ರಿಯಾದ್(ಸೌದಿ ಅರೇಬಿಯಾ): ಮದೀನಾ ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ. ಈ ಕ್ಷೇತ್ರದಲ್ಲಿ ಪಾಕಿಸ್ತಾನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಶೆಹಬಾಜ್ ಷರೀಫ್ ಮತ್ತು ಅವರ ನೇತೃತ್ವದ ನಿಯೋಗದ ವಿರುದ್ಧ ಮದೀನಾಕ್ಕೆ ಆಗಮಿಸಿದ್ದ ಯಾತ್ರಿಕರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ನಿಯೋಗವು ಮದೀನಾದ ಮಸ್ಜಿದ್ -ಎ-ನಬವಿ ಅನ್ನು ಪ್ರವೇಶಿಸಿದಾಗ ಅಲ್ಲಿದ್ದ ಯಾತ್ರಿಕರು ಚೋರ್, ಚೋರ್ (ಕಳ್ಳ, ಕಳ್ಳ) ಎಂದು ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ನಿಯೋಗವು ಸೌದಿ ಅರೇಬಿಯಾಗೆ ಮೂರು ದಿನಗಳ ಭೇಟಿ ನೀಡಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ವಿಡಿಯೋದಲ್ಲಿ, ಪಾಕಿಸ್ತಾನದ ಮಾಹಿತಿ ಸಚಿವ ಮರಿಯುಮ್ ಔರಂಗಜೇಬ್ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಶಹಜೈನ್ ಬುಗ್ತಿ ಮತ್ತು ಇತರರು ಕಾಣಿಸಿಕೊಂಡಿದ್ದಾರೆ. ಚೋರ್ ಚೋರ್ ಘೋಷಣೆ ನಂತರ ಅವರನ್ನು ಘೋಷಣೆ ಕೂಗಿದವರನ್ನು ಮದೀನಾದ ಪವಿತ್ರತೆ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
-
The Pakistani delegation surrounded by people yelling “chor chor” when they made their way to Masjid-e-Nabwi in Madina.
— The Current (@TheCurrentPK) April 28, 2022 " class="align-text-top noRightClick twitterSection" data="
PM Shehbaz Sharif is in Saudi Arabia for a three day tour. #ShehbazSharif #SaudiArabia pic.twitter.com/aRuVmOwWrH
">The Pakistani delegation surrounded by people yelling “chor chor” when they made their way to Masjid-e-Nabwi in Madina.
— The Current (@TheCurrentPK) April 28, 2022
PM Shehbaz Sharif is in Saudi Arabia for a three day tour. #ShehbazSharif #SaudiArabia pic.twitter.com/aRuVmOwWrHThe Pakistani delegation surrounded by people yelling “chor chor” when they made their way to Masjid-e-Nabwi in Madina.
— The Current (@TheCurrentPK) April 28, 2022
PM Shehbaz Sharif is in Saudi Arabia for a three day tour. #ShehbazSharif #SaudiArabia pic.twitter.com/aRuVmOwWrH
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಮಾಹಿತಿ ಸಚಿವ ಮರಿಯುಮ್ ಔರಂಗಜೇಬ್ 'ನಾನು ಈ ಪುಣ್ಯಭೂಮಿಯ ಮೇಲೆ 'ಆ ವ್ಯಕ್ತಿ'ಯ ಹೆಸರನ್ನು ಹೇಳುವುದಿಲ್ಲ. ಏಕೆಂದರೆ ನಾನು ಈ ಭೂಮಿಯನ್ನು ರಾಜಕೀಯಕ್ಕೆ ಬಳಸಲು ಬಯಸುವುದಿಲ್ಲ. ಆ ವ್ಯಕ್ತಿ ಪಾಕಿಸ್ತಾನವನ್ನು ಹಾಳು ಮಾಡಿದ್ದಾನೆ' ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಔರಂಗಜೇಬ್ ಪರೋಕ್ಷವಾಗಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಹರಿಹಾಯ್ದಿದ್ದು, ಮದೀನಾದಲ್ಲಿ ತಮ್ಮ ವಿರುದ್ಧ ಪ್ರತಿಭಟನೆಗೆ ಇಮ್ರಾನ್ ಖಾನ್ ಕಾರಣ ಎಂಬ ಅರ್ಥದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮುಸ್ಲಿಮರ ಧಾರ್ಮಿಕ ನಂಬಿಕೆಗಳನ್ನು ಗೌರವಿಸಿ: ಚೀನಾದಿಂದ ಸಾಮರಸ್ಯದ ಪಾಠ!