ETV Bharat / international

ಪಾಕ್ ಪದಚ್ಯುತ ಪ್ರಧಾನಿ ಇಮ್ರಾನ್ ದೇಶ ತೊರೆಯದಂತೆ ನಿರ್ಬಂಧ - ತೆಹ್ರೀಕ್ ಎ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ದೇಶ ಬಿಟ್ಟು ಹೊರ ಹೋಗದಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಎಕ್ಸಿಟ್​ ಕಂಟ್ರೋಲ್ ಲಿಸ್ಟ್​ಗೆ ಅವರ ಹೆಸರನ್ನು ಸೇರಿಸಲಾಗಿದೆ.

Imran's name added to Exit Control List to prevent him from going abroad

author img

By

Published : May 29, 2023, 7:12 PM IST

ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ದೇಶ ತೊರೆಯದಂತೆ ನಿರ್ಬಂಧ ವಿಧಿಸಲಾಗಿದೆ. 190 ಮಿಲಿಯನ್ ಪೌಂಡ್​ ಮೌಲ್ಯದ ಸೆಟ್ಲಮೆಂಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಅವರ ಹೆಸರನ್ನು ಎಕ್ಸಿಟ್​ ಕಂಟ್ರೋಲ್ ಲಿಸ್ಟ್​ಗೆ (ECL) ಸೇರಿಸಲಾಗಿದೆ. ಕಳೆದ ವರ್ಷ ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಂಡಿದ್ದ ಮಾಜಿ ಪ್ರಧಾನಿ ಹಾಗೂ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಬ್ರಿಟನ್​ನ ರಾಷ್ಟ್ರೀಯ ಅಪರಾಧ ಸಂಸ್ಥೆ (NCA) ಯಿಂದ ಹಲವಾರು ಮಿಲಿಯನ್ ಪೌಂಡ್‌ಗಳ ವರ್ಗಾವಣೆಗೆ ಸಂಬಂಧಿಸಿದ 190 ಮಿಲಿಯನ್ ಪೌಂಡ್ ಇತ್ಯರ್ಥ ಪ್ರಕರಣದಲ್ಲಿ ಅವರ ಪತ್ನಿ ಬುಶ್ರಾ ಬೀಬಿ ಕೂಡ ಆರೋಪಿಯಾಗಿದ್ದಾರೆ.

ಇದೇ ಪ್ರಕರಣದಲ್ಲಿ ಈ ತಿಂಗಳ ಆರಂಭದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ (IHC) ಆವರಣದಿಂದ ರೇಂಜರ್‌ಗಳು ಖಾನ್ ಅವರನ್ನು ಬಂಧಿಸಿದ್ದರು. ಇದರ ನಂತರ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. ರಾವಲ್ಪಿಂಡಿಯ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್‌ಎಬಿ) ಶಿಫಾರಸಿನ ಮೇರೆಗೆ, ಸುತ್ತೋಲೆ ಸಾರಾಂಶಕ್ಕೆ ಫೆಡರಲ್ ಕ್ಯಾಬಿನೆಟ್ ಅನುಮೋದನೆಯ ನಂತರ ಖಾನ್ ಅವರ ಹೆಸರನ್ನು ನೋ ಫ್ಲೈ ಲಿಸ್ಟ್‌ನಲ್ಲಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಮ್ರಾನ್ ಅವರ ಪತ್ನಿಯ ಹೆಸರನ್ನು ಇಸಿಎಲ್​ ಲಿಸ್ಟ್​ನಲ್ಲಿ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಘಟನೆಯೊಂದು ಈ ಬಗ್ಗೆ ಆಂತರಿಕ ಸುರಕ್ಷತಾ ಸಚಿವಾಲಯಕ್ಕೆ ಪತ್ರ ಬರೆಯಲಿದೆ. ಮೇ 9 ರಂದು ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಫೆಡರಲ್ ಇನ್ವೆಸ್ಟಿಗೇಶನ್ ಅಥಾರಿಟಿ (ಎಫ್‌ಐಎ)ಯ ಆದೇಶದಂತೆ 600 ಕ್ಕೂ ಹೆಚ್ಚು ಪಿಟಿಐ ನಾಯಕರು ಮತ್ತು ಮಾಜಿ ಅಸೆಂಬ್ಲಿ ಸದಸ್ಯರೊಂದಿಗೆ ಖಾನ್ ಮತ್ತು ಬುಶ್ರಾ ಬೀಬಿಯ ಹೆಸರನ್ನು ನೊ-ಫ್ಲೈ ಲಿಸ್ಟ್​ಗೆ ಸೇರಿಸಲಾಗಿದೆ ಎಂಬುದು ಗಮನಾರ್ಹ.

ಪಾಕಿಸ್ತಾನದ ಆಡಳಿತಾರೂಢ ಒಕ್ಕೂಟವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ರಾಜಕಾರಣಿಗಳೊಂದಿಗೆ ಮಾತುಕತೆ ನಡೆಸಬಹುದೇ ಹೊರತು ಭಯೋತ್ಪಾದಕರೊಂದಿಗೆ ಅಲ್ಲ ಎಂದು ಹೇಳಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಈಗ ಸ್ವತಃ ರಾಷ್ಟ್ರೀಯ ಸಮನ್ವಯ ಸುಗ್ರೀವಾಜ್ಞೆಯನ್ನು (ಎನ್‌ಆರ್‌ಒ) ಬಯಸುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ ಎಂದು ಮೂಲಗಳು ಹೇಳಿವೆ.

ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವ ವಿಷಯದಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸುವ ನಿಟ್ಟಿನಲ್ಲಿ ಇಮ್ರಾನ್ ಖಾನ್ 7 ಜನರ ತಂಡವೊಂದನ್ನು ರಚಿಸಿದ್ದರು. ಆದರೆ ಸರ್ಕಾರ ಅವರೊಂದಿಗೆ ಯಾವುದೇ ಮಾತುಕತೆಗೆ ಒಲವು ತೋರಿಲ್ಲ. ಮೇ 9 ರಂದು ನಡೆದ ತೀವ್ರ ಹಿಂಸಾತ್ಮಕ ಪ್ರತಿಭಟನೆಗಳ ನಂತರ ಪಾಕಿಸ್ತಾನ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಮೇಲೆ ಸರ್ಕಾರ ದಮನಕಾರಿ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ. ಇದರ ನಂತರ ಪ್ರತಿದಿನ ಪಕ್ಷದ ಹಲವಾರು ನಾಯಕರು ಪಕ್ಷ ತೊರೆಯುತ್ತಿದ್ದಾರೆ.

ಇದನ್ನೂ ಓದಿ : ಸಿರಿಯಾ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ; 2023 ರಿಂದ 17 ಬಾರಿ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.