ETV Bharat / international

ದುಬೈನಲ್ಲಿ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿ ಪರೀಕ್ಷಿಸಿದ ಚೀನಾದ ಸಂಸ್ಥೆ

author img

By

Published : Oct 11, 2022, 6:51 PM IST

ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ಚೀನಾದ ಗುವಾಂಗ್‌ಝೌ ಮೂಲದ ಎಕ್ಸ್​​ಪೆಂಗ್ ಸಂಸ್ಥೆಯ ವಾಯುಯಾನ ಅಂಗಸಂಸ್ಥೆಯಿಂದ ಅಭಿವೃದ್ಧಿ ಪಡಿಸಲಾಗಿದೆ.

chinese-firm-tests-electric-flying-taxi-in-dubai
ದುಬೈನಲ್ಲಿ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿ ಪರೀಕ್ಷಿಸಿದ ಚೀನಾದ ಸಂಸ್ಥೆ

ದುಬೈ (ಯುಎಇ): ಚೀನಾದ ಸಂಸ್ಥೆಯೊಂದು ಸೋಮವಾರ ದುಬೈನಲ್ಲಿ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ಪರೀಕ್ಷಿಸಿದೆ. ಈ ಭವಿಷ್ಯದ ತಂತ್ರಜ್ಞಾನವು ಮುಂದೊಂದು ದಿನ ನಗರದಿಂದ ನಗರಕ್ಕೆ ಯಾವುದೇ ಸಂಚಾರ ದಟ್ಟಣೆಯೇ ಇಲ್ಲದೇ ಮಾನವರು ತೆರಳಲು ನಾಂದಿ ಹಾಡಲಿದೆ.

ಈ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಗೆ ಎಕ್ಸ್​​ಪೆಂಗ್​ ಎಕ್ಸ್​2 (XPeng X2) ಹೆಸರಿಸಲಾಗಿದೆ. ಚೀನಾದ ಗುವಾಂಗ್‌ಝೌ ಮೂಲದ ಎಕ್ಸ್​​ಪೆಂಗ್ ಸಂಸ್ಥೆಯ ವಾಯುಯಾನ ಅಂಗಸಂಸ್ಥೆಯಿಂದ ಇದನ್ನು ಅಭಿವೃದ್ಧಿ ಪಡಿಸಿದೆ.

ಸೋಮವಾರದ ಇದರ ಪ್ರಯೋಗವನ್ನು ಖಾಲಿ ಕಾಕ್‌ಪಿಟ್‌ನೊಂದಿಗೆ ನಡೆಸಲಾಗಿದೆ. ಆದರೆ, ಕಂಪನಿಯು ಜುಲೈ 2021ರಲ್ಲಿ ಮಾನವಸಹಿತ ಹಾರಾಟ ಪರೀಕ್ಷೆಯನ್ನು ನಡೆಸಿತ್ತು. ಇದು ಪ್ರಪಂಚದಾದ್ಯಂತದ ಡಜನ್​ಗಟ್ಟಲೆ ಹಾರುವ ಕಾರು ಯೋಜನೆಗಳಲ್ಲಿ ಒಂದಾಗಿದೆ. ಬೆರಳೆಣಿಕೆಯಷ್ಟು ಪ್ರಯಾಣಿಕರೊಂದಿಗೆ ಮಾತ್ರ ಯಶಸ್ವಿಯಾಗಿ ಫ್ಲೈಯಿಂಗ್ ಟ್ಯಾಕ್ಸಿಯನ್ನು ಪ್ರಯೋಗಿಸಲಾಗಿದೆ. ಆದರೆ, ಯಾವುದೇ ಸೇವೆಗೆ ಅಣಿಯಾಗಲು ಹಲವು ವರ್ಷಗಳು ಬೇಕಾಗಬಹುದು.

ಫ್ಲೈಯಿಂಗ್ ಟ್ಯಾಕ್ಸಿಯು ಇಬ್ಬರು ಪ್ರಯಾಣಿಕರನ್ನು ಸಾಗಿಸಬಲ್ಲದು. ಎಂಟು ಪ್ರೊಪೆಲ್ಲರ್ ಸೆಟ್‌ನಿಂದ ಚಾಲಿತವಾಗಿದೆ. ಇದು ಗಂಟೆಗೆ 130 ಕಿಲೋಮೀಟರ್ (80 ಮೈಲುಗಳು) ಗರಿಷ್ಠ ವೇಗವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.

ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಗಿಂತ ಭಿನ್ನವಾದ eVTOL ಅಥವಾ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ವ್ಯವಸ್ಥೆ ಇದೆ. ಇದರಿಂದ ತ್ವರಿತ ಪಾಯಿಂಟ್-ಟು-ಪಾಯಿಂಟ್ ವೈಯಕ್ತಿಕ ಪ್ರಯಾಣವನ್ನು ತಾತ್ವಿಕವಾಗಿ ನೀಡುತ್ತವೆ ಎಂದೂ ಕಂಪನಿ ತಿಳಿಸಿದೆ.

ಪೈಲಟ್​ ರಹಿತ ಕಡಿಮೆ ವಾಹನಗಳು ಮುಂದೊಂದು ದಿನ ಇಕ್ಕಟ್ಟಾದ ರಸ್ತೆ ಮಾರ್ಗಗಳ ಮೇಲೆ ಜನರನ್ನು ಸಾಗಿಸಬಹುದು. ಆದರೆ, ಈ ವಲಯವು ಇನ್ನೂ ಬ್ಯಾಟರಿ ಬಾಳಿಕೆ, ವಾಯು ಸಂಚಾರ ನಿಯಂತ್ರಣ ಮತ್ತು ಸುರಕ್ಷತೆ ಮತ್ತು ಮೂಲಸೌಕರ್ಯ ಸಮಸ್ಯೆಗಳು ಸೇರಿದಂತೆ ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ.

ಇದನ್ನೂ ಓದಿ: ಉಪಗ್ರಹ ತಯಾರಿಕೆ..ಭಾರತದತ್ತ ವಿದೇಶಿ ಕಂಪನಿಗಳ ನೋಟ.. 2025ರ ವೇಳೆಗೆ 3.2 ಶತಕೋಟಿ ಡಾಲರ್ ವ್ಯವಹಾರ​ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.