ETV Bharat / international

China & Tibet: ಟಿಬೆಟಿಯನ್ನರ ಮೇಲೆ ಚೀನಾ ಕಣ್ಗಾವಲು; ದಲೈ ಲಾಮಾರೊಂದಿಗೆ ಸಂಪರ್ಕ ಕಡಿದುಕೊಳ್ಳುವಂತೆ ಒತ್ತಡ - ರಾಜಧಾನಿ ಲಾಸಾದಲ್ಲಿ ಜನರ ವಿಚಾರಣೆ

ಚೀನಾ ಆಕ್ರಮಿತ ಟಿಬೆಟ್​ನಲ್ಲಿರುವ ಟಿಬೆಟಿಯನ್ನರ ಮೇಲೆ ಚೀನಾ ಕಣ್ಗಾವಲು ತೀವ್ರಗೊಳಿಸಿದೆ. ಟಿಬೆಟಿಯನ್ನರು ಹೊರದೇಶದ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ಅಲ್ಲಿನ ಜನರ ಮೇಲೆ ಚೀನಾ ದೌರ್ಜನ್ಯಗಳನ್ನು ಮುಂದುವರೆಸಿದೆ.

China intensifies monitoring of Tibetans

author img

By

Published : Jul 2, 2023, 6:25 PM IST

ನವದೆಹಲಿ : ಟಿಬೆಟ್‌ನಲ್ಲಿರುವ ಚೀನಾದ ಅಧಿಕಾರಿಗಳು ಟಿಬೆಟಿಯನ್ನರ ಮೇಲೆ ಕಣ್ಗಾವಲು ತೀವ್ರಗೊಳಿಸಿದ್ದಾರೆ ಮತ್ತು ಟಿಬೆಟ್‌ನ ಹೊರಗಿನವರೊಂದಿಗೆ ಸಂಪರ್ಕ ಸಾಧಿಸುವುದನ್ನು ತಡೆಯಲು ಪ್ರಾದೇಶಿಕ ರಾಜಧಾನಿ ಲಾಸಾದಲ್ಲಿ ಜನರ ವಿಚಾರಣೆಯನ್ನು ಮುಂದುವರೆಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಚೀನಾ ಸರ್ಕಾರವು ಟಿಬೆಟಿಯನ್ನರ ಮೇಲೆ ತನ್ನ ಮೇಲ್ವಿಚಾರಣೆಯನ್ನು ತೀವ್ರಗೊಳಿಸುತ್ತಿದೆ ಮತ್ತು ಲಾಸಾದಲ್ಲಿ ವಾಸಿಸುವ ಟಿಬೆಟಿಯನ್ನರು ಟಿಬೆಟ್‌ನ ಹೊರಗಿನ ಜನರನ್ನು ಸಂಪರ್ಕಿಸಿದ್ದಾರೆಯೇ ಎಂಬುದನ್ನು ತಿಳಿಯಲು ಮತ್ತು ಅಂತಹ ಸಂವಹನವನ್ನು ತಡೆಯಲು ಕಣ್ಗಾವಲು ಕ್ರಮಗಳನ್ನು ಹೆಚ್ಚಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಮಾರ್ಚ್‌ನಲ್ಲಿ ನಡೆದ ಎರಡು ಪ್ರಮುಖ ವಾರ್ಷಿಕೋತ್ಸವಗಳ ಸಮಯದಿಂದ ಚೀನಾ ಟಿಬೆಟ್​ನಲ್ಲಿ ಕಣ್ಗಾವಲು ಹೆಚ್ಚಿಸಲು ಪೊಲೀಸರನ್ನು ನಿಯೋಜಿಸಿದೆ. ಮಾರ್ಚ್​ನಲ್ಲಿ 2008 ರ ಗಲಭೆಯ 15 ನೇ ವಾರ್ಷಿಕೋತ್ಸವ ಮತ್ತು 1959 ರ ದಂಗೆಯ 64 ನೇ ವಾರ್ಷಿಕೋತ್ಸವ ಆಚರಿಸಲಾಗಿತ್ತು. ಆದರೆ ಮಾರ್ಚ್‌ನಲ್ಲಿ ಹೆಚ್ಚಿಸಲಾದ ಭದ್ರತೆಯು ಜೂನ್‌ನವರೆಗೂ ಮುಂದುವರೆದಿದೆ ಮತ್ತು ಪೊಲೀಸರು ಲಾಸಾದಲ್ಲಿನ ನಿವಾಸಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದ್ದಾರೆ. ಟಿಬೆಟ್​ನ ಜನ ವಿದೇಶದಲ್ಲಿರುವವರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆಯೇ ಎಂಬುದನ್ನು ಕಂಡುಹಿಡಿಯಲು ಅವರ ಸೆಲ್ ಫೋನ್ ಮತ್ತು ಆನ್‌ಲೈನ್ ಸಂವಹನಗಳ ಬಗ್ಗೆ ತನಿಖೆ ಮುಂದುವರೆಸಿದ್ದಾರೆ ಎಂದು ವರದಿ ತಿಳಿಸಿದೆ.

ಲಾಸಾ ನಿವಾಸಿಗಳು ಟಿಬೆಟ್‌ನ ಹೊರಗಿನ ಪತ್ರಕರ್ತರು ಅಥವಾ ಸಂಶೋಧಕರೊಂದಿಗೆ ಸಂಪರ್ಕದಲ್ಲಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಟಿಬೆಟಿಯನ್ ನಿವಾಸಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. "ಟಿಬೆಟಿಯನ್ನರು ಹೊರಗಿನ ಜನರನ್ನು ಸಂಪರ್ಕಿಸದಂತೆ ಎಚ್ಚರಿಕೆ ನೀಡಲಾಗಿದೆ ಮತ್ತು ಹಾಗೆ ಸಂಪರ್ಕ ಇಟ್ಟುಕೊಂಡಿರುವವರನ್ನು ಕರೆಸಿ ವಿಚಾರಣೆಗೆ ಒಳಪಡಿಸಲಾಗಿದೆ. ಅವರ ಸೆಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವರ ಮೇಲೆ ನಿರಂತರ ನಿಗಾ ಇಡಲಾಗಿದೆ" ಎಂದು ಮೂಲಗಳು ತಿಳಿಸಿವೆ.

"ಈ ವರ್ಷ ಈಗಾಗಲೇ ಎರಡು ಬಾರಿ ವಿಚಾರಣೆಗಾಗಿ ನನ್ನನ್ನು ಕರೆಸಲಾಗಿದೆ ಮತ್ತು ನನ್ನ ಸ್ನೇಹಿತರಲ್ಲಿ ಒಬ್ಬರು ನನ್ನನ್ನು ಎರಡನೇ ಬಾರಿಗೆ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಲಂಚ ನೀಡಬೇಕಾಯಿತು" ಎಂದು ಲಾಸಾ ನಿವಾಸಿಯೊಬ್ಬರು ಹೇಳಿದರು. "ನನ್ನ ಹೆಸರನ್ನು ಈಗ ವಿಚಾರಣೆಗೆ ಒಳಪಡಿಸಿದವರಲ್ಲಿ ಪಟ್ಟಿಮಾಡಲಾಗಿದೆ, ಆದ್ದರಿಂದ ನಾನು ಲಾಸಾದಿಂದ ಹೊರಗೆ ಪ್ರಯಾಣಿಸಬೇಕಾದರೆ ಸ್ಥಳೀಯ ಪೊಲೀಸರಿಂದ ಅನುಮತಿ ಪಡೆಯಬೇಕು." ಎಂದು ಅವರು ತಮ್ಮ ಆತಂಕ ತೋಡಿಕೊಂಡರು.

ಟಿಬೆಟ್‌ನಲ್ಲಿರುವ ಚೀನಾದ ಅಧಿಕಾರಿಗಳು ಬೌದ್ಧ ವಿಹಾರಗಳ ಮೇಲೆ ಹಲವಾರು ಬಾರಿ ದಾಳಿ ನಡೆಸಿ, ಪರಿಶೀಲನೆ ಮಾಡುತ್ತಿದ್ದಾರೆ. ಟಿಬೆಟಿಯನ್ ಬೌದ್ಧಧರ್ಮದ ಸರ್ವೋಚ್ಚ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ದಾಖಲೆಗಳಿಗೆ ಸಹಿ ಹಾಕುವಂತೆ ಬೌದ್ಧ ಸನ್ಯಾಸಿಗಳಿಗೆ ಚೀನಾ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಚೀನಾ ತೊರೆದು ಭಾರತದಲ್ಲಿ ದಶಕಗಳಿಂದ ವಾಸಿಸುತ್ತಿರುವ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರನ್ನು ಪ್ರತ್ಯೇಕತಾವಾದಿ ಎಂದು ಚೀನಾ ಪರಿಗಣಿಸುತ್ತದೆ.

ಇದನ್ನೂ ಓದಿ : ಮಾಜಿ ಪ್ರಧಾನಿ ನವಾಜ್ ಸದ್ಯ ಪಾಕಿಸ್ತಾನಕ್ಕೆ ಮರಳಲ್ಲ: ಇನ್ನೂ ಕೆಲ ತಿಂಗಳು ಲಂಡನ್​ನಲ್ಲೇ ವಾಸ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.