ETV Bharat / international

ರೆಸ್ಟೋರೆಂಟ್​​ನಲ್ಲಿ ಊಟ ಮಾಡುತ್ತಿರುವವರ ಮೇಲೆ ಕೊಡಲಿಯಿಂದ ದಾಳಿ, ನಾಲ್ವರಿಗೆ ಗಾಯ

ನ್ಯೂಜಿಲ್ಯಾಂಡ್​​ನಲ್ಲಿರುವ ಚೀನಾ ರೆಸ್ಟೋರೆಂಟ್​​ಗಳ ಮೇಲೆ ವ್ಯಕ್ತಿಯೊಬ್ಬ ಕೊಡಲಿಯಿಂದ ದಾಳಿ ನಡೆಸಿದ್ದು, ನಾಲ್ವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

axe attacks diners at 3 New Zealand restaurants  4 wounded after man  Four people were hospitalized  ಊಟ ಮಾಡುತ್ತಿರುವವರ ಮೇಲೆ ಕೊಡಲಿಯಿಂದ ದಾಳಿ  ನಾಲ್ವರಿಗೆ ಗಾಯ  ಚೀನಾ ರೆಸ್ಟೋರೆಂಟ್​ಗಳಲ್ಲಿ ಊಟ  ರೆಸ್ಟೋರೆಂಟ್​​ಗಳ ಮೇಲೆ ವ್ಯಕ್ತಿಯೊಬ್ಬ ಕೊಡಲಿಯಿಂದ ದಾಳಿ  ನಾಲ್ವರು ಗಾಯಗೊಂಡಿರುವುದಾಗಿ ವರದಿ  ರಾತ್ರಿ ಭೋಜನ ಮಾಡುತ್ತಿದ್ದವರ ಮೇಲೆ  ದಾಳಿಯಲ್ಲಿ ನಾಲ್ವರು ಗಂಭೀರವಾಗಿ ಗಾಯ  ಅಲ್ಬನಿಯ ಉತ್ತರ ಆಕ್ಲೆಂಡ್ ಉಪನಗರ  ಮೂರು ಚೀನಾ ರೆಸ್ಟೋರೆಂಟ್​ಗಳಿಗೆ ನುಗ್ಗಿ ದಾಳಿ
ಕೊಡಲಿಯಿಂದ ದಾಳಿ
author img

By

Published : Jun 20, 2023, 7:55 AM IST

ವೆಲ್ಲಿಂಗ್ಟನ್, ನ್ಯೂಜಿಲ್ಯಾಂಡ್​​: ರೆಸ್ಟೋರೆಂಟ್​ಗಳಲ್ಲಿ ರಾತ್ರಿ ಭೋಜನ ಮಾಡುತ್ತಿದ್ದವರ ಮೇಲೆ ವ್ಯಕ್ತಿಯೊಬ್ಬ ಕೊಡಲಿಯಿಂದ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ವರು ಗಾಯಗೊಂಡಿರುವುದಾಗಿ ಅಲ್ಲಿನ ಪೊಲೀಸ್​ ಇಲಾಖೆ ಖಚಿತ ಪಡಿಸಿದೆ.

ಏನಿದು ಘಟನೆ?: ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಮೂರು ನೆರೆಯ ಚೀನಾದ ರೆಸ್ಟೋರೆಂಟ್‌ಗಳಲ್ಲಿ ರಾತ್ರಿ ಊಟ ಸೇವಿಸುತ್ತಿದ್ದವರ ಮೇಲೆ ಭೀಕರವಾಗಿ ದಾಳಿ ಮಾಡಿದ್ದಾನೆ. ಈ ದಾಳಿಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಲ್ಬನಿಯ ಉತ್ತರ ಆಕ್ಲೆಂಡ್ ಉಪನಗರದಲ್ಲಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ 24 ವರ್ಷದ ಶಂಕಿತ ಆರೋಪಿ ಮೂರು ಚೀನಾ ರೆಸ್ಟೋರೆಂಟ್​ಗಳಿಗೆ ನುಗ್ಗಿ ದಾಳಿ ಆರಂಭಿಸಿದ್ದನು. ಈ ಬಗ್ಗೆ ಮಾಹಿತಿ ಬಂದಾಕ್ಷಣ ನಾವು ಘಟನಾ ಸ್ಥಳಕ್ಕೆ ತೆರಳಿ ಆರೋಪಿ ಬಂಧಿಸಿದ್ದೇವೆ. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಗಾಯಗೊಂಡವರಲ್ಲಿ ಒಬ್ಬರು ಚೇತರಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಟಾರ್ಜ್​ ಮಾಡಲಾಗಿದೆ ಮತ್ತು ಮೂವರ ಸ್ಥಿತಿ ಸ್ಥಿರವಾಗಿದ್ದು, ಅವರ ಮೇಲೆ ಗಮನ ಹರಿಸಲಾಗಿದೆ ಎಂದು ನಾರ್ತ್ ಶೋರ್ ಮತ್ತು ಆಕ್ಲೆಂಡ್ ಆಸ್ಪತ್ರೆಯ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.

ಝಾಂಗ್ಲಿಯಾಂಗ್ ಮಾಲ್ಟಾಂಗ್, ಯುಸ್ ಡಂಪ್ಲಿಂಗ್ ಕಿಚನ್ ಮತ್ತು ಮಾಯಾ ಹಾಟ್‌ಪಾಟ್ ಎಂಬ ಮೂರು ಚೈನೀಸ್ ರೆಸ್ಟೋರೆಂಟ್‌ಗಳಿಗೆ ತೆರಳಿದ ವ್ಯಕ್ತಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಕೊಡಲಿಯಿಂದ ಯಾದೃಚ್ಛಿಕವಾಗಿ ಜನರ ಮೇಲೆ ದಾಳಿ ಮಾಡಲು ಆರಂಭಿಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರತ್ಯಕ್ಷದರ್ಶಿಯೊಬ್ಬರು ಸ್ಥಳೀಯ ಸುದ್ದಿ ಸಂಸ್ಥೆಗೆ ನೀಡುವ ಮಾಹಿತಿ ಪ್ರಕಾರ, ಮಾಯಾ ಹಾಟ್‌ಪಾಟ್‌ನಲ್ಲಿ ಸ್ನೇಹಿತನೊಂದಿಗೆ ಊಟ ಮಾಡುತ್ತಿದ್ದಾಗ ಕೊಡಲಿಯೊಂದಿಗೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಬಳಿಗೆ ಬಂದು ದಾಳಿ ಮಾಡಿದನು. ಬಳಿಕ ರೆಸ್ಟೋರೆಂಟ್​ ಕೆಲಸಗಾರರು ಅವನನ್ನು ಹಿಡಿಯಲು ಮುಂದಾದಾಗ ಸ್ಥಳದಿಂದ ತಪ್ಪಿಸಿಕೊಂಡು ಬೇರೆ ರೆಸ್ಟೋರೆಂಟ್​ಗೆ ನುಗ್ಗಿದ್ದನು. ಬಳಿಕ ಅಲ್ಲಿಯೂ ದಾಳಿ ಮಾಡಿ ಪರಾರಿಯಾದನು ಎಂದು ಹೇಳಿದರು.

ನ್ಯೂಜಿಲ್ಯಾಂಡ್​ ಪೊಲೀಸರು 24 ವರ್ಷದ ಆರೋಪಿಯನ್ನು ಬಂಧಿಸಿದ ಬಳಿಕ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು ಎಂದು ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: Sudan crisis: ಸುಡಾನ್​ನಲ್ಲಿ ಮತ್ತೊಂದು ಹಂತದ ಕದನ ವಿರಾಮ; ಎಲ್ಲೆಡೆ ಭಯ ಮಿಶ್ರಿತ ಶಾಂತಿ

ಅಮೆರಿಕದಾದ್ಯಂತ ವಾರಾಂತ್ಯದಲ್ಲಿ ನಡೆದ ಹಿಂಸಾಚಾರ ಮತ್ತು ಸಾಮೂಹಿಕ ಗುಂಡಿನ ದಾಳಿಯಲ್ಲಿ (Weekend Shootings) ಪೆನ್ಸಿಲ್ವೇನಿಯಾ ರಾಜ್ಯದ ಸೈನಿಕ ಸೇರಿದಂತೆ ಕನಿಷ್ಠ ಆರು ಜನರು ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿರುವ ಘಟನೆ ಬಗ್ಗೆ ಭಾನುವಾರ ವರದಿಯಾಗಿದೆ.

ಉಪನಗರ ಚಿಕಾಗೋ, ವಾಷಿಂಗ್ಟನ್ ಸ್ಟೇಟ್, ಪೆನ್ಸಿಲ್ವೇನಿಯಾ, ಸೇಂಟ್ ಲೂಯಿಸ್, ದಕ್ಷಿಣ ಕ್ಯಾಲಿಫೋರ್ನಿಯಾ ಮತ್ತು ಬಾಲ್ಟಿಮೋರ್‌ನಲ್ಲಿನ ಕಳೆದ ಹಲವಾರು ವರ್ಷಗಳಿಂದ ಗುಂಡಿನ ದಾಳಿಗಳು, ನರಹತ್ಯೆಗಳು ಮತ್ತು ಇತರ ಹಿಂಸಾಚಾರಗಳ ಹೆಚ್ಚಾಗಿ ಕಂಡು ಬರುತ್ತಿವೆ. ಇದು ಕೊರನಾ ವೈರಸ್​ ಸಾಂಕ್ರಾಮಿಕ ಸಮಯದಿಂದ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ತಜ್ಞರ ಮಾತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.