ETV Bharat / international

ಇರಾಕ್​ನಲ್ಲಿ ಮಾರಾಟವಾಗುತ್ತಿರುವ ಭಾರತದ ಸಿರಪ್​ನಲ್ಲಿ ವಿಷಕಾರಿ ರಾಸಾಯನಿಕ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಭಾರತದಿಂದ ಉತ್ಪಾದಿತವಾಗುತ್ತಿರುವ ಕೋಲ್ಡ್​​ ಸಿರಪ್​ ಎಂಬು ಔಷಧದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ.

contaminated chemical in Indian-made syrup being sold in Iraq; World Health Organization

author img

By

Published : Aug 8, 2023, 10:33 AM IST

ನವದೆಹಲಿ: ಇರಾಕ್​ನಲ್ಲಿ ಕಳೆದ ತಿಂಗಳು ಮಕ್ಕಳ ಗಂಭೀರ ಆರೋಗ್ಯ ಸ್ಥಿತಿಗೆ ಕಾರಣವಾಗಿದ್ದ ಕೆಮ್ಮಿನ ಸಿರಪ್​ನಲ್ಲಿ ವಿಷಕಾರಿ ರಾಸಾಯನಿಕ ಅಂಶ ಇರುವುದು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಎಚ್ಚರಿಕೆ ನೀಡಿದೆ.

ಇದನ್ನು ಭಾರತದ ಮಹಾರಾಷ್ಟ್ರದ ಫಾರ್ಮಾಸ್ಯುಟಿಕಲ್​ ಕಂಪನಿ ಈ ಔಷಧ ಉತ್ಪಾದಿಸಿದೆ. ಸಾಮಾನ್ಯ ಶೀತಕ್ಕೆ ನೀಡಲಾಗುವ ಈ ಔಷಧವನ್ನು ಕೋಲ್ಡ್​ ಔಟ್​ ಎಂಬ ಹೆಸರಿನಿಂದ ಭಾರತದಲ್ಲಿ ತಯಾರಿಸಲಾಗಿದ್ದು, ಇರಾಕ್​​ನಲ್ಲಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇದರಲ್ಲಿ ವಿಷಕಾರಿ ರಾಸಾಯನಿಕ ಪತ್ತೆಯಾಗಿದೆ ಎಂದು ಕಳೆದ ತಿಂಗಳು ವರದಿ ತಿಳಿಸಿತು. ಇದರಲ್ಲಿ ಎಥಿಲೀನ್ ಗ್ಲೈಕಾಲ್, ವಿಷಕಾರಿ ಕೈಗಾರಿಕಾ ದ್ರವಣ ಪತ್ತೆಯಾಗಿದೆ ಎಂದು ಪ್ರಯೋಗಾಲಯದ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಈ ಔಷಧ ಸೇವಿಸಿದ ಮಕ್ಕಳಲ್ಲಿ ಅತಿಸಾರ, ಹೊಟ್ಟೆ ನೋವು, ವಾಂತಿ, ತಲೆನೋವು ಸೇರಿದಂತೆ ಹಲವು ಲಕ್ಷಣ ಕಾಣಿಸಿಕೊಂಡು ಅದು ಸಾವಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ರಿಪಬ್ಲಿಕ್ ಆಫ್ ಇರಾಕ್‌ನಲ್ಲಿ ಪತ್ತೆಯಾದ ಕೆಳದರ್ಜೆಯ (ಕಲುಷಿತ) ಕೋಲ್ಡ್ ಔಟ್ ಸಿರಪ್ (ಪ್ಯಾರೆಸಿಟಮಾಲ್ ಮತ್ತು ಕ್ಲೋರ್‌ಫೆನಿರಮೈನ್ ಮಲೇಟ್) ಉಲ್ಲೇಖಿಸಿ ಡಬ್ಲೂಎಚ್​ಒಗೆ ಜುಲೈ 10, 2023ರಂದು ಥರ್ಟ್​ ಪಾರ್ಟಿ ವರದಿ ಮಾಡಿದೆ ಎಂದು ಗ್ಲೋಬಲ್​ ಹೆಲ್ತ್​ ಏಜೆನ್ಸಿ ವರದಿಯಲ್ಲಿ ಹೇಳಿದೆ.

ಇರಾಕ್​ನ ಒಂದು ಸ್ಥಳದಲ್ಲಿ ಸಿಕ್ಕ ಕೋಲ್ಡ್​ ಔಟ್​ ಸಿರಾಪ್​ನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಇದನ್ನು ಪ್ರಯೋಗಾಲಯದ ವಿಶ್ಲೇಷಣೆಗೆ ಕಳುಹಿಸಲಾಗಿತ್ತು. ಈ ಸ್ಯಾಂಪಲ್​ನಲ್ಲಿ ಸ್ವೀಕಾರ್ಹವಲ್ಲದ ಮಟ್ಟದಲ್ಲಿ ಡೈಥಿಲೀನ್ ಗ್ಲೈಕಾಲ್ (ಶೇ 0.25ರಷ್ಟು) ಮತ್ತು ಎಥಿಲೀನ್ ಗ್ಲೈಕಾಲ್ (ಶೇ 2.1ರಷ್ಟು) ಕಂಡು ಬಂದಿದೆ. ಈ ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ ಅನ್ನು ನಿರ್ದಿಷ್ಟ ಮಿತಿಯಲ್ಲಿ ಅಂದರೆ ಶೇ 0.10ರಷ್ಟು ಸೇವಿಸಬಹುದಾಗಿದೆ. ಅದಕ್ಕಿಂತ ಹೆಚ್ಚಿನ ಮಟ್ಟದ ಸೇವನೆ ಅಪಾಯಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ತಿಳಿಸಿದೆ

ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ ರಾಸಾಯನಿಕಗಳ ಸೇವನೆ ಮಾನವನ ದೇಹಕ್ಕೆ ವಿಷಕಾರಿಯಾಗಿದ್ದು, ಇವು ಮಾರಾಣಾಂತಿಕವಾಗಬಹುದು ಎಂದು ಸಾಬೀತಾಗಿದೆ. ಇನ್ನು ಈ ಔಷಧಗಳ ತಯಾರಕರು ಮತ್ತು ಉತ್ಪಾದಕರು ಇಲ್ಲಿಯವರೆಗೆ ಇದರ ಸುರಕ್ಷತೆ ಮತ್ತು ಗುಣಮಟ್ಟದ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಔಷಧದಲ್ಲಿನ ಸಣ್ಣ ಪ್ರಮಾಣದ ಲೆಥಲ್​ ಸೇವನೆ ಕೂಡ ಮನುಷ್ಯರಿಗೆ ಮಾರಾಕವಾಗಿದೆ. ಕಳೆದ ವರ್ಷ ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನ್‌ನಲ್ಲಿ ಭಾರತ ಉತ್ಪಾದಿಸಿದ ಕೆಮ್ಮು ಸಿರಪ್‌ಗಳು ಸಾಮೂಹಿಕ ಮಕ್ಕಳ ಸಾವಿಗೆ ಕಾರಣವಾಗಿತ್ತು.

ಒಂದು ವರ್ಷದಲ್ಲಿ ಭಾರತ ತಯಾರಿಸಿದ ಐದು ಔಷಧಗಳು ವಿಶ್ವ ಆರೋಗ್ಯ ಸಂಸ್ಥೆಯ ಪರಿಶೀಲನೆಗೆ ಒಳಪಟ್ಟಿವೆ. ಕಳೆದ ವರ್ಷ ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನ್​ನಲ್ಲಿ ಭಾರತ ಮೂಲದ ಕೆಮ್ಮಿನ ಸಿರಾಪ್​ ಸೇವನೆಯಿಂದ 66 ಜನರು ಸಾವನ್ನಪ್ಪಿದ್ದರು. ಇತ್ತೀಚಿಗೆ ಭಾರತ ತಯಾರಿಸಿದ ಕಣ್ಣಿನ ಡ್ರಾಪ್​ ಬಳಕೆಯಿಂದಾಗಿ ಮಕ್ಕಳಲ್ಲಿ ಕಣ್ಣಿನ ಸೋಂಕು ಕಾಣಿಸಿತ್ತು.

ಇದನ್ನೂ ಓದಿ: ಉಜ್ಬೇಕಿಸ್ತಾನದಲ್ಲಿ ಮಕ್ಕಳ ಸಾವು ಪ್ರಕರಣ: ಭಾರತದ ಕೆಮ್ಮಿನ ಸಿರಪ್ ಬಳಸದಂತೆ WHO ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.