಕೈಕ ಹಾದಿಯಾಗಿದೆ. ಉತ್ತಮ ಭವಿಷ್ಯಕ್ಕಾಗಿ ಸವಾಲುಗಳನ್ನು ಜಯಿಸಬೇಕಿದೆ ಎಂದು ಹೇಳಿದರು.

ತಕ್ಷಣಕ್ಕೆ ಸಾರ್ವತ್ರಿಕ ಚುನಾವಣೆ ನಡೆಸುವುದನ್ನು ತಳ್ಳಿ ಹಾಕಿದ ರಿಷಿ ಸುನಕ್​, ಈಗಿರುವ ಸ್ಥಿತಿಗೆ ದೇಶ ಮತ್ತು ಪಕ್ಷ ಒಗ್ಗಟ್ಟಾಗಬೇಕಿದೆ. ಇಲ್ಲವಾದಲ್ಲಿ ನಾಶಖಂಡಿತ ಎಂದು ಎಚ್ಚರಿಕೆ ನೀಡಿದರು.

ಪ್ರಧಾನಿಯಾಗಿ ನಿಯೋಜಿತರಾದ ರಿಷಿ ಸುನಕ್​ರ ಆಯ್ಕೆಯನ್ನು ವಿರೋಧ ಪಕ್ಷ ಲೇಬರ್​ ಪಾರ್ಟಿ ಟೀಕಿಸಿದೆ. ಸುನಕ್​ ಜನಮತವಿಲ್ಲದೇ ಆಯ್ಕೆಯಾದ ಮತ್ತೊಬ್ಬ ಪ್ರಧಾನಿಯಾಗಿದ್ದಾರೆ ಎಂದಿದೆ.

  • Warmest congratulations @RishiSunak! As you become UK PM, I look forward to working closely together on global issues, and implementing Roadmap 2030. Special Diwali wishes to the 'living bridge' of UK Indians, as we transform our historic ties into a modern partnership.

    — Narendra Modi (@narendramodi) October 24, 2022 " class="align-text-top noRightClick twitterSection" data=" ">

ಅಭಿನಂದಿಸಿದ ಪ್ರಧಾನಿ ಮೋದಿ: ಇಂಗ್ಲೆಂಡ್​ ಪ್ರಧಾನಿಯಾಗಿ ಆಯ್ಕೆಯಾದ ಭಾರತೀಯ ಸಂಜಾತ ರಿಷಿ ಸುನಕ್​ರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಭಾರತ ಮತ್ತು ಇಂಗ್ಲೆಂಡ್​ ನಡುವಣ ಜೀವಂತ ಸೇತುವೆ ಎಂದು ಬಣ್ಣಿಸಿದ್ದಾರೆ.

ಬ್ರಿಟನ್​ ಪ್ರಧಾನಿಯಾದ ನಿಮಗೆ ಅಭಿನಂದನೆ. ಜಾಗತಿಕ ಸಮಸ್ಯೆಗಳ ಕುರಿತು ನಿಮ್ಮ ಜೊತೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಅದರಲ್ಲೂ 2030 ರ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲು ಕಾತುರನಾಗಿದ್ದೇನೆ. ಐತಿಹಾಸಿಕ ಸಂಬಂಧವನ್ನು ಆಧುನಿಕ ಪಾಲುದಾರಿಕೆಯಲ್ಲಿ ಮುಂದುವರಿಸೋಣ. ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಬ್ರಿಟನ್​ಗೆ ಭಾರತೀಯ ಅಳಿಯ ಪ್ರಧಾನಿ.. ರಿಷಿ ಸುನಕ್​ ನೂತನ ಸಾರಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.